ಹೊನ್ನಾವರ : ಪಟ್ಟಣದ ನಂಬರ್ ಎರಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮದಂದು ಎಸ್. ಡಿ.ಎಂ. ಸಿ. ಮತ್ತು ಸಾನ್ ಸಾಲ್ವಾದೋರ್ ಚರ್ಚ್ , ಪೂರ್ವ ವಿದ್ಯಾರ್ಥಿ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪಿ.ಆರ್. ನಾಯ್ಕರನ್ನು ಸನ್ಮಾನಿಸಿ ಮಾತನಾಡಿದರು. ಪ್ರಶಸ್ತಿಗಾಗಿ ಎಂದೂ ಹಾತೊರೆಯದೇ, ಪ್ರಶಸ್ತಿ ಸಿಕ್ಕಿದೆ ಎಂದು ಹಿಗ್ಗದೆ ತನ್ನ ಕೆಲಸವನ್ನು ಪ್ರಾಮಾಣಿಕತನದಿಂದ, ನಮ್ರತೆಯಿಂದ, ವಿದೇಯತೆಯಿಂದ ವಿಶ್ವಾಸದಿಂದ ಮಾಡಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರಿಗೆ ಒಲಿದ ಪ್ರಶಸ್ತಿಯು ನಮ್ಮೆಲ್ಲರಿಗೂ ಪ್ರಶಸ್ತಿ ಗರಿ ಮೂಡಿದಂತಾಗಿದೆ. ಮಕ್ಕಳಿಗೆ ಕಲಿಸಿದ ಕಲಿಕೆಯು ಅವರ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೋ ಅದು ಶಿಕ್ಷಕರ ಪಾಲಿನ ಶಾಶ್ವತ ಪ್ರಶಸ್ತಿಯಾಗುತ್ತದೆ. ಇಂಥ ಶಿಕ್ಷಕರ ಪಾಲಿಗೆ ಒಲಿದು ಬಂದಿರುವ ಪ್ರಶಸ್ತಿ ಇಡೀ ತಾಲೂಕಿನ ಹೆಮ್ಮೆಯಾಗಿದೆ.ತಾಲೂಕಿನ ಸಮಸ್ತ ನಾಗರಿಕರ ಪರವಾಗಿ ಅಭಿನಂದಿಸಿ ಶುಭ ಹಾರೈಸಿದರು.

ಸಮೂಹ ಸಂಪನ್ಮೂಲ ವ್ಯಕ್ತಿ ಪ್ರಕಾಶ ಶೇಟ್ ಮಾತನಾಡಿ, ನಮ್ಮ ತಾಲೂಕಿನಲ್ಲಿ ಅವರು ಸಲ್ಲಿಸಿದ ಸೇವೆ ಅನುಪಮವಾದದ್ದು.ಅವರನ್ನರಸಿ ಬಂದಿರುವ ಪ್ರಶಸ್ತಿ ಶಿಕ್ಷಣ ಇಲಾಖೆಯ ಹಿರಿಮೆ ಹೆಚ್ಚಿಸಿದೆ ಎಂದರು. ಎಸ್. ಡಿ. ಎಂ. ಸಿ.ಉಪಾಧ್ಯಕ್ಷ ಜೋಯ್ ಡಿಸೋಜಾ, ಸದಸ್ಯ ಗುರುರಾಜ ಮೇಸ್ತ ಅಭಿನಂದಿಸಿ ಮಾತನಾಡಿದರು. ಪ್ರಶಸ್ತಿ ಪುರಸ್ಕೃತ ಶಿಕ್ಷಕ ಪಿ.ಆರ್.ನಾಯ್ಕ ಮಾತನಾಡಿ, ಪ್ರಶಸ್ತಿಯು ಇನ್ನಷ್ಟು ಜವಾಬ್ದಾರಿ ಹೆಚ್ಚಿಸಿದೆ ಎಂದು ಎಲ್ಲರನ್ನೂ ಅಭಿನಂದಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್.ಡಿ. ಎಂ. ಸಿ. ಎಲ್ಲಾ ಸದಸ್ಯರು, ಚರ್ಚ್ ಫಾದರ ಸಾಲದೋರ್ ಗೊನ್ಸಾಲ್ವಿಸ್, ವಿದ್ಯಾರ್ಥಿಗಳ ಪರವಾಗಿ ನಾಗರಾಜ ಮತ್ತು ಧನ್ಯ, ಶಾಲೆ ಪರವಾಗಿ ಮುಖ್ಯಾಧ್ಯಾಪಕಿ ಲುವೇಜಿನ ಪಿಂಟೊ, ಹಳೆ ವಿದ್ಯಾರ್ಥಿಗಳ ಪರವಾಗಿ ಅನ್ವೀನ, ತೇಜಸ್ವಿನಿ,ವಷ9, ಸೌಂದರ್ಯ ಸನ್ಮಾನಿಸಿ ಗೌರವಿಸಿದರು.ಪ್ರಾರಂಭದಲ್ಲಿ ಪೂರ್ವ ವಿದ್ಯಾರ್ಥಿ ತೇಜಸ್ವಿನಿ ಮೇಸ್ತ ಭರತನಾಟ್ಯದ ಮೂಲಕ ಸ್ವಾಗತ ಗೀತೆ ಅಭಿನಯಿಸಿದರು. ಮುಖ್ಯಶಿಕ್ಷಕಿ ಲುವೆಜಿನ್ ಪಿಂಟೊ ಸ್ವಾಗತಿಸಿದರೆ, ಶಿಕ್ಷಕಿ ಪ್ಲಾವಿಯಾ ಮೆಂಡೋಸ್ ವಂದಿಸಿದರು.

More Stories
ಶಿಕ್ಷಣ ಇಲಾಖೆ ತಂಡ ಚಾಂಪಿಯನ್
ಕಣ್ಣಿನ ಉಚಿತ ತಪಾಸಣಾ ಕಾರ್ಯಕ್ರಮ
ಕೆರೆಕೋಣದಲ್ಲಿ “ಪೂರ್ಣಚಂದ್ರ ತೇಜಸ್ವಿ – ಒಂದು ಮೆಲುಕು”