December 23, 2025

ಪ್ರೌಢ ಶಾಲಾ ಶಿಕ್ಷಕರ ಭಕ್ತಿಗೀತೆ ಸ್ಪರ್ಧೆ, ಮೊದಲ ಮೂರು ಸ್ಥಾನಗಳಲ್ಲಿ ರಾಘವೇಂದ್ರ, ಮಂಜುನಾಥ ಬರ್ಗಿ ಹಾಗೂ ತಸ್ನೀಮ್

ಕುಮಟಾ : ಶಹರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಸನಿಹದಲ್ಲಿನ ಪ್ರಾಯೋಗಿಕ ಶಾಲೆಯಲ್ಲಿ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರಿಗಾಗಿ ಶಿಕ್ಷಕರ ಕಲ್ಯಾಣ ನಿಧಿಯ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಪ್ರೌಢ ಶಾಲಾ ಅಧ್ಯಾಪಕರ ಭಕ್ತಿಗೀತೆ ಸ್ಪರ್ಧೆಯಲ್ಲಿ ಊರಕೇರಿಯ ಶ್ರೀ ರಾಮನಾಥ ಪ್ರೌಢ ಶಾಲೆಯ ರಾಘವೇಂದ್ರ ನಾಯ್ಕ, ಬರ್ಗಿಯ ಸರ್ಕಾರಿ ಪ್ರೌಢ ಶಾಲೆಯ ಮಂಜುನಾಥ ಚಂದ್ರಕಾAತ ಗಾಂವಕರ ಬರ್ಗಿ ಹಾಗೂ ಗಂಗೆಕೊಳ್ಳದ ಕಿತ್ತೂರು ರಾಣಿ ಚೆನ್ನಮ್ಮ ಪ್ರೌಢ ಶಾಲೆಯ ತಸ್ನೀಮ್ ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದರು.

ಅವರಿಗೆ ಅನುಕ್ರಮವಾಗಿ ರೂ.1500,1000 ಹಾಗೂ 500 ರೂಪಾಯಿಗಳ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉದಯ ನಾಯ್ಕರವರು ಶುಭವನ್ನು ಕೋರಿದರು. ಸಂಗೀತ ವಿಶಾರದೆಯರಾದ ಭಾರತಿ ಹೆಗಡೆ,ವಸಂತಲಕ್ಷ್ಮೀ ಹಾಗೂ ಗಾಯತ್ರಿ ಶಿರೂಡ್ಕರರವರು ನಿರ್ಣಾಯಕರಾಗಿದ್ದರು.

ಬಹುಮಾನ ವಿತರಣಾ ಸಮಾರಂಭದಲ್ಲಿ ಡಯಟ್ ವಿಶ್ರಾಂತ ಉಪನ್ಯಾಸಕ ಬಿ.ಜಿ. ಗುಣಿ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹಾಗೂ ಖ್ಯಾತ ನಿರೂಪಕರ ರವೀಂದ್ರ ಭಟ್ ಸೂರಿ ಹಾಗೂ ಪ್ರಾಯೋಗಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ವೀಣಾ ಹೆಬ್ಬಾರ ಮೊದಲಾದವರಿದ್ದರು.

About The Author

error: Content is protected !!