
ವಿಚಿತ್ರ ದೇಹಾಕೃತಿಯ ಮಗು ಮಣಿಪಾಲಕ್ಕೆ ರವಾನೆ
ಭಟ್ಕಳ: ಭಟ್ಕಳದ ಹೊರವಲಯದ ಖಾಸಗಿ ಆಸ್ಪತ್ರೆಯಲ್ಲಿ ಅಪರೂಪದ ದೇಹಾಕೃತಿಯೊಂದನ್ನು ಹೊಂದಿರುವ ಹೆಣ್ಣು ಮಗು ಜನಿಸಿದ್ದು, ವೈದ್ಯಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ. ಘಟನೆ ಕೆಲವು ದಿನಗಳ ಹಿಂದೆಯೇ ನಡೆದಿದ್ದರೂ ಇದೀಗ ಬೆಳಕಿಗೆ ಬಂದಿದೆ.
ಸ್ಥಳೀಯ ಮುಸ್ಲಿಂ ದಂಪತಿಯ ಮೂರನೇ ಶಿಶುವಾಗಿ ಜನಿಸಿದ ಈ ಮಗುವಿನ ದೇಹದಲ್ಲಿ ಸಾಮಾನ್ಯ ಶಿಶುಗಳಿಗೆ ಹೋಲಿಕೆಯಾಗದ ಹಲವಾರು ವೈಶಿಷ್ಟ್ಯಗಳು ಕಾಣಿಸಿಕೊಂಡಿವೆ. ಆದರೆ ಅದರ ಅಳು, ಉಸಿರಾಟ ಸೇರಿದಂತೆ ಜೀವಚಟುವಟಿಕೆಗಳು ಸಹಜವಾಗಿರುವುದರಿಂದ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ತಪಾಸಣೆಗೆ ಮಣಿಪಾಲದ ಆಸ್ಪತ್ರೆಗೆ ರವಾನಿಸಿದ್ದಾರೆ.
ಮಾಮೂಲಿ ದೃಷ್ಟಿಗೆ ಭಯಾನಕವಾಗಿ ಕಾಣುವ ಈ ಮಗುವಿನ ಚಿತ್ರಗಳು ಸ್ಥಳೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಕೆಲವರು ಇತ್ತೀಚಿಗೆ ನಡೆದ ಚಂದ್ರಗ್ರಹಣದ ಪರಿಣಾಮ ಎಂದು ವಾದಿಸುತ್ತಿದ್ದರೆ, ವೈದ್ಯ ವಲಯ ಇದನ್ನು ಕೇವಲ ಜನ್ಯ ಅಸಮಾನ್ಯತೆ ಅಥವಾ ಗರ್ಭಾವಸ್ಥೆಯಲ್ಲಿನ ಅಂಶಗಳಿAದ ಉಂಟಾಗುವ ವೈದ್ಯಕೀಯ ಸಂಗತಿ ಎಂದು ಸ್ಪಷ್ಟಪಡಿಸಿದೆ.
ಪ್ರಸ್ತುತ ಮಗು ಮಣಿಪಾಲದ ತಜ್ಞರ ಆರೈಕೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಮಗುವಿನ ನಿಖರ ವೈದ್ಯಕೀಯ ಸ್ಥಿತಿ ತಿಳಿಯಲು ಇನ್ನೂ ಕೆಲವು ಪರೀಕ್ಷೆಗಳು ಬಾಕಿ ಉಳಿದಿವೆ ಎಂದು ಮೂಲಗಳು ತಿಳಿಸಿವೆ.
More Stories
ಭಟ್ಕಳದ ದರ್ಶನ ನಾಯ್ಕ ರಾಜ್ಯಕ್ಕೆ ಪ್ರಥಮ, ರಾಷ್ಟ್ರಮಟ್ಟಕ್ಕೆ ಭಟ್ಕಳದ ಕೀರ್ತಿ
ಕಡಸಲಗದ್ದೆ ಗಾಂಧಿ ಫಾಲ್ಸ್ ಬಳಿ ಮೊಬೈಲ್ ಕಳವು ಯತ್ನ ಇಬ್ಬರು ಬಂಧನ
ಮುರುಡೇಶ್ವರಲ್ಲಿ ನಾಲ್ವರು ಪ್ರವಾಸಿಗರ ಜೀವ ರಕ್ಷಣೆ – ಜೀವರಕ್ಷಕ ದಳದ ಸಾಹಸಕ್ಕೆ ಮೆಚ್ಚುಗೆ