November 19, 2025

ತಾಲೂಕಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೀನಾ ವೈದ್ಯ ಕಾಲೇಜು ವಿದ್ಯಾರ್ಥಿಗಳ ಸಾಧನೆ.

ಭಟ್ಕಳ : ಇಲ್ಲಿನ ಮುರುಡೇಶ್ವರದ ಬೀನಾ ವೈದ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಟ್ಕಳದ ಅಂಜುಮನ್ ವಿಮೇನ್ಸ್ ಕಾಲೇಜಿನಲ್ಲಿ ನಡೆದ ತಾಲೂಕಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳು ಸ್ಪರ್ಥೆಗಳಲ್ಲಿ ಹೆಚ್ಚಿನ ಸ್ಥಾನ ಪಡೆಯುವುದರ ಮೂಲಕ ಬೀನಾ ವೈದ್ಯ ಶಿಕ್ಷಣ ಸಂಸ್ಥೆಗೆ ಕೀರ್ತಿ ತಂದಿರುತ್ತಾರೆ.

ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳಾದ ಕುಮಾರಿ. ವೈಷ್ಣವಿ ಗೌಡ(ಇಂಗ್ಲೀಷ್ ಪ್ರಬಂಧ ಸ್ಪರ್ಧೆ) ಪ್ರಥಮ ಸ್ಥಾನ, ಪೂಜಶ್ರೀ ಮೊಗೇರ (ಕನ್ನಡ ಚರ್ಚಾ ಸ್ಪರ್ಧೆ) ದ್ವಿತೀಯ ಸ್ಥಾನ, ಹಾಗೂ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಾದ ಕುಮಾರಿ. ತಜ್ಮೀನ್ ಬಾನು ( ಇಂಗ್ಲೀಷ್ ಪ್ರಬಂಧ ಸ್ಪರ್ಧೆ) ದ್ವಿತೀಯ ಸ್ಥಾನ, ಮಾನ್ಯ ನಾಯ್ಕ ( ಜಾನಪದ ಗೀತೆ)ತೃತೀಯ ಸ್ಥಾನ, ಹರ್ಷಿತಾ ಜಿ ನಾಯ್ಕ ( ಕನ್ನಡ ಚರ್ಚಾ ಸ್ಪರ್ಧೆ)ತೃತೀಯ ಸ್ಥಾನ, ದೀಕ್ಷಿತಾ ಮೊಗೇರ(ಏಕಪಾತ್ರಾಭಿನಯ) ತೃತೀಯ ಸ್ಥಾನ ಪಡೆದಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಮಾನ್ಯ ಸಚಿವರು ಮೀನುಗಾರಿಗೆ,ಬಂದರು ಒಳನಾಡು ಜಲಸಾರಿಗೆ ಇಲಾಖೆ ಕರ್ನಾಟಕ ಸರ್ಕಾರ ಹಾಗೂ ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಆದ ಶ್ರೀ ಮಂಕಾಳ್ ಎಸ್ ವೈದ್ಯರವರು, ಬೀನಾ ವೈದ್ಯ ಶಿಕ್ಷಣ ಸಂಸ್ಥೆಯ ಟ್ರಸ್ಟಿ, ಆಡಳಿತ ನಿರ್ದೇಶಕಿಯವರಾದ ಡಾ.ಪುಷ್ಪಲತಾ ಮಂಕಾಳ್ ವೈದ್ಯರವರು, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ನಯೀಮ್ ಗೊರಿಯವರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ.

About The Author

error: Content is protected !!