ಭಟ್ಕಳ: ವಿಶ್ವಪ್ರಸಿದ್ಧ ಮುರುಡೇಶ್ವರದಲ್ಲಿ ಹೈದರಾಬಾದ್ ಮೂಲದ ಪ್ರವಾಸಿಗನೊಬ್ಬ ಕಳೆದುಕೊಂಡಿದ್ದ 48,190 ನಗದು ಹೊಂದಿದ ಬ್ಯಾಗ್‌ನ್ನು ಸ್ಥಳೀಯ ಯುವಕನೊಬ್ಬ ಪ್ರಾಮಾಣಿಕತೆಯಿಂದ ಹಿಂತಿರುಗಿಸಿದ ಘಟನೆ ಶ್ಲಾಘನೀಯವಾಗಿದೆ.
ಪ್ರವಾಸಿಗನು ದೇವಸ್ಥಾನದ ಬಳಿ ಬ್ಯಾಗ್ ಕಳೆದುಕೊಂಡಿದ್ದು, ಗರಡಿಗಡ್ಡೆಯ ವಿಷ್ಣು ನಾಗಪ್ಪ ನಾಯ್ಕ ಅವರಿಗೆ ಅದು ಸಿಕ್ಕಿತು. ತಕ್ಷಣವೇ ಅವರು ಮುರುಡೇಶ್ವರ ಪೊಲೀಸ್ ಠಾಣೆಗೆ ಒಪ್ಪಿಸಿದರು. ನಂತರ ಪಿಎಸ್ ಐ ಹನುಮಂತ ಬಿರಾದರ್ ಅವರ ಸಮ್ಮುಖದಲ್ಲಿ ಬ್ಯಾಗ್ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಪ್ರವಾಸಿಗರು ವಿಷ್ಣು ನಾಯ್ಕ ಅವರಿಗೆ ಧನ್ಯವಾದ ಸಲ್ಲಿಸಿದ್ದು, ಅವರ ಈ ಪ್ರಾಮಾಣಿಕ ನಡೆಗೆ ಪೊಲೀಸರು ಹಾಗೂ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

More Stories
ಭಟ್ಕಳ ತಲಾಂದ ಶಾಲೆಯಲ್ಲಿ ಉತ್ಸಾಹಭರಿತ ಪ್ರತಿಭಾ ಕಾರಂಜಿ, ಪುರವರ್ಗ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಗೆ ಸಡಗರ
ಭಟ್ಕಳದಲ್ಲಿ ಶ್ರೀರಾಮ ದಿಗ್ವಿಜಯ ರಥಯಾತ್ರೆಗೆ ಅದ್ದೂರಿ ಸ್ವಾಗತ
ವ್ಯವಹಾರಿಕ ಜ್ಞಾನಕ್ಕೆ ಪಾಠ ಕಲಿಸಿದ ಮಕ್ಕಳ ಸಂತೆ