ಬೈಂದೂರು : ಇಲ್ಲಿನ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ಸನ್ನಿಧಿಯಲ್ಲಿ ಕಾರ್ತಿಕ ದೀಪೋತ್ಸವ ಹಾಗೂ ಅಷ್ಟಾವಧಾನ ಸೇವೆ, ರಂಗ ಪೂಜೆ, ಉತ್ತರ ಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ಶುಕ್ರವಾರ ಸಂಜೆ ಅದ್ದೂರಿಯಿಂದ ನಡೆಯಿತು.

ಆನಗಳ್ಳಿ ವೇದಮೂರ್ತಿ ಡಾ ಚೆನ್ನಕೇಶವ ಗಾಯತ್ರಿ ಭಟ್ ಇವರ ನೇತೃತ್ವದಲ್ಲಿ ರಂಗ ಪೂಜೆ ಉತ್ಸವ, ತುಳಸಿ ಪೂಜೆ, ಅಷ್ಟಾವಧಾನ ಸೇವೆ ಹಾಗೂ ಉತ್ತರ ಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕರಾದ ಬಿ. ಕೃಷ್ಣಮೂರ್ತಿ ನಾವಡ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಸಿದರು.
ದೇವಳದ ಸೇವಾ ಸಮಿತಿ ಅಧ್ಯಕ್ಷ ನಾಗರಾಜ್ ಶೆಟ್ಟಿ, ಕಾರ್ಯದರ್ಶಿ ಎಸ್. ಶಿವರಾಮ ಪೂಜಾರಿ, ಸದಸ್ಯರಾದ ಶಂಕರ ಮೊಗವೀರ, ನಾಗರಾಜ ಗಾಣಿಗ, ಮಂಜುನಾಥ ಆಚಾರ್ಯ, ಸತ್ಯಪ್ರಸನ್ನ, ಪಾತ್ರಿಗಳಾದ ಅಣ್ಣಪ್ಪ ಪೂಜಾರಿ ಹಾಗೂ ಊರಿನ ಗ್ರಾಮಸ್ಥರು ದೀಪೋತ್ಸವದಲ್ಲಿ ಭಾಗವಹಿಸಿದ್ದರು.
ವರದಿ : ಎಚ್ ಸುಶಾಂತ್ ಆಚಾರ್ ಬೈಂದೂರು

More Stories
ಸುರಭಿ ಜೈಸಿರಿ -2026 ಬಿಂದುಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ.
ಕಂಬದಕೋಣೆ ಗ್ರಾಮ ಪಂಚಾಯತ್ನಲ್ಲಿ ಸುದ್ಧಿಗೋಷ್ಟಿ
ಬೈಂದೂರು : ಅನಿರ್ಧಿಷ್ಟಾವಧಿ ಧರಣಿ 104ನೇ ದಿನಕ್ಕೆ . ಗೆರಟೆ ಹಿಡಿದು ವಿಶೇಷ ಪ್ರತಿಭಟನೆ