November 19, 2025

ವಾಗ್ವಾದ ಹಲ್ಲೆ ಬಳಿಕ ಡಿಕ್ಕಿ ಅಪಘಾತ: ಇಬ್ಬರಿಗೆ ಗಂಭೀರ ಗಾಯ

ಭಟ್ಕಳ: ವಾಗ್ವಾದದಿಂದ ಆರಂಭವಾಗಿ ಹಲ್ಲೆಗೂ, ನಂತರ ರಸ್ತೆ ಅಪಘಾತಕ್ಕೂ ತಿರುಗಿದ ಘಟನೆ ಭಟ್ಕಳ ತಾಲೂಕಿನ ಕುಂಟವಾಣಿ ಕ್ರಾಸ್‌ನಲ್ಲಿ ನಡೆದಿದೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೂಲಗಳ ಪ್ರಕಾರ, ಫಾರೂಕಿ ಸ್ಟ್ರೀಟ್‌ನ ನಿವಾಸಿ ಅಬ್ದುಲ್ ಆರ್ಮರ್ (31) ಅವರು ಕುಟುಂಬದವರೊAದಿಗೆ ಹಾಡುವಳ್ಳಿ ಗ್ರಾಮದ ಅಗ್ಗ ಪ್ರದೇಶಕ್ಕೆ ತೆರಳಿ, ಸಂಜೆ ವಾಪಸಾಗುವ ವೇಳೆ ಕುಂಟವಾಣಿ ಕ್ರಾಸ್ ಹತ್ತಿರದ ಹೊಟೇಲ್‌ನಲ್ಲಿ ಚಹಾ ಕುಡಿಯಲು ನಿಂತಿದ್ದರು. ಈ ವೇಳೆ ಇಬ್ಬರು ಅಜ್ಞಾತರು ಬಂದು ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಬೀಸಾಡಿ ಹೋಗುತ್ತಿದ್ದೀರಿ ಎಂದು ಆರೋಪಿಸಿ ವಾಗ್ವಾದ ನಡೆಸಿದ್ದಾರೆ.

ಅಬ್ದುಲ್ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದಾಗ, ಒಬ್ಬರು ಅವಾಚ್ಯ ಶಬ್ದಗಳಿಂದ ಬೈದು ಬೆನ್ನಿಗೆ ಹಾಗೂ ಮುಖಕ್ಕೆ ಕೈಯಿಂದ ಹೊಡೆದಿದ್ದು, ಅವರ ಟೀ ಶರ್ಟ್ ಹರಿದು ಹಾನಿಯಾಗಿದೆ. ಅಲ್ಲಿದ್ದ ಕೆಲವರು ಹೊಡಿಯಿರಿ ಎಂದು ಪ್ರಚೋದನೆ ನೀಡಿದರೆಂದು ದೂರು ತಿಳಿಸಿದೆ.

ಘಟನೆಯ ಕೆಲವೇ ಹೊತ್ತಿನ ಬಳಿಕ, ಭಟ್ಕಳ ಪುರಸಭೆಯ ಕಸ ಹಾಕುವ ಸ್ಥಳದ ಹತ್ತಿರ, ಅಬ್ದುಲ್ ಅವರ ಸಂಬAಧಿ ಜಿಯಾವುರ ರೆಹಮಾನ (33) ಹಾಗೂ ಅವರ ಪತ್ನಿ ಆಯಿಶಾ ಲಮೀಯಾ (21) ಮೋಟಾರ್‌ಸೈಕಲ್‌ನಲ್ಲಿ ತೆರಳುತ್ತಿದ್ದಾಗ, ಹಿಂಬದಿಯಿAದ ಬಂದ ಜಟೋರೀಸ್ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ.

ಈ ಅಪಘಾತದಲ್ಲಿ ಜಿಯಾವುರ ರೆಹಮಾನ ಅವರಿಗೆ ಕೈ ಮತ್ತು ಕಾಲಿಗೆ ಪೆಟ್ಟಾಗಿದ್ದು, ಆಯಿಶಾ ಲಮೀಯಾ ಅವರಿಗೆ ತಲೆಗೆ ಗಂಭೀರ ಗಾಯವಾಗಿದೆ. ಇಬ್ಬರನ್ನೂ ತಕ್ಷಣ ಭಟ್ಕಳ ಲೈಫ್ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬAಧ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

About The Author

error: Content is protected !!