
ಹೊನ್ನಾವರ; ಕೃಷಿ ಮತ್ತು ಕುಡಿಯುವ ನೀರಿಗೆ ಶರಾವತಿ ನದಿಯನ್ನು ಅವಲಂಬಿಸಿರುವ ತಾಲ್ಲೂಕಿನ ಸಾವಿರಾರು ಜನರು ನಗರದಲ್ಲಿ ಒಂದೆಡೆ ಸೇರಿ ಶರಾವತಿ ಪಂಪ್ ಸ್ಟೋರೆಜ್ ವಿದ್ಯುತ ನಿರ್ಮಾಣದ ವಿರುದ್ಧ ತಾಲೂಕಿನ ಪ್ರತಿಭಟನೆ ನಡೆಸಿ ಉದ್ದೇಶಿತ ಯೋಜನೆಯನ್ನು ಕೈಬಿಡುವಂತೆ, ಸಹಾಯಕ ಆಯುಕ್ತರು ಮತ್ತು ತಹಸೀಲ್ದಾರರ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮತ್ತು ಇಂಧನ ಸಚಿವರಿಗೆ ಮನವಿ ಸಲ್ಲಿಸಿದರು. ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಶರಾವತಿ ನದಿ ಉಳಿಸಿ ಹೋರಾಟ ಸಮಿತಿಯು ಪ್ರತಿಭಟನಾ ಜಾಥಾ ಶರಾವತಿ ವೃತದಿಂದ ತಹಶೀಲ್ದಾರ ಕಛೇರಿಯವರಿಗೆ ತಲುಪಿ, ಕಛೇರಿಯಲ್ಲಿ ನಡೆಯುತ್ತಿದ್ದ ಭೂಸ್ವಾಧಿನ ಪ್ರಕ್ರಿಯೇ ಸಭೆ ಮುಂದೂಡುವAತೆ ಒತ್ತಾಯಿಸಿದರು.
ಪರಿಸರ ಸೂಕ್ಷ್ಮ ಪಶ್ಚಿಮ ಘಟ್ಟ ಪ್ರದೇಶದ 7ಕೀಲೋಮೀಟರ್ ಉದ್ದಕ್ಕೆ ಮತ್ತು ನೆಲಮಟ್ಟದಿಂದ 50ರಿಂದ 430ಮೀಟರ್ ಆಳದಲ್ಲಿ ಸುರಂಗ ಕೊರೆದು ಭೂಗತ ಜಲವಿದ್ಯುತ ಸ್ಥಾವರ ನಿರ್ಮಾಣ ಮಾಡುವ ಕೆ.ಪಿ.ಸಿ.ಯ ಉದ್ದೇಶಿತ ಶರಾವತಿ ಪಂಪ್ಡ ಸ್ಟೋರೇಜ ವಿದ್ಯುತ ಯೋಜನೆಯನ್ನು ಅನುಷ್ಠಾನ ಮಾಡಿದರೆ ಭವಿಷ್ಯದಲ್ಲಿ ಭೂಸಡಿಲಿಕೆಯಂತಹ ಅಪಾಯದ ಜೊತೆಯಲ್ಲಿ,ಅರಣ್ಯ ಮತ್ತು ಪರಿಸರ ನಾಶ ನಿಶ್ಚಿತವಾಗುವ ಆತಂಕವಿದೆ. ಡಾ.ಕಸ್ತೂರಿ ರಂಗನ್ ಆಯೋಗದ ವರದಿಯಲ್ಲಿಯೂ ಸಹ ಪಶ್ಚಿಮಘಟ್ಟದ ಹಲವು ಪರಿಸರ ಸೂಕ್ಷ್ಮ ವಿಚಾರಗಳನ್ನು ಪ್ರಸ್ತಾಪಿಸಿದರೂ, ಸಹ ಯೋಜನೆಗೆ ಕೇಂದ್ರ ಅರಣ್ಯ ಮಂತ್ರಾಲಯ ಅನುಮತಿ ನೀಡಿರುವದು ಸರಿಯಲ್ಲ. ಅಮೇರಿಕ, ಜಪಾನ್ ಮುಂತಾದ ಹಲವು ಮುಂದುವರಿದ ದೇಶಗಳು ಜಲವಿದ್ಯುತ ಯೋಜನೆಗಳನ್ನು ಕೈಬಿಡುತ್ತಿದ್ದು, ಜನರ ಸುರಕ್ಷತೆಯ ಹಿತ ದೃಷ್ಟಿಯಿಂದ ಅಲ್ಲಿ ಈಗ ಇರುವ ಆಣೆಕಟ್ಟುಗಳನ್ನು ಒಂದೊAದಾಗಿ ಒಡೆದು ಹಾಕುತ್ತಿದ್ದಾರೆ. ಅವು ಈಗ ಬದಲಿ ಇಂದನ ಮೂಲಗಳ ಮೊರೆಹೋಗುತ್ತಿವೆ. ಈ ನಡುವೆ ಪಶ್ಚಿಮಘಟ್ಟ ಪ್ರದೇಶದಲ್ಲಿ ನಡೆದಿರುವ ಇತ್ತೀಚಿನ ವೈನಾಡು ದುರಂತ, ಶಿರೂರು ಸಹಿತ ವಿವಿದೆಡೆಯ ಗುಡ್ಡಕುಸಿತಗಳು, ಭೂಶೀಳುವಿಕೆಗಳಿಂದ ಸಾಕಷ್ಟು ಸಾವು ನೋವುಗಳು ಸಂಭವಿಸಿದ ಮೇಲೂ ಸಹ ಉದ್ದೇಶಿಸಿತ ಯೋಜನೆಯನ್ನು ಏಕಪಕ್ಷೀಯವಾಗಿ ಜನರಮೇಲೆ ಹೇರುವ ಸರ್ಕಾರಗಳ ಕ್ರಮ ಸರಿಯಲ್ಲ.
ಶರಾವತಿ ನದಿನೀರಿಗೆ ಗೇರುಸೊಪ್ಪಾವರೆಗೂ ಉಪ್ಪುನೀರಿನ ಸೇರುವಿಕೆಯ ಆತಂಕವಿದೆ. ಸಮುದ್ರದ ಉಪ್ಪುನೀರು ಸೇರ್ಪಡೆಯಾಗುತ್ತಿರುವದರಿಂದ ನದಿಪಾತ್ರದ ಹಲವೆಡೆ ರೈತರು ಈಗಾಗಲೇ ಬವಣೆ ಪಡುತ್ತಿದ್ದು, ಮುಂದೆ ಈ ಯೋಜನೆಯ ಅನುಷ್ಠಾನದಿಂದ ಗೇರುಸೊಪ್ಪೆ ವರೆಗೆ ಸಮುದ್ರದ ಉಪ್ಪುನೀರು ನದಿಗೆ ಸೇರಿ ಕೃಷಿ ಮತ್ತು ಕುಡಿಯುವ ನೀರಿಗೆ ಶರಾವತಿ ನದಿಯನ್ನು ಅವಲಂಬಿಸಿರುವ ಹೊನ್ನಾವರ, ಭಟ್ಕಳ, ಕುಮಟಾ ತಾಲೂಕಿನ ಜನರಿಗೆ ವಿವಿಧ ರೀತಿಯಲ್ಲಿ ತೊಂದರೆ ಉಂಟಾಗಲಿದೆ. ಉದ್ದೇಶಿತ ಭೂಗತ ಜಲವಿದ್ಯುತ್ ಯೋಜನೆಯನ್ನು , ಭೂಸ್ವಾಧೀನ ಪ್ರಕ್ರಿಯೆಯನ್ನು ತಕ್ಷಣದಿಂದ ಕೈಬಿಡಬೇಕೆಂದು ಸರ್ಕಾರಕ್ಕೆ ಸಲ್ಲಿಸಿರುವ ಮನವಿಯಲ್ಲಿ ಆಗ್ರಹ ಪಡಿಸಲಾಗಿದೆ.
ಶಾಸಕ ದಿನಕರ ಶೆಟ್ಟಿ, ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ ಶರಾವತಿ ಆರತಿ ಉತ್ಸವ ಸಮಿತಿ ಗೌರವಾಧ್ಯಕ್ಷ ಜೆ.ಟಿ.ಪೈ, ಅಧ್ಯಕ್ಷ ವೆಂಕಟರಮಣ ಹೆಗಡೆ ಕವಲಕ್ಕಿ , ಶರಾವತಿನದಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಚಂದ್ರಕಾAತ ಕೊಚರೇಕರ, ಸಂಚಾಲಕರಾದ ಕೇಶವ ನಾಯ್ಕ ಬಳ್ಕೂರ, ಪಿ.ಎಸ್.ಭಟ್ಟ ಉಪ್ಪೋಣಿ, ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ, ಪರಿಸರ ತಜ್ಞ ಅಖಿಲೇಶ ಚಿಪಳಿ ಸಾಗರ, ನಾಮಧಾರಿ ಯುವ ಒಕ್ಕೂಟದ ಅಧ್ಯಕ್ಷ ನ್ಯಾಯವಾದಿ ವಿಕ್ರಮ ನಾಯ್ಕ, ರೈತರು, ಜನಪ್ರತಿನಿಧಿಗಳು, ಸಂಘಟನೆಯ ಪ್ರಮುಖರು, ಸಾರ್ವಜನಿಕರು ಇದ್ದರು.
ವರದಿ ; ವಿಶ್ವನಾಥ ಸಾಲ್ಕೋಡ್ ಹೊನ್ನಾವರ

More Stories
ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆ 2024 25 ನೇ ಶೈಕ್ಷಣಿಕ ವರ್ಷದ ಉತ್ತಮ ಸಾಧನೆಗಾಗಿ ಜಿಲ್ಲಾ ಮಟ್ಟದ ಉತ್ತಮ ಎಸ್. ಡಿ. ಎಂ. ಸಿ. ಪ್ರಶಸ್ತಿ
‘ಜನಸಾಮಾನ್ಯರಲ್ಲೂ ವಿಜ್ಞಾನದ ಅರಿವು ಅಗತ್ಯ’
ಹೊನ್ನಾವರದಲ್ಲಿ ಇಂದು ಆರ್ ವಿ ದೇಶಪಾಂಡೆ