ಶೈಕ್ಷಣಿಕವಾಗಿ ಸಿಗುವ ಮಾರ್ಗದರ್ಶನ ಪಡೆದು ವಿದ್ಯಾರ್ಥಿಗಳು ಉನ್ನತ ವ್ಯಾಸಂಗದಲ್ಲಿ ಸಾಧನೆ ಮಾಡುವ ಮೂಲಕ ತಮ್ಮ ಜೀವನವನ್ನು ರೂಪಿಸಿಗೊಳ್ಳಬೇಕು ಎಂದು ಬಿ.ಇ.ಓ ವಿನಾಯಕ ಅವಧಾನಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಹೊನ್ನಾವರ : ಪಟ್ಟಣದ ಎಸ್.ಡಿ.ಎಂ. ಕಾಲೇಜಿನ ದಿ. ಇನಸ್ಟಿಟ್ಯೂಟ್ ಆಪ್ ಚಾರ್ಟಡ್ ಎಕೊಂಟ್ ಆಫ್ ಇಂಡಿಯಾ ಸಂಸ್ಥೆಯ ಉಡುಪಿ ಶಾಖೆಯ ಐ.ಸಿ.ಎ.ಐ ಕರಿಯರ್ ಕೌನ್ಸೆಲಿಂಗ್ ಕಮಿಟಿ ಹಾಗೂ ಎಸ್.ಡಿ.ಎಂ. ಕಾಲೇಜಿನ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡ “ಬೃಹತ್ ಉದ್ಯೋಗ ಮಾರ್ಗದರ್ಶಿ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಇಂದು ಶೈಕ್ಷಣಿಕವಾಗಿ ಅಧ್ಯಯನ ನಡೆಸಲು ಸಾಕಷ್ಟು ಅವಕಾಶವಿದೆ. ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಮಾರ್ಗದರ್ಶನ ನೀಡಲು ನುರಿತ ಶಿಕ್ಷಕರ ಜೊತೆ ವಿವಿಧ ಸಲಕರಣೆಗಳು ಇದೆ. ವಿದ್ಯಾರ್ಥಿಗಳು ಶಾಲೆಯಲ್ಲಿರುವ ಸೌಲಭ್ಯದ ಜೊತೆಗೆ ವಿವಿಧ ಸಂಘಟನೆಯವರು ಆಯೋಜಿಸುವ ಇಂತಹ ತರಬೇತಿಯಲ್ಲಿ ಪಾಲ್ಗೊಳ್ಳುವ ಮೂಲಕ ಸದುಪಯೋಗ ಪಡೆದುಕೊಳ್ಳಬೇಕು. ಈ ದಿನದ ತರಬೇತಿಯು ವಿದ್ಯಾರ್ಥಿಗಳ ಭವಿಷ್ಯ ರೂಪುಗೊಳ್ಳಲು ಬಹುಮುಖ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಂ.ಪಿ.ಇ ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಹಿಂದೆ 2022ರಂದು ನಡೆಸಿದ ಇಂತಹ ಮಾರ್ಗದರ್ಶಿ ಕಾರ್ಯಕ್ರಮದ ಪರಿಣಾಮ ಕಳೆದ ಮೂರು ವರ್ಷದಲ್ಲಿ ಐದು ವಿದ್ಯಾರ್ಥಿಗಳು ಸಿ.ಎ. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಪ್ರೌಡಶಾಲೆಯ ಹಂತದಲ್ಲಿ ಮಾರ್ಗದರ್ಶಿ ಕೊರತೆ ಇರುದರಿಂದ ಇಂತಹ ಕಾರ್ಯಕ್ರಮ ಆಯೋಜನೆ ನಡೆಸಿ ಶೈಕ್ಷಣಿಜವಾಗಿ ಇರುವ ಅವಕಾಶ ಕುರಿತು ಮಾರ್ಗದರ್ಶನ ನಡೆಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಎಸ್.ಡಿ.ಎಂ. ಸಂಸ್ಥೆಯು ಸಹಸ್ರಾರು ಜನರಿಗೆ ವಿದ್ಯಾದಾನ ಮಾಡುವ ಮೂಲಕ ಭವಿಷ್ಯ ರೂಪಿಸಿದೆ. ಇಂದು ತರಬೇತಿಯಲ್ಲಿ ಪಾಲ್ಗೊಂಡವರಿಗೆ ಭವಿಷ್ಯದಲ್ಲಿ ವಾಣಿಜ್ಯ ವಿಭಾಗದಲ್ಲಿ ಅಧ್ಯಯನ ನಡೆಸಲು ಅನೂಕೂಲವಾಗುವ ಜೊತೆ ಶೈಕ್ಷಣಿಕವಾಗಿ ಇರುವ ಅವಕಾಶದ ಮಾಹಿತಿ ದೊರೆಯಲಿದೆ ಎಂದರು.
ವೇದಿಕೆಯಲ್ಲಿ ಪದವಿ ಪ್ರಾಚಾರ್ಯ ಡಾ. ಡಿ.ಎಲ್.ಹೆಬ್ಬಾರ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೋ ಎಂ.ಎಚ್.ಭಟ್, ಉಡುಪಿಯ ಐ.ಸಿ.ಎ.ಐ ಸಂಸ್ಥೆಯ ಉಪಾಧ್ಯಕ್ಷ ರಾಘವೇಂದ್ರ ಮೊಗರಾಯ ಉಪಸ್ಥಿತರಿದ್ದರು. ಉಡುಪಿಯ ಐ.ಸಿ.ಎ.ಐ ಮುಖ್ಯಸ್ಥರಾದ ಸಿ.ಎ ಅರ್ಚನಾ ಮಯ್ಯ ಸ್ವಾಗತಿಸಿ ಕಾರ್ಯಕ್ರಮದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದರು. ಲಕ್ಷ್ಮೀಶ ರಾವ್ ಕಾರ್ಯಕ್ರಮ ನಿರ್ವಹಿಸಿದರು.ಐ.ಸಿ.ಎ.ಐ ಸಂಸ್ಥೆಯ ಉಪಾಧ್ಯಕ್ಷ ರಾಘವೇಂದ್ರ ಮೊಗರಾಯ ವಂದಿಸಿದರು.
ಐ.ಸಿ.ಎ.ಐ ಸಂಸ್ಥೆಯ ಮಾಜಿ ಅಧ್ಯಕ್ಷ ಸಿ.ಎ. ಪ್ರದೀಪ ಜೋಗಿ ಹಾಗೂ ಸಿ.ಎ ರಾಮಚಂದ್ರ ಭಟ್ ಕೆ. ವೃತ್ತಿ ಮಾರ್ಗದರ್ಶನ ನೀಡಿದರು. ಸುಮಾರು ಎರಡು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು, ಪಾಲಕರು ಪಾಲ್ಗೊಂಡಿದ್ದರು.

More Stories
ಮಾತೃ ಪಿತೃ ವಂದನಾ ಕಾರ್ಯಕ್ರಮ
ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಹಾಗೂ ನೂತನ ಸಭಾಭವನದ ಅಡಿಗಲ್ಲು ಸಮಾರಂಭ
ಕಸ ಸುಡುವುದು ಹಸಿರು ಅಪರಾಧ–ನಮ್ಮ ಕಸಕ್ಕೆ ನಾವೇ ಹೊಣೆ – ಡಾ. ಎಚ್. ಎಸ್. ಅನುಪಮಾ