ಮುರ್ಡೇಶ್ವರ: ಶೆಟ್ಟರಕೇರಿ ರಸ್ತೆಯಲ್ಲಿರುವ ಭಾರತ ಗೇಸ್ಟ್ ಹೌಸ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಮಧ್ಯರಾತ್ರಿ ದಾಳಿ ನಡೆಸಿ ಇಬ್ಬರು ನೊಂದ ಮಹಿಳೆಯರನ್ನು ರಕ್ಷಿಸಿ, ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.
ಮುರ್ಡೇಶ್ವರ ವೃತ್ತದ ಸಿಪಿಐ ಜಗದೀಶ ಹಂಚನಾಳ ಅವರ ನೇತೃತ್ವದಲ್ಲಿ ಪಿಎಸ್‌ಐ ಹಣಮಂತ ಬಿರಾದಾರ (ಕಾ&ಸು), ಪಿಎಸ್‌ಐ ಲೋಕನಾಥ ರಾಠೋಡ (ತನಿಖೆ) ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕಾರ್ಯಾಚರಣೆ ನಡೆಸಿದರು.
ದಾಳಿಯ ವೇಳೆ ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದ್ದು, ಅವರೊಂದಿಗೆ ಇದ್ದ ಮೂವರು ವಿಠಪುರುಷರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಈ ಸಂಬಂಧ ಆರೋಪಿ ರೂಮ್ ಬಾಯ್ ಬಂಧಿಸಲಾಗಿದೆ. ಆತನು ಹೆಚ್ಚಿನ ಹಣದ ಆಮಿಷ ತೋರಿಸಿ ಮಹಿಳೆಯರನ್ನು ಲಾಡ್ಜ್‌ನಲ್ಲಿ ಇಟ್ಟು ವೇಶ್ಯಾವಾಟಿಕೆ ನಡೆಸುತ್ತಿದ್ದನೆಂಬ ಆರೋಪ ಕೇಳಿಬಂದಿದೆ.
ದಾಳಿಯ ವೇಳೆ ಸಿಕ್ಕ ಸ್ವತ್ತುಗಳನ್ನು ಜಪ್ತಪಡಿಸಲಾಗಿದ್ದು, ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ. ರಕ್ಷಿಸಲಾದ ಮಹಿಳೆಯರನ್ನು ಭಟ್ಕಳದ ಸಾಂತ್ವನ ಕೇಂದ್ರಕ್ಕೆ ಒಪ್ಪಿಸಲಾಗಿದೆ.

More Stories
ಉಚಿತ ಕಿಡ್ಸ್ ಕಂಪ್ಯೂಟರ್ ತರಬೇತಿ
ಮುರ್ಡೇಶ್ವರ ಠಾಣಾ ವ್ಯಾಪ್ತಿಯ ಇಬ್ಬರು ರೌಡಿಶೀಟರ್ಗಳಿಗೆ 6 ತಿಂಗಳ ಗಡಿಪಾರು
ಮುರ್ಡೇಶ್ವರ ದೇವಸ್ಥಾನದಲ್ಲಿ ಸರಗಳ್ಳತನ: ಅಂತರ ಜಿಲ್ಲಾ ಆರೋಪಿತಳ ಬಂಧನ