ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪದ ಸೊಳ್ಳೇಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಐದು ವರ್ಷ ಅವದಿಯ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯಿತು.. ಕಾಂಗ್ರೆಸ್ ಪಕ್ಷ ಬೆಂಬಲಿತ 8 ಅಭ್ಯರ್ಥಿಗಳು ಮತ್ತು ಜೆ.ಡಿ.ಎಸ್ ಪಕ್ಷ ಬೆಂಬಲಿತ 8 ಅಭ್ಯರ್ಥಿಗಳು ಮತ್ತು ಪಕ್ಷೇತರ 1 ಅಭ್ಯರ್ಥಿ ಒಟ್ಟು 17 ಸದಸ್ಯರುಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ರು.. ಆದರೆ ಚುನಾವಣೆಯಲ್ಲಿ 6 ಸ್ಥಾನಗಳನ್ನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜಯಸಾದಿಸಿ ಅಧಿಕಾರ ಚುಕ್ಕಾಣಿ ಹಿಡಿಯಲು ಯಶಸ್ವಿಯಾದರು, 2 ಸ್ಥಾನಗಳನ್ನು ಜೆ.ಡಿ.ಎಸ್ ಪಕ್ಷ ಬೆಂಬಲಿತ ಅಭ್ಯರ್ಥಿ ಗೆಲುವು ಸಾದಿಸಿದ್ರು..
ಇದೇ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಸದಸ್ಯರಾದ ಕಿಕ್ಕೇರಿ ಸುರೇಶ್ ಮಾತಮಾಡಿ ಕಳೆದ 40 ವರ್ಷಗಳಿಂದ ಸೊಳ್ಳೇಪುರ ಗ್ರಾಮದ ಹಾಲು ಉತ್ಪಾದಕ ಸಹಕಾರ ಸಂಘದಲ್ಲಿ ಚುನಾವಣೆ ನೆಡೆದಿಲ್ಲ ಗ್ರಾಮಸ್ಥರು ಎಲ್ಲಾರೂ ಒಂದಾಗಿ ಅವಿರೋಧವಾಗಿ ಆಯ್ಕೆ ಮಾಡುತ್ತಾ ಇದ್ದರು ಆದರೆ ಈ ಬಾರಿ ಚುನಾವಣೆ ನೆಡೆಬೇಕಾದ ಪರಿಸ್ಥಿತಿ ಎದರುರಾಗಿತ್ತು ಅದೇ ರೀತಿ ನಮ್ಮ 6 ಅಭ್ಯರ್ಥಿಗಳು ಭರ್ಜರಿ ಗೆಲುವು ಸಾದಿಸಿದ್ದಾರೆ ಅಲ್ಲದೆ 2 ಅಭ್ಯರ್ಥಿ ಬೆರಳೆಣಿಕೆಯ ಮತಗಳ ಅಂತರದಿಂದ ಸೋಲು ಕಂಡಿದ್ದಾರೆ ಮುಂದಿನ ದಿನಗಳನಲ್ಲಿ ಸಂಘದ ಎಲ್ಲಾ ನಿರ್ದೇಶಕರನ್ನು ಒಗ್ಗೂಡಿಸಿಕೊಂಡು ಸಂಘದ ಅಭಿವೃದ್ಧಿಗೆ ಶ್ರಮಿಸುವಂತೆ ಸಲಹೆ ನೀಡಿ ನೂತನ ನಿರ್ದೇಶಕರನ್ನು ಸನ್ಮಾನಿಸಿ ಶುಭಕೋರಿದರು.
ಈ ಚುನಾವಣೆಗೆ ಶ್ರಮಿಸಿದ ಮನ್ ಮುಲ್ ನಿರ್ದೇಶಕರಾದ ಡಾಲು ರವಿ, ಮತ್ತು ಎಂ ಬಿ ಹರೀಶ್, ಕೆ.ಪಿ.ಸಿ.ಸಿ ಸದಸ್ಯರಾದ ಕಿಕ್ಕೇರಿ ಸುರೇಶ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರಾದ ಜಯರಾಮು ಮತ್ತು ಸಂಘದ ಷೇರುದಾರ ಸಹಕಾರದಿಂದ 6 ಸ್ಥಾನಗಳು ಗೆಲುವುಗೆ ಕಾರಣವಾಗಿದೆ ಎಂದು ನೂತನ ನಿರ್ದೇಶಕರು ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಸದಸ್ಯ ಕಿಕ್ಕೇರಿ ಸುರೇಶ್, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಸೊಳ್ಳೇಪುರ ಜಯರಾಮು, ತಾಲ್ಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ಡಿ.ಎಂ ಮಹೇಂದ್ರ, ಕಿಕ್ಕೇರಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆವೈ ಹರೀಶ್, ಮುಖಂಡರಾದ ರಮೇಶ್, ನೂತನ ಸದಸ್ಯರಾದ ಎಸ್ ಕೆ ನಾಗಣ್ಣ, ಪಾಪಣ್ಣ, ಚಂದ್ರಶೇಖರ್, ಶಂಕರ, ಚಂದ್ರಶೇಖರ್, ಮಂಜುಳಾ ಕುಮಾರ್ , ಕಾರ್ಯದರ್ಶಿ ಸತ್ಯನಾರಾಯಣ, ಹಾಲು ಪರಿಶೀಲಕ ಜಿತೇಂದ್ರ ಸೇರಿದಂತೆ ಸೊಳ್ಳೇಪುರ ಗ್ರಾಮದ ಮುಖಂಡರುಗಳು ಇದ್ದರು..
ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

More Stories
ಕೃಷ್ಣರಾಜಪೇಟೆ ಪಟ್ಟಣದಲ್ಲಿ ಶ್ರದ್ಧಾ ಭಕ್ತಿಯಿಂದ ಬಕ್ರೀದ್ ಹಬ್ಬವನ್ನು ಆಚರಿಸಿದ ಮುಸ್ಲಿಂ ಬಾಂಧವರು ..
ವಿದ್ಯಾರ್ಥಿಗಳು ಸೋಲನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಂಡು ಸಾಧನೆ ಮಾಡಿ, ಅಂತಾರಾಷ್ಟ್ರೀಯ ಜಾನಪದ ಕಲಾವಿದ ಡಾ.ಅಮ್ಮ ರಾಮಚಂದ್ರ ಕರೆ.
ಶಿಕ್ಷಕರು ವಿದ್ಯಾರ್ಥಿಗಳನ್ನು ಕೇವಲ ಅಂಕವೀರರನ್ನಾಗಿ ರೂಪಿಸದೆ ಶಿಕ್ಷಣದ ಜ್ಞಾನದ ಬೆಳಕಿನ ಶಕ್ತಿಯ ಮೂಲಕ ಉತ್ತಮವಾದ ಸಂಸ್ಕಾರ ನೀಡಿ ಭವಿಷ್ಯದ ನಾಗರೀಕರನ್ನಾಗಿ ಸಜ್ಜುಗೊಳಿಸಬೇಕು. ಡಾ.ಪಿ. ಹರೀಶ್ ಕರೆ.