August 29, 2025

ಭಕ್ತಿ ತೈಲಧಾರಣೆಯಂತಿರಬೇಕು- ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನಮ್ ಪೀಠಾಧೀಶರಾದ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್

ಕುಮಟಾ: ನಮ್ಮಲ್ಲಿ ಭಕ್ತಿಯ ಪರಾಕಾಷ್ಠೆ ಬಂದಾಗ ಏನನ್ನು ಬೇಕಾದರೂ ಮಾಡುವ ಶಕ್ತಿ ಬರುತ್ತದೆ. ಭಕ್ತಿ ತೈಲಧಾರಣೆಯಂತಿದ್ದರೆ ದೈವಾನುಗ್ರಹ ಪ್ರಾಪ್ತವಾಗುತ್ತದೆ ಎಂದು ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ನುಡಿದರು.


ತಾಲೂಕಿನ ಶ್ರೀ ವನದುರ್ಗಾ ದೇವಾಲಯದಲ್ಲಿ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನಮ್ ಪೀಠಾಧೀಶರಾದ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಅವರ ಚಾತುರ್ಮಾಸ್ಯ ವ್ರತಾಚರಣೆಯ 25ನೇ ದಿನದ ಕಾರ್ಯಕ್ರಮದಲ್ಲಿ ಹೊನ್ನಾವರದ ಮುಗ್ವಾ, ಹೊಸಾಕುಳಿ ಮತ್ತು ಸಿದ್ದಾಪುರ ಭಾಗದ ನಾಮಧಾರಿ ಸಮಾಜಬಾಂಧವರಿAದ ಗುರು ಸೇವೆ ಸ್ವೀಕರಿಸಿ, ಆಶೀರ್ವಚನ ನೀಡಿದ ಶ್ರೀಗಳು. ಬದುಕಿನ ದೊಡ್ಡ ಬೆಳಕೆಂದರೆ ವೇದಗಳು, ಉಪನಿಷ್‌ಗಳು, ಪುರಾಣಗಳು, ಧರ್ಮಗ್ರಂಥಗಳಾಗಿವೆ. ಬಾಹ್ಯದ ಬದುಕಿಗೆ ಇಂದಿನ ಶಿಕ್ಷಣ ವಿವಿಧ ಪದವಿಗಳು ಆಸರೆಯಾಗಿದೆ. ಈ ಪದವಿಗಳು ಕೇವಲ ಹಣ, ಅಧಿಕಾರ, ಸಂಪತ್‌ನ್ನು ನೀಡಬಲ್ಲದು. ಆದರೆ ಪರಮಾನಂದದ ಸುಖವನ್ನು ನೀಡಲು ಸಾಧ್ಯವಿಲ್ಲ. ಆಂತರೀಕ ಬದುಕಿಗೆ ಆಧ್ಯಾತ್ಮದ ಹೊಳಪನ್ನು ನೀಡುವುದು ವೇದ, ಪುರಾಣಗಳಾಗಿವೆ. ಅವು ಮನಸ್ಸಿನಲ್ಲಿ ಭಕ್ತಿಯ ಭಾವ ಮೂಡಿಸುವ ಮೂಲಕ ಭಗವಂತನೆಡೆಗೆ ಸಾಗುವ ಮಾರ್ಗ ತೋರುತ್ತದೆ ಎಂದು ಸಂತ ತುಕಾರಾಮನ ಭಕ್ತಿಯ ಕಥೆಯನ್ನು ಮನೋಜ್ಞವಾಗಿ ವಿವರಿಸಿದ ಶ್ರೀಗಳು, ಭಜನೆ, ಸಂಕೀರ್ತನೆ, ಸತ್ಸಂಗಗಳ ಅಭ್ಯಾಸವನ್ನು ಮನಸಿಗೆ ನಿರಂತರವಾಗಿ ಮಾಡಿಸಿದಾಗ ಭಗವಂತ್ ಪ್ರಾಪ್ತಿಯಾಗುವ ಮೂಲಕ ಸರ್ವ ಶ್ರೇಷ್ಠವಾದ ಆನಂದ ನಮ್ಮದಾಗುತ್ತದೆ. ಹಾಗಾಗಿ ನಾವು ಈ ಪ್ರಪಂಚಕ್ಕೆ ಬಂದ ಮೇಲೆ ಜ್ಞಾನ, ಭಕ್ತಿ, ಕರ್ಮ ಇದರಲ್ಲಿ ಯಾವುದಾದರೂ ಒಂದು ಯೋಗದ ಮೂಲಕ ಭಗವಂತನನ್ನು ಕಾಣಬಹುದು. ಇದಕ್ಕೆ ಚಾತುರ್ಮಾಸ್ಯದ ಎಂಬ ಪುಣ್ಯದ ಕಾರ್ಯ ಆಸರೆಯಾಗುತ್ತದೆ. ಜಾತಿ ಸಂಘಟನೆ ಮಾಡುಬಹುದು. ಆದರೆ ಜ್ಞಾನವನ್ನು ಸಮಾಜಕ್ಕೆ ಹಂಚುವ ಕಾರ್ಯ ಮಾಡಬೇಕು. ನಮ್ಮ ಜೊತೆಗೆ ಇತರರನ್ನು ಬೆಳೆಸುವ ಕಾರ್ಯ ಮಾಡುವ ಮೂಲಕ ಎಲ್ಲ ಸಮಾಜದವರನ್ನು ಕೂಡ ಒಟ್ಟೊಟ್ಟಿಗೆ ಕೊಂಡೊಯ್ಯುವ ಮೂಲಕ ಸಮಾಜದಲ್ಲಿ ಸಹೋದರತೆಯ ಭಾವ ಬಿತ್ತಬೇಕು. ಆ ನಿಟ್ಟಿನಲ್ಲಿ ನಾವೆಲ್ಲ ಕಾರ್ಯಮುಖ್ಮರಾಗುವ ಮೂಲಕ ಸಮಾಜವನ್ನು ಉದ್ಧರಿಸುವ ಕಾರ್ಯವನ್ನು ಮಾಡೋಣ ಎಂದು ನುಡಿದರು.

ಚಾತುರ್ಮಾಸ್ಯದ 25ನೇ ದಿನದ ಕಾರ್ಯಕ್ರಮದಲ್ಲಿ ಹೊನ್ನಾವರ ತಾಲೂಕಿನ ಮುಗ್ವಾ ಮತ್ತು ಹೊಸಾಕುಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಗ್ವಾ, ಕವಲಕ್ಕಿ, ನಗರೆ, ದೊಡ್ಡಹಿತ್ತಲು, ಹುಡಗೋಡಮಕ್ಕಿ, ನಾಮಧಾರಿ ಸಂಘ, ಸಿದ್ದಾಪುರ ಹಾಗೂ ಶ್ರೀ ರಾಮ ಕ್ಷೇತ್ರ ಸೇವಾ ಸಮಿತಿ,ಸಿದ್ದಾಪುರ ಹಾಗೂ ಸಾರಸ್ವತ ಸಮಾಜ ಮಲ್ಲಾಪುರ, ಶ್ರೀ ಮಹಾಲಸಾ ದುರ್ಗಾದೇವಿ ಕೆಂಡಮಾಹಸತಿ ನಾಗದೇವತಾ ದೇವಸ್ಥಾನ ಅಧ್ಯಕ್ಷರು ಹಾಗೂ ಸದಸ್ಯರು ದೈವಜ್ಞ ಸಮಾಜ ಬಾಂಧವರು ಸೋನಾಕೇರಿ, ಕೋನಳ್ಳಿ, ನಾಡವರ ಸಮಾಜ ಕುಮಟಾ ಗ್ರಾಮದ ಸಮಸ್ತ ನಾಮಧಾರಿ ಸಮಾಜ ಬಾಂಧವರು ಗುರುಪಾದುಕಾ ಪೂಜೆ ಸಲ್ಲಿಸಿದರು. ಐ. ವಿ. ನಾಯ್ಕ್ ನಗರೆ, ಎಮ್. ಪಿ. ನಾಯ್ಕ್ ಸಹಾಯಕ ಅಭಿಯಂತರರು ಲೋಕೋಪಯೋಗಿ ಇಲಾಖೆ ಕುಮಟಾ, ಮಂಜುನಾಥ ಸಣಕೊಸ ನಾಯ್ಕ್ ಜಲವಳ್ಳಿ-ಕೇರವಳ್ಳಿ, ನಾಗಚಂದ್ರ ಗಣಪಯ್ಯ ನಾಯ್ಕ್ ಹೆರವಟ್ಟಾ, ರಂಜಿತಾ ಮತ್ತು ದಿಲೀಪ್ ಮೋಹನ್ ನಾಯ್ಕ್ ಕೋನಳ್ಳಿ, ವಿಶ್ವನಾಥ ಜಟ್ಟಿ ನಾಯ್ಕ್ ಕುಟುಂಬದವರು ಉಪ್ಪಾರಕೇರಿ, ಕುಮಟಾ ಇವರು ವೈಯಕ್ತಿಕ ಗುರುಪಾದುಕಾ ಪೂಜೆ ಸಲ್ಲಿಸಿದರು. ಸಿ. ಬಿ. ನಾಯ್ಕ್ ಕುಟುಂಬದವರು ನಗರೆ ಹಾಗೂ ಈರಪ್ಪ ಮಂಜಪ್ಪ ನಾಯ್ಕ್ ಕುಟುಂಬದವರು ಭಟ್ಕಳ ಇವರು ವಿಷೇಶ ಪೂಜೆ ಸಲ್ಲಿಸಿದರು. ಜಗದೀಶ್ ಶಾಲಿಯಾನ್ ಅಸಿಸ್ಟೆಂಟ್ ಡೈರೆಕ್ಟರ ಪಬ್ಲಿಕ್ ಪ್ರೊಸಿಕ್ಯೂಟರ್ ಮಂಗಳೂರು, ಶೋಭಾ ನಾಯ್ಕ್ ಪಬ್ಲಿಕ್ ಪ್ರೊಸಿಕ್ಯೂಟರ್ ಮಂಗಳೂರು, ಜಿಪಂ ಮಾಜಿ ಸದಸ್ಯರಾದ ಹೊನ್ನಪ್ಪ ನಾಯಕ ಅವರು ಆಗಮಿಸಿದ್ದರು ಹಾಗೂ ಅನೇಕರು ಗುರು ಸೇವೆ ಸಲ್ಲಿಸಿದರು. ಶ್ರೀ ಮಹಾಲಸಾ ದುರ್ಗಾದೇವಿ ಕೆಂಡಮಾಹಸತಿ ನಾಗದೇವತಾ ದೇವಸ್ಥಾನ ಅಧ್ಯಕ್ಷರು ಹಾಗೂ ಸದಸ್ಯರು, ಚಂದ್ರಶೇಖರ ವೆಂಕ್ಟ ನಾಯ್ಕ್ ಮತ್ತು ಮಾದೇವಿ ಮಂಜುನಾಥ ನಾಯ್ಕ್ ಅರೇಅಂಗಡಿ ಅವರು ಸಿಹಿ ವಿತರಿಸಿದರು. ಬಳಿಕ ಶ್ರೀಗಳು ಎಲ್ಲ ಭಕ್ತರಿಗೆ ಫಲಮಂತ್ರಾಕ್ಷತೆ ವಿತರಿಸಿದರು. ಮಧ್ಯಾಹ್ನ ನಡೆದ ಪ್ರಸಾಧ ಭೋಜನದಲ್ಲಿ ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡು ಧನ್ಯತೆ ಪಡೆದರು.

About The Author