ಹೊನ್ನಾವರ: ಕಳೆದ ಆರು ವರ್ಷಗಳಿಂದ ನಿರಂತರವಾಗಿ ಭಜನೆ ಮತ್ತು ಭಕ್ತಿಗೀತೆಗಳನ್ನು ವಿವಿಧ ಸಮಾಜದ 64 ಕ್ಕೂ ಹೆಚ್ಚು ಮಹಿಳೆಯರನ್ನೊಳ ಗೊಂಡ 6 ಭಜನಾ ಮಂಡಳಿಗಳಿAದ ಡಿ.21 ರಂದು “ಶಾರದಾ ವಂದನೆ” ವಾರ್ಷಿಕ ಕಾರ್ಯಕ್ರಮ ಪ್ರಭಾತನಗರದ ಮೂಡಗಣಪತಿ ಸಭಾಭವನದಲ್ಲಿ ಮಧ್ಯಾಹ್ನ 3:30ಕ್ಕೆ ನಡೆಯಲಿದೆ. ಖ್ಯಾತ ಸಂಗೀತ ವಿದ್ವಾಂಸ ಎಸ್. ಶಂಭು ಭಟ್ ಕಡತೋಕಾ ಉದ್ಘಾಟಿಸಲಿದ್ದಾರೆ. ಮಂಡಳಿಯ ಎಲ್ಲ 64 ಸದಸ್ಯರು ತಮ್ಮ ಮಂಡಳಿಳೊAದಿಗೆ ಪ್ರತ್ಯೇಕವಾಗಿ ಮತ್ತು ಒಟ್ಟಾಗಿ ಭಜನೆ ಪ್ರಸ್ತುಪಡಿಸುವರು. ಹೊನ್ನಾವರ-ಕುಮಟಾ- ಭಟ್ಕಳ ತಾಲೂಕಿನಲ್ಲಿ 300ಕ್ಕೂ ಹೆಚ್ಚು ಕಾರ್ಯಕ್ರಮವನ್ನು ದೇವಾಲಯಗಳಲ್ಲಿ ಸೇವಾರೂಪದಲ್ಲಿ ಭಜನಾ ಕಾರ್ಯಕ್ರಮವನ್ನು ತಾರಾ ಭಟ್ ಇವರ ಮುಂದಾಳತ್ವದ ತಂಡ ಮಾಡುತ್ತಾ ಬಂದಿದೆ.
ಮಾಗೋಡ ಜಿ.ಟಿ.ಹೆಗಡೆ ಇವರಸ್ಮರಣೆಯಲ್ಲಿ ಕಾರ್ಯಕ್ರಮ ಜರುಗಲಿದೆ, ನಮ್ಮ ಸಂಘಗಳ ವಾರ್ಷಿಕೋತ್ಸವಕ್ಕೆ ಭಕ್ತಿ ಸಂಗೀತ ಪ್ರಿಯರು ಆಗಮಿಸಬೇಕು ಎಂದು ಸಂಯೋಜಕಿ ತಾರಾ ಭಟ್ ಮನವಿ ಮಾಡಿದ್ದಾರೆ.

More Stories
ಕೆರೆಕೋಣ ಶಾಲೆಯಲ್ಲಿ ಶಿಕ್ಷಕಿ ಲಲಿತಾ ಹೆಗಡೆಯವರಿಗೆ ಬೀಳ್ಕೊಡುಗೆ ಮತ್ತು CCTV ಉದ್ಘಾಟನಾ ಕಾರ್ಯಕ್ರಮ ಸಂಪನ್ನ
ಶ್ರೀ ಸತ್ಯಸಾಯಿ ಸಂಸ್ಥೆಯಲ್ಲಿ ವಾರ್ಷಿಕೋತ್ಸವ ಯಶಸ್ವಿಯಾಗಿ ಸುಸಂಪನ್ನ
ಉತ್ತರ ಕನ್ನಡ ಜಿಲ್ಲಾ ಕ್ಯಾಥೋಲಿಕ್ ಸಂಘಟನೆ ಆಶ್ರಯದಲ್ಲಿ ಜಿಲ್ಲಾಮಟ್ಟದ ಕ್ರಿಸ್ಮಸ್ ಗೀತಾ ಸ್ಪರ್ಧಾ ಕಾರ್ಯಕ್ರಮ