March 1, 2026

ಹಬ್ಬದ ಸಡಗರ ಸೃಷ್ಟಿಸಿದ ಪುರಪ್ರವೇಶ, ಪರ್ತಗಾಳಿಯಲ್ಲಿ ರಾಮರಥಕ್ಕೆ ಭವ್ಯ ಸ್ವಾಗತ

ಪರ್ತಗಾಳಿ : ಶ್ರೀ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠವು 550 ವರ್ಷ ಪೂರೈಸುತ್ತಿರುವ ನಿಮಿತ್ತ ಆಯೋಜಿಸಲಾಗಿರುವ ಸಾರ್ಧ ಪಂಚ ಶತಮಾನೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಶ್ರೀ ರಾಮ ದಿಗ್ವಿಜಯ ರಥಯಾತ್ರೆಯು ಕರ್ನಾಟಕ ಮತ್ತು ಗೋವಾದ ವಿವಿಧ ಕೇಂದ್ರಗಳಿಗೆ ಭೇಟಿನೀಡಿ ಬುಧವಾರ ಸಂಜೆ ಪುರ ಪ್ರವೇಶ ಮಾಡಿತು.

ಈ ಸಂದರ್ಭದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಸಮಾಜ ಬಾಂಧವರು, ಭಕ್ತರು ಜಯಘೋಷ ಮತ್ತು ಹರ್ಷೋದ್ಘಾರದೊಂದಿಗೆ ರಥವನ್ನು ಶ್ರೀಮಠಕ್ಕೆ ಬರಮಾಡಿಕೊಂಡರು. ಪರ್ತಗಾಳಿ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶತೀರ್ಥ ಸ್ವಾಮೀಜಿಯವರು ರಥವನ್ನು ಬರಮಾಡಿಕೊಂಡು ಶ್ರೀರಾಮ ಮತ್ತು ಪರಿವಾರ ದೇವರಿಗೆ ಪೂಜೆ ಸಲ್ಲಿಸಿದರು. ನಂತರ ರಥವನ್ನು ಮೆರವಣಿಗೆಯಲ್ಲಿ ಮಠಕ್ಕೆ ತರಲಾಯಿತು.
ಈ ಸಂದರ್ಭದಲ್ಲಿ ವಿವಿಧ ಪ್ರದೇಶದಿಂದ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜಿ.ಎಸ್.ಬಿ ಸಮಾಜ ಬಾಂಧವರು, ಜೈಘೋಷ ಮೊಳಗಿಸಿ, ಸಿಡಿಮದ್ದು ಪ್ರದರ್ಶಿಸಿ ಹಬ್ಬದ ಸಡಗರ ಸೃಷ್ಟಿಸಿದರು. ಇನ್ಫೋಸಿಸ್ ಮಾಜಿ ಚೆರಮೆನ್ ಟಿ. ಮೋಹನದಾಸ ಪೈ ದಂಪತಿ, ಕಾರ್ಯಕ್ರಮ ಆಯೋಜನ ಸಮಿತಿಯ ವಿವಿಧ ಪದಾಧಿಕಾರಿಗಳಾದ ಪ್ರದೀಪ ಪೈ, ಅಣ್ಣಪ್ಪ ಕಾಮತ್, ದಿನೇಶಪೈ, ಯೋಗೀಶ ಜಿ. ಕಾಮತ್ ಮತ್ತಿತರ ಗಣ್ಯರು ಹಾಜರಿದ್ದರು.

About The Author

error: Content is protected !!