November 18, 2025

ದೇವಗಿರಿ: “ಚಾತುರ್ಮಾಸ್ಯ” ಒಂದು ನೆನಪು ಕೃತಿ ಬಿಡುಗಡೆ.

ಕುಮಟಾ ; ಚಾತುರ್ಮಾಸ್ಯ ಎಂಬುದು ಒಂದು ವೃತ್ತ. ಆಷಾಢ ಶುಕ್ಲ ಪಕ್ಷದ ಏಕಾದಶಿಯಿಂದ ಕಾರ್ತಿಕ ಶುಕ್ಲ ಪಕ್ಷದ ದಶಮಿಯವರೆಗೆ ನಾಲ್ಕು ಮಾಸಗಳ ಕಾಲ ಆಚರಿಸುವ ಕಾರಣ ಈ ವ್ರತಕ್ಕೆ ಚಾತುರ್ಮಾಸವೆಂದು ಹೆಸರು. ಒಂದೊAದು ತಿಂಗಳು ಒಂದೊAದು ಬಗೆಯ ಆಹಾರವನ್ನು ವರ್ಜಿಸುವುದು ಈ ವ್ರತದ ಮಹತ್ವವಾಗಿದೆ ಎಂದು ಚಾತುರ್ಮಾಸ್ಯ ಒಂದು ನೆನಪು ಕೃತಿ ಸಂಪಾದಕ ಪಿ. ಆರ್. ನಾಯ್ಕ ಹೇಳಿದರು.

ಕೋನಳ್ಳಿಯಲ್ಲಿ ನಡೆಯುತ್ತಿರುವ ಚಾತುರ್ಮಾಸದ ಸಂದರ್ಭದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳಿಂದ “ಚಾತುರ್ಮಾಸ್ಯ” ಒಂದು ನೆನಪು ಕೃತಿಯನ್ನು ಬಿಡುಗಡೆಗೊಳಿಸಿ ಆಶೀರ್ವಚನ ಪಡೆದರು.

ಚಾತುರ್ಮಾಸ್ಯ ವೃತಾಚರಣೆ ಮೊದಲ ದಿನದ ಸೇವಾ ಕಾರ್ಯ ದೇವಗಿರಿ ಗ್ರಾಮ ಪಂಚಾಯತ್ ಮಟ್ಟದ ನಾಮಧಾರಿಗಳಿಂದ ನಡೆಸಲಾಯಿತು. ಈ ಸಂದರ್ಭದಲ್ಲಿ ಹೊರೆ ಕಾಣಿಕೆ ಹೊತ್ತು ಎತ್ತಿನಗಾಡಿಯ ಜೊತೆಯಲ್ಲಿ ವಿವಿಧ ವೇಷ ತೊಟ್ಟ ಮಕ್ಕಳೊಂದಿಗೆ ಚಂಡೆ ನಾದದೊಂದಿಗೆ ವಿಶೇಷ ಉಡುಪು ಧರಿಸಿ ಹೊರೆ ಕಾಣಿಕೆ ಸಲ್ಲಿಸಿದ ಕಾರ್ಯಕ್ರಮದ ಸಚಿತ್ರ ವರದಿ ಹಾಗೂ ವಿವಿಧ ಲೇಖನಗಳನ್ನೊಳಗೊಂಡ ಕೃತಿಯು ಇದಾಗಿದೆ ಎಂದರು.
ದೇವಗಿರಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಎಸ್. ಟಿ. ನಾಯ್ಕ ಮಾತನಾಡಿ, ಚಾತುರ್ಮಾಸ್ಯ ನಡೆಯುವ ಪ್ರದೇಶದ ಜನರಲ್ಲಿ ಸುಭಿಕ್ಷೆಯನ್ನು ಉಂಟುಮಾಡಿ ಸ್ವಾಮೀಜಿಗಳ ದರ್ಶನ ಸೇವೆ ಹಾಗೂ ಅಮೃತ ವಚವನ್ನು ಸವಿಯುವ ಅವಕಾಶ ಎಲ್ಲ ಸಮಾಜದ ಜನರಿಗೂ ಲಭಿಸಿರುವುದು ಸಂತೋಷ ತಂದಿದೆ ಎಂದರು.

ಕೃತಿ ಬಿಡುಗಡೆ ಸಮಾರಂಭದಲ್ಲಿ ಚಾತುರ್ಮಾಸ ವ್ರತ ಆಚರಣೆ ಸಮನ್ವಯ ಸಮಿತಿ ಅಧ್ಯಕ್ಷ ಎಚ್. ಆರ್. ನಾಯ್ಕ, ಕುಮಟಾ ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ, ಪ್ರಧಾನ ಸಂಪಾದಕ ಪಿ. ಆರ್. ನಾಯ್ಕ, ಕುಮಟಾ ನೌಕರರ ಸಂಘದ ಅಧ್ಯಕ್ಷ ಎನ್.ಆರ್. ನಾಯ್ಕ, ಹೊನ್ನಾವರ ನೌಕರರ ಸಂಘದ ಅಧ್ಯಕ್ಷ ಸುದೀಶ ನಾಯ್ಕ , ಶಿಕ್ಷಕ ಸಂಘದ ಅಧ್ಯಕ್ಷ ಎಂ.ಜಿ. ನಾಯ್ಕ, ಪ್ರೌಢಶಾಲಾ ಶಿಕ್ಷಕ ಸಂಘದ ಅಧ್ಯಕ್ಷ ಸತೀಶ ನಾಯ್ಕ ಬಗಿ9, ಉಪನ್ಯಾಸಕ ಪ್ರಭಾಕರ ನಾಯ್ಕ, ಸೇವಾ ಸಮಿತಿ ಕಾರ್ಯದರ್ಶಿ ಸಚಿನ ನಾಯ್ಕ, ಪೂಜಾ ಸಮಿತಿ ಕಾರ್ಯದರ್ಶಿ ಮಹೇಶ ನಾಯ್ಕ, ಹರನೀರ ನಾಮಧಾರಿ ಸಂಘದ ಅಧ್ಯಕ್ಷ ಎಂ. ಡಿ. ನಾಯ್ಕ, ದೇವಗಿರಿ ಗ್ರಾ.ಪಂ. ಸದಸ್ಯ ನಾಗೇಶ ನಾಯ್ಕ, ವಕೀಲ ಕೆ. ಆರ್. ನಾಯ್ಕ, ಉದ್ಯಮಿ ಅಕ್ಷಯ ನಾಯ್ಕ, ಶಿಕ್ಷಕ ಸಂಘದ ಉಪಾಧ್ಯಕ್ಷ ಸುರೇಶ ನಾಯ್ಕ, ಜನಾರ್ಧನ ಹರನೀರು, ಪ್ರಕಾಶ ನಾಯ್ಕ, ವಿ.ಜಿ. ನಾಯ್ಕ, ಸುಜಾತ ನಾಯ್ಕ, ಕೃತಿ ಪ್ರಾಯೋಜಕರಾದ ರಮಾ ಮಹೇಶ ನಾಯ್ಕ, ಶಂಕರ ನಾಯ್ಕ, ರಾಜು ನಾಯ್ಕ, ಜೆ.ಕೆ. ನಾಯ್ಕ, ಬಾಬು ನಾಯ್ಕ, ಎಂ.ಡಿ. ನಾಯ್ಕ, ಮಧುಕರ ನಾಯ್ಕ,ಮಹೇಶ ನಾಯ್ಕ, ಶೇಖರ ನಾಯ್ಕ, ನಾರಾಯಣ ನಾಯ್ಕ, ಜಿ. ಎಂ.ನಾಯ್ಕ ಮುಂತಾದವರು ಉಪಸಿದ್ಧರಿದ್ದರು.

About The Author

error: Content is protected !!