ಹೊನ್ನಾವರ: ತಾಲೂಕಿನ ಸಾಲ್ಕೋಡ್ ಗ್ರಾಮದ ಅರೇಅಂಗಡಿ, ಸಾಲ್ಕೋಡ್,ಗಾಣಗೇರಿ, ಕೆರೆಕೋಣ ಕೆರಮನೆ ಕಚ್ಚರಕೆ, ಕಾನಕ್ಕಿ ಭಾಗದಲ್ಲಿ ಪ್ರತಿನಿತ್ಯ ಚಿರತೆ ಕಾಣಿಸಿಕೊಳ್ಳುತ್ತಿರುದರಿಂದ ಗ್ರಾಮಸ್ಥರ ಆತಂಕ ಮನೆ ಮಾಡಿದೆ.
ಮನೆಯಲ್ಲಿ ಸಾಕಿದ್ದ ಗೋವು ಮೇಯಲು ಅರಣ್ಯಕ್ಕೆ ಹೋದಾಗ ನಾಪತ್ತೆಯಾಗುತ್ತಿದ್ದಾಗ ಕಟುಕರ ಪಾಲಾಯಿತು ಎನ್ನುವ ಆರೋಪ ಈ ಹಿಂದೆ ಕೇಳಿ ಬರುತ್ತಿತ್ತು. ಇದೀಗ ಜನಸಂಚಾರ ಇರುವಲ್ಲಿಗೆ ಬಂದು ಗೋವಿನ ಮೇಲೆ ದಾಳಿ ಮಾಡುತ್ತಿದೆ. ಈ ನಡುವೆ ಸಾಕಿದ ಹಲವು ನಾಯಿ ಮರಿಗಳು ಎತ್ತಿಕೊಂಡು ಪರಾರಿಯಾಗಿದೆ. ಗುರುವಾರ ಮುಂಜಾನೆ ಮಂಗೊಳ್ಳಿಕೇರಿಯ ಸಮೀಪ ಗೊಳಿಯೊಂದು ಗಂಭೀರ ಗಾಯಗೊಂಡು ರಸ್ತೆ ಪಕ್ಕ ಬಿದ್ದಿತ್ತು. ಚಿರತೆಯು ಇದರ ಮೇಲೆ ದಾಳಿ ಮಾಡಿದಾಗ ರಸ್ತೆಯಲ್ಲಿ ಬಂದ ವಾಹನದ ಬೆಳಕಿನಿಂದ ಓಡಿ ಪರಾರಿಯಾಗಿ ಇರಬಹುದೆಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದು, ಬೋನ್ ಇಡುವ ಬಗ್ಗೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಚಿರತೆ ಕಾಟಕ್ಕೆ ಗ್ರಾಮಸ್ಥರಲ್ಲಿ ಆತಂಕ ಮುಂದುವರೆದಿದ್ದು, ಕಾಡಿಗೆ ವಾಪಸ್ಸು ಕಳುಹಿಸಲು ಇಲಾಖೆಯ ಅಧಿಕಾರಿಗಳು ವಿವಿಧ ಪ್ರಯತ್ನಕ್ಕೆ ಮುಂದಾಗುತ್ತಿದ್ದಾರೆ.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

More Stories
ಭಟ್ಕಳದ ಕರಿಕಲ್ಲಿನಲ್ಲಿ ಶ್ರೀರಾಮ ದೇವರ ಪ್ರತಿಷ್ಠಾಪನಾ ವರ್ಧಂತಿ ಉತ್ಸವ ಹಾಗೂ ರಾಮತಾರಕ ಮಹಾಯಜ್ಞ
ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆ 2024 25 ನೇ ಶೈಕ್ಷಣಿಕ ವರ್ಷದ ಉತ್ತಮ ಸಾಧನೆಗಾಗಿ ಜಿಲ್ಲಾ ಮಟ್ಟದ ಉತ್ತಮ ಎಸ್. ಡಿ. ಎಂ. ಸಿ. ಪ್ರಶಸ್ತಿ
‘ಜನಸಾಮಾನ್ಯರಲ್ಲೂ ವಿಜ್ಞಾನದ ಅರಿವು ಅಗತ್ಯ’