December 23, 2025

ದೇವಸ್ಥಾನದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಪಂಗನಾಮ ಅಧಿಕಾರಿಗಳ ಮತ್ತು ಮುಜರಾಯಿ ಇಲಾಖೆ ವಿರುದ್ದ ಪ್ರತಿಭಟನೆ

ಕೃಷ್ಣರಾಜಪೇಟೆ ; ಬಯಲು ಸೀಮೇಯ ಕುಕ್ಕೇ ಸುಬ್ರಹ್ಮಣ್ಯ ಎಂದೇ ಪ್ರಸಿದ್ಧವಾದ ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಸಮೀಪದ ಶ್ರೀ ಕ್ಷೇತ್ರ ಸಾಸಲು ಗ್ರಾಮದಲ್ಲಿ ಪ್ರಸಿದ್ದವಾದ ಶ್ರೀ ಸೋಮೇಶ್ವರ ಮತ್ತು ಶ್ರೀ ಶಂಭುಲಿAಗೇಶ್ವರ ದೇವಾಲಯಗಳಿದ್ದು ಇದು ಮುಜರಾಯಿ ಇಲಾಖೆಗೆ ಸೇರಿದೆ ಇಲ್ಲಿ ಕಾರ್ತಿಕ ಮಾಸದಲ್ಲಿ ನೆಡೆಯುವ ವಿಶೇಷ ಪೂಜೆಗೆ ರಾಜ್ಯಾದ್ಯಂತ ಮತ್ತು ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರುಗಳು ಪಾಲ್ಗೊಳ್ಳುತ್ತಾರೆ ಇಲ್ಲಿ ದೇವರ ಹುಂಡಿ ಸೇರಿದಂತೆ ಸ್ಥಳಿಯ ಸಂಪನ್ಮೂಗಳಿAದ ವಾರ್ಷಿಕ ಕೋಟ್ಯಾಂತರ ರೂಪಾಯಿಗಳು ಆದಾಯ ಇದೆ ಆದ್ರೆ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರು ಗ್ರಾಮ ಲೆಕ್ಕಾದಿಕಾರಿ ಪ್ರಸನ್ನ ಮತ್ತು ಕೇಸ್ ವರ್ಕರ್ ಪೂರ್ಣಿಮ ಮತ್ತು ಮುಜರಾಯಿ ಇಲಾಖೆಯ ಸಂಭವಿಸಿದ ಅಧಿಕಾರಿಗಳು ಲಕ್ಷಾಂತರ ರೂಪಾಯಿಗಳು ಸುಳ್ಳು ಬಿಲ್ ಸೃಷ್ಟಿಸಿ ಹಣವನ್ನಹ ದೂಚಿದ್ದಾರೆ ಎಂದು ಗ್ರಾಮದ ಮುಖಂಡರಾದ ಮಾಹದೇವ್, ಸುರೇಶ್, ಮತ್ತು ಕರವೇ ಜಿಲ್ಲಾ ಉಪಾದ್ಯಕ್ಷರಾದ ಗುರುಮೂರ್ತಿ ಆರೋಪಿಸಿದ್ರು.

ಈಗಾಗಲೇ ಸೋಮೇಶ್ವರ ಮತ್ತು ಶಂಭುಲಿAಗೇಶ್ವರ ದೇವಾಲಯಗಳನ್ನು ಪುನರ್ ನಿರ್ಮಾಣ ಕಾಮಗಾರಿಯು ಎರಡು ದೇವಾಲಯಗಳು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನೆಡೆಯುತ್ತಿದ್ದರಿಂದ. ದೇವರ ಜೀವ ಪ್ರತಿಷ್ಠಾನೆ ತಾತ್ಕಾಲಿಕವಾಗಿ ಹತ್ತು ಬೈ ಹತ್ತು ಹಳತೆಯ ದೇವರ ಬಾಲಮಂದಿರವನ್ನು ನಮ್ಮ ಗ್ರಾಮಸ್ಥರು ಸ್ವಂತ ಖರ್ಚಿನಲ್ಲಿ ನಿರ್ಮಾಣ ಮಾಡಲಾಗಿದೆ ಆದ್ರೆ ಈ ಬಾಲಮಂದಿರಕ್ಕೆ ಜೆಸಿಬಿ ಯಂತ್ರದ ಮೂಲಕ ತಳಪಾಯಕ್ಕೆ ಸೈಜ್ ಕಲ್ಲು ಮತ್ತು ಮಣ್ಣು ಬಳಕೆ ಮಾಡಿದ್ದೇವೆ ಎಂದು ಲಕ್ಷಾಂತರ ರೂಪಾಯಿ ಮತ್ತು ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕೆ 5 ಲಕ್ಷಕ್ಕೂ ಹೆಚ್ಚು ಬಳಕೆ , ದೇವರಿಗೆ ಪೂಜೆಗೆ ಹೂ ಮತ್ತು ಗಂದದ ಕಡ್ಡಿ, ಕರ್ಪೂರಕ್ಕೆ ದಿನಕ್ಕೆ ಸಾವಿರಾರೂ ರೂಪಾಯಿಗಳು ನ್ನಹ ಸುಳ್ಳು ಬಿಲ್ ರಶೀದಿ ಗಳನ್ನು ಸೃಷ್ಟಿ ಮಾಡಿ 2022 ರಿಂದ ಇಲ್ಲಿಯ ವರಿಗೂ ಒಂದು ಕೋಟಿಗೂ ಅದಿಕ ಹಣವನ್ನದು ದುರ್ಬಳಕೆ ಮಾಡಿ ಸರ್ಕಾರಕ್ಕೆ ಮತ್ತೆ ದೇವಾಲಕ್ಕೆ ಪಂಗನಾಮ ಹಾಕಿದ್ದಾರೆ ಎಂದು ಆರೋಪಿಸಿದ್ರು..

ಇದರ ಬಗ್ಗೆ ಈಗಾಗಲೇ ಸಂಬAಧಿಸಿದ ಜಿಲ್ಲಾ ಅಧಿಕಾರಿ ತಾಲ್ಲೂಕಿನ ದಂಡಾಧಿಕಾರಿ ಜೊತೆಗೆ ಸೂಕ್ತ ತನಿಖೆ ನೆಡೆಸುವಂತೆ ಲೋಕ್ತಾಯುಕ್ತರಿಗೆ ದೂರು ನೀಡಿದ್ರು ಯಾವುದೇ ಕ್ರಮ ಕೈಗೊಳ್ಳಲುತ್ತಿಲ್ಲ ಕೂಡಲೇ ಸೂಕ್ತ ತನಿಖೆ ನೆಡೆಸಿ ಸೂಕ್ತ ಕ್ರಮ ವಹಿಸುವಂತೆ ಒತ್ತಾಯಿಸಿದ್ರು..

ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಮನು, ಮೋಹನ್,ನಿಂಗರಾಜು, ಚಂದ್ರಣ್ಣ, ಶಿವಾನಂದಪ್ಪ, ನಾಗಣ್ಣ,ದಿನೇಶ್, ಮಂಜುನಾಥ್, ಪಾಪಣ್ಣ,ಜಗದೀಶ್,ಸೋಮೇಶ್ವರ್, ಸಂಜು, ಶಿವಲಿಂಗ, ನಾಗರಾಜ್, ಆದರ್ಶ, ಹೇಮಂತ್, ಚಂದು, ಕಾರ್ತಿಕ್,ಕೀರ್ತಿ, ಸೇರಿದಂತೆ ಉಪಸ್ಥಿತರಿದ್ದರು.

ವರದಿ ಶಂಭು ಕಿಕ್ಕೇರಿ ಕೃಷ್ಣರಾಜಪೇಟೆ

About The Author

error: Content is protected !!