November 18, 2025

ಮಹತೋಭಾರ ಸೇನೇಶ್ವರ ದೇವಸ್ಥಾನ ಉತ್ಸವ ಮೂರ್ತಿ ವನಭೋಜನ

ಬೈಂದೂರು : ಮಹತೋಭಾರ ಸೇನೇಶ್ವರ ದೇವಸ್ಥಾನ ಬೈಂದೂರು ಇಲ್ಲಿನ ದೀಪೋತ್ಸವದ ಮುಂಚಿತವಾಗಿ ಉತ್ಸವ ಮೂರ್ತಿ ವನಭೋಜನ ಧಾರ್ಮಿಕ ಕಾರ್ಯ ಬೈಂದೂರು ಚಚ್ರೋðಡ್ ಜಟ್ಟಿಗ, ನಾಗದೇವರ ಸನ್ನಿಧಿಯಲ್ಲಿ ಸೋಮವಾರ ನಡೆಯಿತು.

ದೇಳದ ತಂತ್ರಿ ರಾಜೇಶ್ ಐತಾಳ್ ಅವರ ನೇತೃತ್ವದಲ್ಲಿ ಉತ್ಸವ ಮೂರ್ತಿ ವನಭೋಜನದ ಧಾರ್ಮಿಕ ವಿಧಿವಿಧಾನ ನಡೆಸಿದರು.
ಸಂಜೆ ಜಟ್ಕನಕಟ್ಟೆಯಿಂದ ಬೈಂದೂರಿನ ರಥಬೀದಿಗಳ ಮೂಲಕ ಸೇನೇಶ್ವರ ದೇವಸ್ಥಾನದವರೆಗೆ ವನಭೋಜನ ಉತ್ಸವ ಮೂರ್ತಿ ನಡೆಯಿತು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಿರೀಶ್ ಬೈಂದೂರು, ವನಭೋಜನ ಸೇವಾಕರ್ತರಾದ ರವಿಕಲಾ ಜ್ಯುವೆಲ್ಲರ್ ಬಂಕೇಶ್ವರ ಮಾಲಿಕ ಕೆ ಮಂಜುನಾಥ್ ಶೇಟ್ ಕುಟುಂಬದವರು ವಿದ್ಯಾನಗರ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ ದೊಟ್ಟಯ್ಯ ಪೂಜಾರಿ, ಜಯರಾಮ್ ಯಡ್ತರೆ, ಇಂದಿರಾ ಕೊಠಾರಿ, ಶಾಂತಾ ಮಹಾಬಲೇಶ್ವರ ಆಚಾರ್ಯ ಬಂಕೇಶ್ವರ ಹಾಗೂ ಭಕ್ತಾಧಿಗಳು ಇದ್ದರು.

ವರದಿ : ಎಚ್.ಸುಶಾಂತ್ ಆಚಾರ್ ಬೈಂದೂರು

About The Author

error: Content is protected !!