
ಸಿದ್ದಾಪುರ : ಸುಲಭದ ಕೆಲಸಕ್ಕೇನು ಜಗತ್ತೇ ನಿಂತಿರುತ್ತದೆ. ಆದರೆ ಸವಾಲಿನ ಕೆಲಸಕ್ಕೆ ಹೆಗಲು ಕೊಡುವವರಿಗಾಗಿ ಇತಿಹಾಸ ಕಾಯುತ್ತಿರುತ್ತದೆ! ಅನಾಥರನ್ನು ರಕ್ಷಿಸಿ ಸಲಹುವ ಕ್ಷೇತ್ರದಲ್ಲಿ ರಾಜ್ಯದಲ್ಲಿ ಬೆರಳೆಣಿಕೆಯಷ್ಟು ಜನರನ್ನು ಮಾತ್ರ ಕಾಣಬಹುದು. ಅವರಲ್ಲಿ ಗೆಳೆಯ, ನಮ್ಮ ಜಿಲ್ಲೆಯ ನಾಗರಾಜ ನಾಯ್ಕ ಅವರೂ ಒಬ್ಬರು ಎಂಬುದು ಹೆಮ್ಮೆಯ ಸಂಗತಿ.

ಸ್ವAತ ಅಣ್ಣತಮ್ಮಂದಿರಿಗೇ ತುತ್ತು ಊಟ ಬಡಿಸುವ ಸಂದರ್ಭ ಬಂದರೆ ಸಾವಿರ ಸಲ ಯೋಚಿಸುವ ಇಂದಿನ ದಿನಮಾನದಲ್ಲಿ, ನೂರಾರು ಅನಾಥರಿಗೆ ದಿನಾಲೂ ಊಟ ವಸತಿ ಕೊಟ್ಟು ಕಾಪಾಡುವ ಗೆಳೆಯ ನಾಗರಾಜರು ನನಗೆ ವಿಸ್ಮಯರಾಗಿ ಕಾಣಿಸುತ್ತಾರೆ!

ಮೈಮೇಲೆ ಗಾಯ ಕೊಳೆತು ಬೀದಿಗೆ ಬಿದ್ದವರನ್ನು ಮಾತನಾಡಿಸುವುದಿರಲಿ ನೋಡುವುದೂ ನಮ್ಮಂತಹ ಸಾಮಾನ್ಯರಿಗೆ ಕಷ್ಟ. ಆದರೆ, ಅವರು ಸ್ವಲ್ಪವೂ ಅಸಹ್ಯ ಮಾಡಿಕೊಳ್ಳದೆ ಅಂತವರನ್ನು ಎತ್ತಿ ತಂದು, ನಿರ್ಮಲ ಮನಸ್ಸಿನಿಂದ ಶುಶ್ರೂಷೆ, ಆರೈಕೆ ಮಾಡಿ ತಮ್ಮ ಆಶ್ರಮದಲ್ಲಿ ಅನ್ನ ನೀರು ಸೂರು ಒದಗಿಸಿ ಬದುಕುವಂತೆ ಮಾಡುತ್ತಾರೆ. ತಂದೆಯ ಮಡಿಲಿನ ಬೆಚ್ಚನೆಯ ಭಾವ ಒದಗಿಸುತ್ತಾರೆ. ಮಡಿದವರಿಗೆ ಮಗನ ಸ್ಥಾನದಲ್ಲಿ ನಿಂತು ಗೌರವಯುತವಾಗಿ ಅಂತ್ಯಸAಸ್ಕಾರ ಮಾಡುತ್ತಾರೆ.
ಮೂಲತಃ ಅಂಕೋಲಾ ತಾಲೂಕಿನ ಕೆಂದಿಗೆ ಎಂಬ ಕುಗ್ರಾಮದವರಾದ ಅವರ ಅನಾಥಾಶ್ರಮವಿರುವುದು ಸಿದ್ದಾಪುರ ತಾಲೂಕಿನ ಮುಗದೂರಿನಲ್ಲಿ. ನಾಗರಾಜ ನಾಯ್ಕರ ದಯೆ, ಪ್ರೀತಿ, ಕಾಳಜಿಯ ಸ್ವಭಾವದಿಂದ ಹಾಗೂ ನಿರಂತರ ಹನ್ನೆರಡು ವರ್ಷಗಳ ಶ್ರಮದ ಫಲವಾಗಿ ‘ಡಾ. ಪುನೀತ್ ರಾಜಕುಮಾರ್ ಆಶ್ರಯಧಾಮ’ ಫಲಕದೊಂದಿಗೆ ತಲೆಯೆತ್ತಿ ಇತಿಹಾಸ ನಿರ್ಮಿಸಿದೆ.
ನಮ್ಮ ಜಿಲ್ಲೆಯಲ್ಲಿ ಹೀಗೆ ಬೀದಿಯಲ್ಲಿ ಬಿದ್ದ ಅನಾಥರನ್ನು ರಕ್ಷಿಸಿ ಆಶ್ರಯ ನೀಡುವ ಅನಾಥಾಶ್ರಮ ಇದೊಂದೇ! ಅಷ್ಟೇ ಏಕೆ ಹತ್ತಿರದ ಹಾವೇರಿ, ಶಿವಮೊಗ್ಗ ಜಿಲ್ಲೆಯವರೂ ಇದೇ ಆಶ್ರಮವನ್ನು ಆಶ್ರಯಿಸುತ್ತಾರೆ.
12 ವರ್ಷದ ಹಿಂದೆ ಶಿರಸಿಯಲ್ಲಿ ಬಾಡಿಗೆ ಮನೆಯೊಂದನ್ನು ಪಡೆದು ಅನಾಥರಿಗೆ ಆಶ್ರಯ ತಾಣವಾಗಿಸುತ್ತಾರೆ. ನಂತರ ಸಿದ್ದಾಪುರದ ಕೆಲವು ಕಡೆ ಬಾಡಿಗೆ ಜಾಗಕ್ಕೆ ಆಶ್ರಮ ಸ್ಥಳಾಂತರವಾಗುತ್ತದೆ. ಈಗ ಸಿದ್ದಾಪುರ ತಾಲೂಕಿನ ಮುಗದೂರಿನಲ್ಲಿ ನೆಲೆಯೂರಿದೆ. ಯಾಕೆ ನೆಲೆಯೂರಿದೆ ಅಂದೆನೆAದರೆ, ಹಿಂದಿನ ಸ್ಥಳದಲ್ಲಿ ಆಶ್ರಮದ ಅಕ್ಕ ಪಕ್ಕದ ಜನರಿಂದಾದ ಕೆಟ್ಟ ಅನುಭವಗಳಿಂದ ಬೇಸತ್ತು ಸಾಲ ಸೋಲ ಮಾಡಿ ಸ್ವಂತ ನೆಲ ಖರೀದಿಸಿ ಆಶ್ರಮ ಕಟ್ಟಡನಿರ್ಮಿಸುತ್ತಿದ್ದಾರೆ.
ಮೂರು ಜಿಲ್ಲೆಯ ಜನರೂ ಬೀದಿಯಲ್ಲಿ ಅನಾಥರನ್ನು ಕಂಡಾಗ ನಾಗರಾಜ ನಾಯ್ಕರಿಗೆ ಕಾಲ್ ಮಾಡಿ ತಿಳಿಸುತ್ತಾರೆ. ಆಗ ಒಂದು ಕ್ಷಣವೂ ತಡಮಾಡದೆ ಅವರು ಅನಾಥ ರಕ್ಷಣೆಗೆ ಧಾವಿಸುತ್ತಾರೆ. ಅವರ ಗಾಯ ತೊಳೆದು ಮುಲಾಮು ಹಚ್ಚುತ್ತಾರೆ. ಮನಸ್ಸಿಗಾದ ಗಾಯಕ್ಕೂ ಚಿಕಿತ್ಸೆ ಕೊಡಿಸುತ್ತಾರೆ. ಊಟ ವಸತಿಯೊಂದಿಗೆ ಗೌರವಯುತವಾಗಿ ಬದುಕಲು ಅವಕಾಶ ಮಾಡಿಕೊಡುತ್ತಾರೆ. ಆದರೆ ಅದಕ್ಕೆಲ್ಲ ದುಡ್ಡು ಬೇಡವೇ?! ನಾಗರಾಜ ನಾಯ್ಕರೇನು ಬಂಗಾರದ ಚಮಚ ಬಾಯಲ್ಲಿಟ್ಟುಕೊಂಡು ಹುಟ್ಟಿಲ್ಲ. ಅಲ್ಲದೆ, ಹುಟ್ಟಿದಾಗಲೇ ತಾಯಿಯನ್ನು ಕಳೆದುಕೊಂಡು ಮಲತಾಯಿಯ ಕಿರುಕುಳಕ್ಕೆ ‘ಅನಾಥ’ರಾದವರು. ಒಂಟಿಯಾಗಿ ಅಲೆಯುತ್ತ, ಸಣ್ಣಪುಟ್ಟ ಕೆಲಸ ಮಾಡುತ್ತ ಬದುಕು ಕಟ್ಟಿಕೊಂಡರು. ಅವರಿಗೂ ಸಂಸಾರವಿದೆ.
ಈಗ ಆಶ್ರಮದಲ್ಲಿ 80ಕ್ಕೂ ಅಧಿಕ ಅನಾಥರಿದ್ದಾರೆ. ಇನ್ನೂ ಬರುತ್ತಿರುತ್ತಾರೆ. ಇದಕ್ಕೆಲ್ಲ ಪ್ರತಿ ತಿಂಗಳೂ ಖರ್ಚಿಗೆ ಬೇಕಾಗುವ ಹಣ ಎಷ್ಟು ಗೊತ್ತಾ? 4.30 ರಿಂದ 5 ಲಕ್ಷ ರೂಪಾಯಿಗಳು. ಈ ಹಣಕ್ಕೆ ನಾಗರಾಜರು ದಾನಿಗಳನ್ನೇ ಅವಲಂಬಿಸಿದ್ದಾರೆ. ಸರ್ಕಾರ ಹಾಗೂ ಕಾರ್ಪೊರೇಟ್ ಜಗತ್ತು ಒಂಚೂರೂ ಸಹಾಯಧನ ಒದಗಿಸಿಲ್ಲ. ನಮ್ಮ ನಿಮ್ಮಂತವರು ಕೊಟ್ಟರೆ ಅನಾಥರಿಗೆ ಬದುಕು. ದಿನ ಬೆಳಗಾದರೆ ನಾಗರಾಜರು ಸಹಾಯದ ನಿರೀಕ್ಷೆಯಲ್ಲಿ ಊರೂರು ಅಲೆಯುತ್ತಾರೆ. ಸಾಮಾನ್ಯವಾಗಿ ಒಂದು ಕೇಜಿ ಅಕ್ಕಿ ಅಥವಾ 10 ರಿಂದ 100 ರೂ. ಕೊಡುವವರು ಸಿಗುತ್ತಾರೆ. ದೊಡ್ಡ ಮಟ್ಟದ ಸಹಾಯ ಮಾಡುವವರ ಕೊರತೆಯಿದೆ. ಹಾಗಾಗಿ ಸಂಪನ್ಮೂಲ ಸಂಗ್ರಹದ ಅಲೆದಾಟದಲ್ಲಿ ಅವರ ಜೀವನದ ಹೆಚ್ಚಿನ ಸಮಯ ಕಳೆದು ಹೋಗುತ್ತಿದೆ. ಆದರೂ ಬೇಕಾದಷ್ಟು ಸಂಗ್ರಹವಾಗದೆ ಸಾಲವನ್ನು ಮಾಡಿಯಾದರೂ ಅನಾಥರನ್ನು ಸಾಕುತ್ತಿದ್ದಾರೆ.
ಇಂತಹ ನಾಗರಾಜರಿಗೆ, ಅವರ ಆಶ್ರಮಕ್ಕೆ ನಾವೆಲ್ಲರೂ ಧನಸಹಾಯ ಮಾಡಬೇಕು. ಜಾತಿ, ಮತ, ಪಂಥ ಮುಂತಾದ ಅಹಂಗಳನ್ನು ಬದಿಗಿಟ್ಟು ನೆರವಿಗೆ ಧಾವಿಸಬೇಕು. ಈ ರೀತಿಯ ಸೇವೆ ಯಾರಿಂದಾದರೂ ಮಾಡಲು ಸಾಧ್ಯವೇನ್ರಿ? ದೇವರು ದಿಂಡಿರು, ಹಬ್ಬ ಹರಿದಿನ, ಜಾತ್ರೆ ಪಾತ್ರೆ, ಹುಟ್ಟಿದ ಹಬ್ಬ, ಸತ್ತ ತಿಥಿ, ಆ ಸಮಾರಂಭ, ಈ ಪಾರ್ಟಿ, ಪ್ರವಾಸ, ತೀರ್ಥಯಾತ್ರೆ ಮುಂತಾಗಿ ವರ್ಷವಿಡೀ ಸಾವಿರಾರು ರೂಪಾಯಿ ಚೆಲ್ಲುತ್ತೇವೆ.
ಆದರೆ, ಬೀದಿಯಲ್ಲಿ ಬಿದ್ದ ಅನಾಥನನ್ನು ನೋಡದೆ ಮುಂದೆ ಹೋಗುತ್ತೇವೆ. ಹೀಗೆ ಹೋಗುವಾಗ ನಮ್ಮೊಳಗೊಂದು ಅಪರಾಧಿ ಪ್ರಜ್ಞೆ ಕಾಡುವುದಿಲ್ಲವೇ? ಆ ಅಪರಾಧಿ ಭಾವವನ್ನು ನಾಗರಾಜ ನಾಯ್ಕರು ತೊಳೆದು ಹಾಕುವುದಿಲ್ಲವೇ? ನನ್ನ ಕೇಳಿದರೆ ಜಿಲ್ಲೆಯ ಪ್ರತಿಯೊಬ್ಬರೂ ತಮ್ಮ ಉತ್ಪನ್ನದಲ್ಲಿ ಸಣ್ಣದಾದರೂ ಧನಸಹಾಯ ಮಾಡಬಹುದು; ಮಾಡಬೇಕು. ಉಳ್ಳವರು ಪ್ರತಿ ವರ್ಷ ದೊಡ್ಡ ಮೊತ್ತ ನೀಡಿ ಸಮಾಜದ ಋಣ ತೀರಿಸಬೇಕು.
ನಾಗರಾಜರ ಈ ಎಲ್ಲ ಕಾರ್ಯಗಳಿಗೆ ಅವರ ಪತ್ನಿ ಮಮತಾ ನಾಯ್ಕ ಬೆಂಬಲವಾಗಿ ನಿಂತಿದ್ದಾರೆ. ಆಶ್ರಮದ ಮೇಲ್ವಿಚಾರಕಿ ಅವರೇ! ದಂಪತಿ ಮಾಡುತ್ತಿರುವ ಈ ಸಾಮಾಜಿಕ ಕಾರ್ಯ ಬಹು ಅಮೂಲ್ಯವಾದದ್ದು. ಇವರಿಗೆ ಒಳಿತಾಗಲಿ ಎಂದೆAದೂ.
ಇAತಹ ಮಾನವೀಯ ಸೇವೆಗೆ ಸಹಾಯ ಮಾಡಲು ಆಸಕ್ತಿ ಇರುವವರು ಈ ಕೆಳಗಿನ ಖಾತೆ ಸಂಖ್ಯೆಗೆ ಸಹಾಯ ಮಾಡಬೇಕಾಗಿ ವಿನಂತಿ.
PUNITH RAJKUMAR ASHRAYADHAMA ANATHASHRAMA SEVA SAMITI
A/C NO : 40918142470
IFSC CODE : SBIN0040131
BANK NAME : STATE BANK OF INDIA
BRANCH : SIDDAPUR
UPI ID : 9481389187@ybl
GOOGLE PAY & PHONE PAY :
9481389187
ಹೆಚ್ಚಿನ ಮಾಹಿತಿಗಾಗಿ
ಡಾ. ನಾಗರಾಜ ನಾಯ್ಕ
ಮುಖ್ಯಸ್ಥರು
ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮ ದೇವಸ್ಥಳ, ಮುಗದೂರು, ಪೊ. ಕೊಂಡ್ಲಿ, ತಾ. ಸಿದ್ದಾಪುರ, (ಉಕ) – 581355
ಮೊ. 9481389187, 8073197439
ಲೇಖಕರು : ಗಣೇಶ ಪಿ. ನಾಡೋರ
More Stories
ನಾಣಿಕಟ್ಟಾದಲ್ಲಿ ವಿಜೃಂಭಿಸಿದ ಗಾನ ಚಿತ್ರ ವೈಭವ
ನಾಣಿಕಟ್ಟಾ ಗ್ರಾಮ ಸಮುದಾಯಗಳ ದೇವಾಲಯಗಳು ಹಾಗು ಹಿಂದೂ ಬಾಂಧವರಿ0ದ ಮನವಿ
ನಾಣಿಕಟ್ಟಾ ಪ್ರೌಢಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಿಸಿದ ಶ್ರೀ ಉಪೇಂದ್ರ ಪೈ ಸಿರಸಿ