March 2, 2026

ಹಳೆಯ ಮೀನು ಮಾರುಕಟ್ಟೆ ಸ್ಥಳಾಂತರ ವಿವಾದ, ಮಹಿಳಾ ಮೀನು ವ್ಯಾಪಾರಿಗಳ ಅಳಲು ಆಲಿಸಿದ ಅರ್ಚನಾ ನಾಯಕ

ಭಟ್ಕಳ: ಪಟ್ಟಣದ ಹಳೆಯ ಮೀನು ಮಾರುಕಟ್ಟೆಯನ್ನು ಸ್ಥಳಾಂತರಿಸುವ ಕುರಿತು ಮತ್ತೆ ಚರ್ಚೆ ಚುರುಕುಗೊಂಡಿದ್ದು, ಜೀವನೋಪಾಯ ಕಳೆದುಕೊಳ್ಳುವ ಆತಂಕದಲ್ಲಿ ಮಹಿಳಾ ಮೀನು ವ್ಯಾಪಾರಿಗಳು ಗೊಂದಲದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಡಬ್ಲ್ಯೂ.ಎಚ್.ಆರ್.ಆರ್ಕೆ ಫೌಂಡೇಶನ್‌ನ ಕರ್ನಾಟಕ ಪಶ್ಚಿಮ ವಲಯದ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ಉತ್ತರ ಕನ್ನಡ ಜಿಲ್ಲಾ ಕಾನೂನು ಸಲಹೆಗಾರ್ತಿ ಅರ್ಚನಾ ಜಯಪ್ರಕಾಶ್ ನಾಯಕ ಭಟ್ಕಳಕ್ಕೆ ಭೇಟಿ ನೀಡಿ ಮಹಿಳೆಯರ ಅಳಲನ್ನು ಆಲಿಸಿದರು.

ಹಳೆಯ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸುತ್ತಿರುವ ಮಹಿಳೆಯರು ಮಾತನಾಡಿ, ಕಳೆದ 40 ವರ್ಷಗಳಿಂದ ನಾವು ಈ ಮಾರುಕಟ್ಟೆಯಲ್ಲೇ ಮೀನು ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದೇವೆ. 120-140 ಕುಟುಂಬಗಳು ಈ ಒಂದೇ ಆಧಾರದಿಂದ ಜೀವನ ನಡೆಸುತ್ತಿವೆ. ಪರ್ಯಾಯ ವ್ಯವಸ್ಥೆ ಮಾಡದೆ ಸ್ಥಳಾಂತರ ಮಾಡಲು ಮುಂದಾದರೆ ನಾವು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಮನವಿ ಮಾಡಿಕೊಳ್ಳಿದರು.
ಸ್ಥಳಾಂತರಕ್ಕೆ ವಿರೋಧ ವ್ಯಕ್ತವಾದ ಸಂದರ್ಭದಲ್ಲಿ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯರು ಭೇಟಿ ನೀಡಿ,ಹಳೆಯ ಮಾರುಕಟ್ಟೆ ಹಾಗೆಯೇ ಮುಂದುವರಿಯಲಿ. ಹೊಸ ಮಾರುಕಟ್ಟೆ ಆರಂಭವಾದರೂ ಜನರು ತಮ್ಮ ಅನುಕೂಲಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಂಡು ವ್ಯವಹರಿಸಬಹುದು ಎಂದು ಭರವಸೆ ನೀಡಿದ್ದನ್ನು ಮಹಿಳೆಯರು ಸ್ಮರಿಸಿದರು.


ಮಹಿಳೆಯರ ಮನವಿಯನ್ನು ಗಂಭೀರವಾಗಿ ಆಲಿಸಿದ ಅರ್ಚನಾ ನಾಯಕ, ಸಂಬAಧಪಟ್ಟ ಅಧಿಕಾರಿಗಳ ಗಮನಕ್ಕೆ ವಿಷಯ ತರಲಾಗುತ್ತದೆ. ನ್ಯಾಯಯುತ ಪರಿಹಾರ ಸಿಗುವಂತೆ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಬ್ಲ್ಯೂ.ಎಚ್.ಆರ್.ಆರ್ಕೆ ತಾಲೂಕು ಅಧ್ಯಕ್ಷ ಶ್ರೀಧರ ನಾಯ್ಕ, ಬಿಜೆಪಿ ಮುಖಂಡ ಶ್ರೀಕಾಂತ್ ನಾಯ್ಕ, ಹಿಂದೂ ಜಾಗರಣ ವೇದಿಕೆ ಮುಖಂಡ ಜಯಂತ ನಾಯ್ಕ, ಸದಸ್ಯರಾದ ಪಾಂಡುರAಗ ನಾಯ್ಕ,ವಿವೇಕ್ ನಾಯ್ಕ,ಹಳೆ ಮೀನುಮಾರುಕಟ್ಟೆ ಅಧ್ಯಕ್ಷ ಖಾಜಾ ಹಸನ್ ಉಪಸ್ಥಿತರಿದ್ದರು.

About The Author

error: Content is protected !!