ಧರ್ಮಸ್ಥಳ ಶಾಂತಿವನ ಟ್ರಸ್ಟ್ ನ ಸ್ಪರ್ಧಾ ಕಾರ್ಯಕ್ರಮ ದಲ್ಲಿ
ಶ್ರೀವಲಿ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ
ಭಟ್ಕಳ- ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ , ಶಾಂತಿವನ ಟ್ರಸ್ಟ್ ಆಯೋಜಿಸಿದ ಜಿಲ್ಲಾ ಮಟ್ಟದ ಸ್ಪರ್ಧಾ ಕಾರ್ಯಕ್ರಮದಲ್ಲಿ ಚಿತ್ರಾಪುರ ಮಠದ ಆಡಳಿತದಲ್ಲಿ ಬರುವ ಶ್ರೀವಲ್ಲಿ ಪ್ರೌಢಶಾಲೆಯ ಇಬ್ಬರು ವಿಧ್ಯಾರ್ಥಿಗಳು ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಶ್ರೀ ಕ್ಷೇತ್ರದ ಶಾಂತಿವನ ಟ್ರಸ್ಟ್ ನ ಪ್ರಕಟಣೆಯಾದ ಜ್ಞಾನ ಪಥ ಪುಸ್ತಕದ ಆಧಾರಿತವಾಗಿ ಸ್ಪರ್ಧೆ ನಡೆಸಲ್ಪಟ್ಟಿದ್ದು, ಭಟ್ಕಳದ ವಿದ್ಯಾಭಾರತಿ ಪ್ರೌಢಶಾಲೆಯಲ್ಲಿ ನಡೆದ ಉತ್ತರ ಕನ್ನಡ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಶ್ರೀವಲ್ಲಿ ಪ್ರೌಢಶಾಲೆ ಚಿತ್ರಾಪುರದ ವಿಧ್ಯಾರ್ಥಿ ಹರ್ಷದ್ ಮಂಜು ಗೊಂಡ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ನಾಗರಾಜ್ ಕೃಷ್ಣ ನಾಯ್ಕ್ ಭಾಷಣ ಸ್ಪರ್ಧೆ ಯಲ್ಲಿ ದ್ವಿತೀಯ ಸ್ಥಾನ ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಬರುವ ೨೦೨೬ ಜನವರಿ ೨ ಮತ್ತು ೩ ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುವ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ವಿದ್ಯಾರ್ಥಿಗಳಿಗೆ ಶಿಕ್ಷಕರಾದ ಶ್ರೀ ಸಂಜಯ್ ಗುಡಿಗಾರರವರು ಚಿತ್ರಕಲೆಯಲ್ಲಿ ಹಾಗೂ ಶ್ರೀಮತಿ ರೇಷ್ಮಾ ನಾಯಕ ಭಾಷಣ ಸ್ಪರ್ಧೆಗೆ ಮಾರ್ಗದರ್ಶನ ನೀಡಿರುತ್ತಾರೆ. ವಿಧ್ಯಾರ್ಥಿಗಳ ಗೆಲುವಿಗೆ ಚಿತ್ರಾಪುರ ಶ್ರೀವಲ್ಲಿ ಟ್ರಸ್ಟ್ ಇದರ ಶೈಕ್ಷಣಿಕ ಸಲೆಗಾರರಾದ ರವೀಂದ್ರ ಆರ್.ಕಾಯ್ಕಿಣಿ ,ಮುಖ್ಯೋಪಧ್ಯಾಯಿನಿ ಮಮತಾ ಭಟ್ಕಳ್ ಶ್ರೀವಲ್ಲಿ ಶಾಲಾ ಶಿಕ್ಷಕರು ಹಾಗೂ ಊರ ನಾಗರಿಕರು ಶುಭ ಹಾರೈಸಿರುತ್ತಾರೆ.

More Stories
ಶಿರಾಲಿಯಲ್ಲಿ ಶಿಕ್ಷಕರ ಸಬಲೀಕರಣ ಉಪನ್ಯಾಸ
ಹಿಂದು ರುದ್ರಭೂಮಿ ಸ್ವಚ್ಛಗೊಳಿಸಿದ ಕ್ರಿಯೇಟಿವ್ ಬಾಯ್ಸ್ ಯುವಕರು
ನಿಚ್ಚಲಮಕ್ಕಿ ಸಭಾಭವನದಲ್ಲಿ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ