
ಭಟ್ಕಳ: ಕೇಂದ್ರ ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರು ಇವರ ವತಿಯಿಂದ ನಡೆದ ವಿಕ್ಷಿತ್ ಭಾರತ್ ಕೆ ರಂಗ್ ಸೇವಾ ಪರ್ವ ವಿಕಸಿತ ಭಾರತದ ಕಲ್ಪನೆ” ವಿಷಯಾಧಾರಿತ ರಾಜ್ಯ ಮಟ್ಟದ ಪೇಂಟಿAಗ್ (ಕಾಲೇಜು ವಿಭಾಗ) ಸ್ಪರ್ಧೆಯಲ್ಲಿ ಭಟ್ಕಳ ಜಾಲಿ ಮೂಲದ ದರ್ಶನ ಮಹಾಬಲೇಶ್ವರ ನಾಯ್ಕ ಪ್ರಥಮ ಸ್ಥಾನ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
ದೇಶದ 75 ಪ್ರಮುಖ ಕೇಂದ್ರಗಳಲ್ಲಿ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2ರವರೆಗೆ ಈ ಸ್ಪರ್ಧೆ ಹಾಗೂ ಪೇಂಟಿAಗ್ ಕಾರ್ಯಾಗಾರ ನಡೆಯಲಿದ್ದು, ಕರ್ನಾಟಕದಲ್ಲಿ ಬೆಂಗಳೂರು ಹಾಗು ಮಂಗಳೂರಿನ ಯೆನ್ನಪೋಯಾ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳಲ್ಲಿ ಸ್ಪರ್ಧೆಯನ್ನು ಏಕಕಾಲದಲ್ಲಿ ಏರ್ಪಡಿಸಲಾಗಿತ್ತು.
ರಾಜ್ಯ ಮಟ್ಟದಲ್ಲಿ ಅಗ್ರಸ್ಥಾನ ಸಾಧಿಸಿದ ದರ್ಶನಗೆ ರೂ.25 ಸಾವಿರ ನಗದು ಬಹುಮಾನವನ್ನು ಪ್ರದಾನ ಮಾಡಲಾಗಿದ್ದು, ಮುಂದಿನ ರಾಷ್ಟ್ರಮಟ್ಟದ ಅಂತಿಮ ಸ್ಪರ್ಧೆ ದೆಹಲಿಯಲ್ಲಿ ಜರುಗಲಿದೆ.
ಪ್ರಸ್ತುತ ದರ್ಶನ ನಾಯ್ಕ ಬೆಂಗಳೂರು ನಗರದಲ್ಲಿ ಬ್ಯಾಚುಲರ್ ಆಫ್ ವಿಚುವಲ್ ಆರ್ಟ್ಸ್ (ಬಿವಿಎ) ಪಠ್ಯಕ್ರಮದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಈ ಹಿಂದೆ ರಾಷ್ಟ್ರೀಯ ಮತದಾರರ ದಿನಾಚರಣೆ 2024ರ ಅಂಗವಾಗಿ ನಡೆದ ಭಿತ್ತಿಚಿತ್ರ ಸ್ಪರ್ಧೆಯಲ್ಲೂ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಬೆಂಗಳೂರಿನಲ್ಲಿ ಸನ್ಮಾನಿತರಾಗಿದ್ದರು.
ಪೇಂಟಿAಗ್ ಕ್ಷೇತ್ರದಲ್ಲಿ ಅಭೂತಪೂರ್ವ ಸಾಧನೆ ತೋರಿಸಿರುವ ಪ್ರತಿಭಾವಂತ ವಿದ್ಯಾರ್ಥಿ ದರ್ಶನಗೆ ಭಟ್ಕಳ ತಾಲೂಕಿನ ವಿವಿಧ ಸಂಘ-ಸAಸ್ಥೆಗಳ ಪದಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಅಭಿನಂದನೆ ಸಲ್ಲಿಸಿದ್ದಾರೆ.
More Stories
ಕಡಸಲಗದ್ದೆ ಗಾಂಧಿ ಫಾಲ್ಸ್ ಬಳಿ ಮೊಬೈಲ್ ಕಳವು ಯತ್ನ ಇಬ್ಬರು ಬಂಧನ
ಮುರುಡೇಶ್ವರಲ್ಲಿ ನಾಲ್ವರು ಪ್ರವಾಸಿಗರ ಜೀವ ರಕ್ಷಣೆ – ಜೀವರಕ್ಷಕ ದಳದ ಸಾಹಸಕ್ಕೆ ಮೆಚ್ಚುಗೆ
ವಿಚಿತ್ರ ರೂಪ ಹೊಂದಿದ ಮಗು ಜನನ, ವೈದ್ಯ ಲೋಕಕ್ಕೆ ಸವಾಲಾದ ಪ್ರಕರಣ