October 4, 2025

ಕಡಸಲಗದ್ದೆ ಗಾಂಧಿ ಫಾಲ್ಸ್ ಬಳಿ ಮೊಬೈಲ್ ಕಳವು ಯತ್ನ ಇಬ್ಬರು ಬಂಧನ

ಭಟ್ಕಳ: ತಾಲೂಕಿನ ಬೆಳಲಖಂಡ ಗ್ರಾಮದ ಸಮೀಪದಲ್ಲಿರುವ ಪ್ರಸಿದ್ಧ ಪ್ರವಾಸಿ ತಾಣ ಕಡಸಲಗದ್ದೆ ಗಾಂಧಿ ಫಾಲ್ಸ್ಗೆ ಬಂದ ಪ್ರವಾಸಿಗರ ಮೊಬೈಲ್ ಫೋನ್ ಕಳವು ಮಾಡಲು ಹೊಂಚು ಹಾಕುತ್ತಿದ್ದ ಇಬ್ಬರು ಆರೋಪಿಗಳನ್ನು ಭಟ್ಕಳ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.

ಬAಧಿತರಾಗಿ ಮೊಹಮ್ಮದ್ ಅಮೀರ್ (ತಂದೆ ಸಯ್ಯದ್ ರಷೀಲ, ನಿವಾಸ: ಬೆಳಲಖಂಡ) ಹಾಗೂ ಅಬ್ದುಲ್ ರಹಮಾನ್ (ತಂದೆ ಮಹಮ್ಮದ್ ಅಬುಶಾಮ, ನಿವಾಸ: ಭದ್ರಾ ಕಾಲೋನಿ, ಭಟ್ಕಳ) ಗುರುತಿಸಲಾಗಿದ್ದು, ಇಬ್ಬರೂ ಪ್ರವಾಸಿಗರು ನಿರ್ಲಕ್ಷ್ಯ ಮಾಡುವ ಕ್ಷಣ ಕಾದು ಮೊಬೈಲ್ ಕದ್ದೊಯ್ಯುವ ಶಡ್ಯಂತ್ರ ರೂಪಿಸಿತ್ತಾರೆಂದು ಮಾಹಿತಿ ದೊರಕಿತ್ತು.

ಮಾಹಿತಿಯ ಆಧಾರದ ಮೇಲೆ ಸಿಪಿಐ ಮಂಜುನಾಥ ಲಿಂಗಾರೆಡ್ಡಿ ತಂಡ ಸ್ಥಳಕ್ಕೆ ದಾಳಿ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಈ ಕುರಿತಂತೆ ಭಾರತೀಯ ದಂಡ ಸಂಹಿತೆಯ ಕಲಂ 128 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಬಂಧಿತರನ್ನು ಮುಂದಿನ ಕ್ರಮಕ್ಕಾಗಿ ಭಟ್ಕಳ ತಾಲೂಕು ಕಾರ್ಯನಿರ್ವಹಣಾ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ. ಪ್ರವಾಸಿಗರು ಎಚ್ಚರಿಕೆಯಿಂದ ಇರಬೇಕು ಎಂದು ಗ್ರಾಮೀಣ ಪೊಲೀಸರು ತಿಳಿಸಿದ್ದಾರೆ.

About The Author

error: Content is protected !!