March 2, 2026

ಧಾರವಾಡದ ಜೆ. ಎಸ್. ಎಸ್. ಕಾಲೇಜ್‌ಚಾಂಪಿಯನ್, ಸವಾಲನ್ನು ಎದುರಿಸಲು ಕ್ರೀಡೆ ಸಹಕಾರಿ-ಡಿ.ವೈ.ಎಸ್.ಪಿ. ಮಂಜುನಾಥಗೌಡ

ಹೊನ್ನಾವರ : ಕ್ರೀಡೆ ವ್ಯಕ್ತಿ-ವ್ಯಕ್ತಿಗಳ ನಡುವೆ, ದೇಶದೇಶಗಳ ನಡುವೆ ಪ್ರೀತಿಯನ್ನುಬೆಳೆಸುತ್ತದೆ. ಅವಮಾನ, ಸೋಲು, ಸವಾಲುಗಳನ್ನು ಎದುರಿಸಲುಕ್ರೀಡೆ ಕಲಿಸಿಕೊಡುತ್ತದೆ ಎಂದುಕರ್ನಾಟಕ ಲೋಕಾಯುಕ್ತ ಡಿ.ವೈ.ಎಸ್.ಪಿ. ಮಂಜುನಾಥಗೌಡ ಹೇಳಿದರು.


ಅವರು ಕ.ವಿ.ವಿ. ಧಾರವಾಡ ಮತ್ತು ಹೊನ್ನಾವರದ ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯ ಇವುಗಳ ಸಹಯೋಗದಲ್ಲಿ 3 ದಿನಗಳ ಕಾಲ ನಡೆದ ಕ.ವಿ.ವಿ. ಅಂತರ್ ಮಹಾವಿದ್ಯಾಲಯಗಳ 72 ನೇ ಅಥ್ಲೆಟಿಕ್ಸ್ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಇಂದಿನ ಯುವಜನತೆಯಲ್ಲಿ ಸೋಲನ್ನುಎದುರಿಸುವ ಶಕ್ತಿ ಇಲ್ಲ. ಕ್ರೀಡೆ ಶಿಸ್ತು ಸಂಯಮ, ತಾಳ್ಮೆ ಎಲ್ಲವನ್ನು ಕಲಿಸುವ ಮಹಾಗುರುಇದ್ದಂತೆಎAದುಅವರು ಹೇಳಿದರು.


ಕ.ವಿ.ವಿ. ನಿವೃತ್ತ ಕುಲಪತಿಗಳಾದ ಡಾ. ಬಿ. ಎಂ. ಪಾಟೀಲ ಮಾತನಾಡಿ, ಯಶಸ್ವಿಯಾಗಿ ದ್ವಿತೀಯ ಬಾರಿಗೆಅಥ್ಲೆಟಿಕ್‌ಕ್ರೀಡಾಕೂಟವನ್ನು ಸಂಘಟಿಸಿದ ಎಸ್. ಡಿ. ಎಂ. ಕಾಲೇಜಿಗೆಧನ್ಯವಾದ ಅರ್ಪಿಸಿದರು.


147 ಅಂಕಗಳನ್ನು ಗಳಿಸಿ ಜೆ.ಎಸ್.ಎಸ್. ಕಾಲೇಜ್‌ಧಾರವಾಡಚಾಂಪಿಯನ್ ಪಟ್ಟ ಅಲಂಕರಿಸಿದರೆ, ಧಾರವಾಡದಕರ್ನಾಟಕಆರ್ಟ್ಸ್ಕಾಲೇಜ್ 146 ಅಂಕ ಗಳಿಸಿ ರನ್ರ‍್ಸ್ಪ್‌ಆಯಿತು. ಎಸ್.ಡಿ.ಎಂ. ಪದವಿ ಕಾಲೇಜು ದ್ವಿತೀಯರನ್ನರ್‌ಅಪ್ ಪ್ರಶಸ್ತಿಗೆ ಭಾಜನವಾಯಿತು. ಪುರುಷರ ವಿಭಾಗದ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕಆರ್ಟ್ಸ್ಕಾಲೇಜ್, ಧಾರವಾಡ ಪ್ರಥಮ, ಜೆ.ಎಸ್.ಎಸ್. ಕಾಲೇಜ್‌ಧಾರವಾಡ ದ್ವಿತೀಯ ಹಾಗೂ ಎಸ್.ಡಿ.ಎಂ. ಕಾಲೇಜ್ ಹೊನ್ನಾವರತೃತೀಯ ಸ್ಥಾನ ಮತ್ತು ಮಹಿಳೆಯರ ವಿಭಾಗದಲ್ಲಿಜೆ.ಎಸ್.ಎಸ್. ಕಾಲೇಜುಧಾರವಾಡಪ್ರಥಮ, ಕರ್ನಾಟಕಆರ್ಟ್ಸ್ಕಾಲೇಜ್, ಧಾರವಾಡ ದ್ವಿತೀಯ, ಸರಕಾರಿ ಪ್ರಥಮದರ್ಜೆಕಾಲೇಜು, ಮಂಕಿ ತೃತೀಯ ಸ್ಥಾನ ಅಲಂಕರಿಸಿತು.


ಕರ್ನಾಟಕಆರ್ಟ್ಸ್ಕಾಲೇಜಿನ ಪ್ರಸನ್ನಕುಮಾರ್‌ಮುನ್ನುರ್ ಮತ್ತು ಶ್ರಾವಣಿ ಭಾತೆಅತ್ಯುತ್ತಮಕ್ರೀಡಾಪಟು ಪ್ರಶಸ್ತಿಗೆ ಭಾಜನರಾದರು.
ಎಂ. ಪಿ. ಇ. ಸೊಸೈಟಿಯಅಧ್ಯಕ್ಷರಾದಕೃಷ್ಣಮೂರ್ತಿ ಭಟ್ಟ, ಉಪಾಧ್ಯಕ್ಷ ನಾಗರಾಜಕಾಮತ್, ಶ್ರೀಕಾಂತ ನಾಯ್ಕ, ಉದಯ ನಾಯ್ಕ, ಸುರೇಶ್ ಶೆಟ್ಟಿ, ಶ್ರೀಕಲಾ ಶಾಸ್ತಿç,ಕಾಲೇಜಿನ ಪ್ರಾಚಾರ್ಯಡಾ. ಡಿ. ಎಲ್. ಹೆಬ್ಬಾರ್, ಡಾ. ಎಂ. ಜಿ. ಹೆಗಡೆ, ಸಂಘಟನಾ ಕಾರ್ಯದರ್ಶಿ ಆರ್. ಕೆ. ಮೇಸ್ತ, ಕಾರ್ತಿಕ್‌ಗೌಡ ಉಪಸ್ಥಿತರಿದ್ದರು.
ಡಾ. ಎಂ. ಜಿ. ಹೆಗಡೆ ಸ್ವಾಗತಿಸಿದರು. ಪ್ರಶಾಂತ ಮೂಡಲಮನೆ ನಿರೂಪಿಸಿದರು. ಆರ್. ಕೆ. ಮೇಸ್ತ ವಂದಿಸಿದರು.

About The Author

error: Content is protected !!