ಹೊನ್ನಾವರ; ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ದಿ. ಮಾಗೋಡ ಗಣಪತಿ ಹೆಗಡೆ ಸಂಸ್ಮರಣೆ ಭಜನಾ ಸರಸ್ವತಿ ವಂದನೆ ಕಾರ್ಯಕ್ರಮ ಜರುಗಿತು.
ಕರ್ನಾಟಕದ ಕಲಾಶ್ರೀ ಪ್ರಶಸ್ತಿ ಪುರಸ್ಕ್ರತ ಸಂಗೀತ ವಿದ್ವಾಂಸ ಪ್ರೊ. ಎಸ್.ಶಂಭು ಭಟ್ಟ ಕಡತೋಕಾ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ, ಭಜನೆಯಿಂದ ಮನಸ್ಸು ಸಂತಸಗೊಳ್ಳುತ್ತದೆ. ಹೊನ್ನಾವರದ ಜನರು ಕಲಾ ಪೋಷಕರು. ಲಯ ಮತ್ತು ಸ್ವರ ಪ್ರತಿಯೊಬ್ಬರಲ್ಲಿಯೂ ಇರುತ್ತದೆ. ಭಜನೆಯನ್ನು ಏಕಸ್ವರದಲ್ಲಿ ಹಾಡಿದಾಗ ಸ್ವರ ಜೋಡಣೆಯಾಗುತ್ತದೆ. ಈ ಭಜನಾ ತಂಡಗಳು ಸ್ವರಜೋಡಣೆ ಮಾಡಿ ಹಾಡಿವೆ. ಸಾಹಿತ್ಯವನ್ನು ತಿಳಿದು, ಸ್ವರಜೋಡಣೆ ಮಾಡಿ ಲಯಬದ್ದವಾಗಿ ಹಾಡಲಾಗುತ್ತದೆ ಎಂದರು.
ಕಾರ್ಯಕ್ರಮದ ಕುರಿತು ಹಿರಿಯ ಪತ್ರಕರ್ತರಾದ ಜಿ.ಯು.ಭಟ್ ಪ್ರಾಸ್ತವಿಕವಾಗಿ ಮಾತನಾಡಿ ಭಜನೆಯು ಭಗವಂತನನ್ನು ಸಮೀಪಿಸುವ ಮಾಧ್ಯಮ, ಅಂತರಂಗದ ಎಲ್ಲಾ ನೋವನ್ನು ಮರೆಯಲು ಭಜನೆಯು ದಿವ್ಯ ಔಷಧ ಎಂದರೆ ತಪ್ಪಾಗಲಾರದು. ದೈಹಿಕವಾಗಿ ಮಾನಸಿಕವಾಗಿ ಸಾಮರಸ್ಯದಿಂದ ಕೂಡಿರುವ ಜೊತೆ ನೆಮ್ಮದಿಯ ಜೀವನಕ್ಕೆ ಭಜನೆಯು ಪ್ರಮುಖ ಪಾತ್ರ ವಹಿಸಲಿದೆ ಎಂದರು.
ತಾರಾ ಭಟ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶ್ರೀಕುಮಾರ ಸಮೋಹ ಸಂಸ್ಥೆಯ ವೆಂಕ್ರಟಮಣ ಹೆಗಡೆ ಕವಲಕ್ಕಿ, ಕೆ.ಎಸ್.ಭಟ್ ಕರ್ಕಿ, ಜಿ.ಟಿ.ಭಟ್, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ಪ್ರಶಾಂತ ಹೆಗಡೆ ಮೂಡಲಮನೆ ಕಾರ್ಯಕ್ರಮ ನಿರ್ವಹಿಸಿದರು.
ಭಜನಾ ಮಂಡಲದ 67 ಮಹಿಳೆಯರು 6 ತಂಡದಲ್ಲಿ ಭಜನೆಯು ಪ್ರಸುತ್ತಪಡಿಸಿದರು.

More Stories
ಕೆರೆಕೋಣ ಶಾಲೆಯಲ್ಲಿ ಶಿಕ್ಷಕಿ ಲಲಿತಾ ಹೆಗಡೆಯವರಿಗೆ ಬೀಳ್ಕೊಡುಗೆ ಮತ್ತು CCTV ಉದ್ಘಾಟನಾ ಕಾರ್ಯಕ್ರಮ ಸಂಪನ್ನ
ಶ್ರೀ ಸತ್ಯಸಾಯಿ ಸಂಸ್ಥೆಯಲ್ಲಿ ವಾರ್ಷಿಕೋತ್ಸವ ಯಶಸ್ವಿಯಾಗಿ ಸುಸಂಪನ್ನ
ಉತ್ತರ ಕನ್ನಡ ಜಿಲ್ಲಾ ಕ್ಯಾಥೋಲಿಕ್ ಸಂಘಟನೆ ಆಶ್ರಯದಲ್ಲಿ ಜಿಲ್ಲಾಮಟ್ಟದ ಕ್ರಿಸ್ಮಸ್ ಗೀತಾ ಸ್ಪರ್ಧಾ ಕಾರ್ಯಕ್ರಮ