November 19, 2025

ಮೀನುಗಾರಿಕೆ ವೇಳೆ ಕುಸಿದು ಬಿದ್ದು ವ್ಯಕ್ತಿ ದುರ್ಮರಣ

ಭಟ್ಕಳ: ತಾಲೂಕಿನ ಮಾವಿನಕುರ್ವೆ ಸಮೀಪ ಸಮುದ್ರದಲ್ಲಿ ಮೀನುಗಾರಿಕೆಯ ವೇಳೆ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ದುರಂತ ಘಟನಾ ನಡೆದಿದೆ.
ಮೃತರನ್ನು ಶ್ರೀಧರ ಪರಮೇಶ್ವರ ಖಾರ್ವಿ ಎಂದು ಗುರುತಿಸಲಾಗಿದೆ. ಅವರು ಮಾವಿನಕುರ್ವೆ ಬಂದರಿನಿAದ ಸುಮಾರು 15 ಕಿ.ಮೀ ದೂರ ಸಮುದ್ರಕ್ಕೆ ಇಳಿದು ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬಲೆ ಎಳೆಯುವ ಕೆಲಸದ ಮಧ್ಯದಲ್ಲಿ ಅಚಾನಕ್ ನೆಲಕ್ಕುರುಳಿ ಬಿದ್ದಿರುವುದಾಗಿ ಜೊತೆಯಲ್ಲಿದ್ದ ಮೀನುಗಾರರು ತಿಳಿಸಿದ್ದಾರೆ.

ತಕ್ಷಣವೇ ಅವರನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆಗೆ ಮುನ್ನವೇ ಅವರು ಮೃತರಾಗಿರುವುದನ್ನು ವೈದ್ಯರು ದೃಢಪಡಿಸಿದರು. ಘಟನೆ ಕುರಿತು ಮೃತರ ಪುತ್ರ ರತೀಶ ಖಾರ್ವಿ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಆರಂಭಿಸಿದ್ದಾರೆ.

About The Author

error: Content is protected !!