December 23, 2025

ಸಾಂಸ್ಕ್ರತಿಕ ಸಾರ್ಥಕ್ಯಕ್ಕೆ ಬೆಳಗಾವಿಯಲ್ಲಿ ಸನ್ಮಾನ


ಶಿರಸಿ: ಸಾಂಸ್ಕೃತಿಕ ಸಂಘಟನೆ ಮೂಲಕ ದೇಶದ ಗಮನ ಸೆಳೆದ ಸಪ್ತಕದ ಮುಖ್ಯಸ್ಥ, ಉತ್ತರ ಕನ್ನಡ ಮೂಲದ ಜಿ.ಎಸ್.ಹೆಗಡೆ ಅವರಿಗೆ ಬೆಳಗಾವಿಯಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಬೆಳಗಾವಿಯ ಟಿಳಕವಾಡಿ ವರೇರಕರ ನಾಟ್ಯ ಗೃಹದಲ್ಲಿ ನಡೆದ ಸಮಾರಂಭದಲ್ಲಿ ಎಂಟನೂರಕ್ಕೂ ಅಧಿಕ ಅಂತರಾಷ್ಟ್ರೀಯ ಗುಣಮಟ್ಟದ ಕಾರ್ಯಕ್ರಮ ಸಂಘಟಿಸಿದ್ದಲ್ಲದೇ ಎಳೆಯ ಹಾಗೂ ಹಿರಿಯ ಕಲಾವಿದರನ್ನು ಬೆಳೆಸಿದ ಹೆಗಡೆ ಅವರ ಬದುಕಿನ ಅಮೃತ ಮಹೋತ್ಸವ ಸಂದರ್ಭದಲ್ಲಿ ವಿವಿಧ ಸಂಘಟನೆಗಳಿಂದ ಗೌರವಿಸಲಾಯಿತು‌.
ಈ ವೇಳೆ ರಂಗ ಸಂಪದ
ಡಾ ಅರವಿಂದ ಕುಲಕರ್ಣಿ, ರಂಗ ಸೃಷ್ಟಿಯ
ಶಿರೀಶ್ ಜೋಶಿ, ಸಪ್ತ ಸ್ವರ ಸಂಗೀತ ವಿದ್ಯಾಲಯದ ನಿರ್ಮಲಾ ಅಯ್ಯರ್ , ಕಲಾರಂಗದ
ರವಿ ಕೊಟಾರಗಸ್ತಿ, ವಾಗ್ದೇವಿ ಗಮಕ ಕಲಾ ಸಂಸ್ಥೆಯ ಭಾರತಿ ಭಟ್ಟ, ಜಿಲ್ಲಾ ಪತ್ರಿಕಾ ಸಂಘದ‌ ಅಧ್ಯಕ್ಷ
ಮುರುಗೇಶ ಶಿವಪೂಜಿ, ನಾದ ಸುಧಾದ ಡಾ ಸತ್ಯನಾರಾಯಣ, ಸಂಗೀತ ಕಲಾಕಾರ ಸಂಘದ ಪ್ರಭಾಕರ ಶಹಾಪುರಕರ, ಎಲ್.ಎಸ್.ಶಾಸ್ತ್ರಿ, ಆನಂದ ಪುರಾಣಿಕ ಹಾಗೂ ಇತರರು ಇದ್ದರು.
ಇದೇ ವೇಳೆ ಹಿರಿಕಿರಿಯ ಕಲಾವಿದರಿಂದ ಶ್ರೀಕೃಷ್ಣ ಸಂಧಾನ ತಾಳಮದ್ದಲೆ ನಡೆಯಿತು.

About The Author

error: Content is protected !!