November 19, 2025

ಗಂಗೊಳ್ಳಿಯಲ್ಲಿ ಗಣೇಶ ಮೊಗೇರ ಶವ ಪತ್ತೆ

ಭಟ್ಕಳ: ಭಟ್ಕಳದ ತೆಂಗಿನಗುAಡಿ ಬಂದರಿಯಲ್ಲಿ ಕಳೆದ ವಾರ ನಡೆದ ದೋಣಿ ದುರಂತದಲ್ಲಿ ನಾಪತ್ತೆಯಾಗಿದ್ದ ಮೀನುಗಾರರಲ್ಲಿ ಮತ್ತೊಬ್ಬನ ಶವ ಗಂಗೊಳ್ಳಿ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.

ಶವ ಪತ್ತೆಯಾದ ವ್ಯಕ್ತಿಯನ್ನು ಗಣೇಶ ಮೊಗೇರ ಎಂದು ಗುರುತಿಸಲಾಗಿದೆ. ಶವ ಕಂಡ ಬಂದರು ಪ್ರದೇಶಕ್ಕೆ ಮಲ್ಪೆ ಈಶ್ವರ್ ತಂಡ ಹಾಗೂ ಕರಾವಳಿ ಪೊಲೀಸ್ ಪಡೆ ಸ್ಥಳಕ್ಕೆ ಧಾವಿಸಿ ಶವವನ್ನು ಹೊರತೆಗೆದು ಮುಂಡಳಿ ದಡ ಮಾರ್ಗವಾಗಿ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು.

ತಾಲೂಕು ಆಡಳಿತದ ಮಾಹಿತಿ ಪ್ರಕಾರ ಶವವನ್ನು ಭಟ್ಕಳಕ್ಕೆ ತರಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗಿದೆ. ಇನ್ನುಳಿದ ನಾಪತ್ತೆಯಾದ ಮೀನುಗಾರರ ಶೋಧ ಕಾರ್ಯಾಚರಣೆ ಮುಂದುವರೆದಿದೆ.

About The Author

error: Content is protected !!