March 4, 2026

ಶರಾವತಿ ಉತ್ಸವ ಡಿ. 27 ರಂದು

ಹೊನ್ನಾವರ: ಶರಾವತಿ ಸಾಂಸ್ಕೃತಿಕ ವೇದಿಕೆಯ ವತಿಯಿಂದ 19 ವರ್ಷದ ಶರಾವತಿ ಉತ್ಸವ ಡಿ. 27 ರಂದು ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ನಡೆಯಲಿದೆ ಎಂದು ವೇದಿಕೆಯ ಅಧ್ಯಕ್ಷರಾದ ವೆಂಕಟ್ರಮಣ ಹೆಗಡೆ ಕವಲಕ್ಕಿ ಹೇಳಿದರು.
ಪಟ್ಟಣದ ಖಾಸಗಿ ಹೊಟೇಲನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು ಹಿರಿಯ ಸಹಕಾರಿ ಧುರೀಣರಾದ ದಿ.ಪಿ.ಎಸ್.ಭಟ್ ಉಪ್ಪೂಣಿ‌ ಇವರು ನಮ್ಮನ್ನು ಅಗಲಿದ್ದು, ಅವರ ಹೆಸರನ್ನು ಶಾಶ್ವತವಾಗಿಡಲು “ಸ್ಮಾರಕ ಪ್ರಶಸ್ತಿ” ನೀಡಲು ನಿರ್ಧರಿಸಿದ್ದು, ಪ್ರಥಮ ಪ್ರಶಸ್ತ್ರಿಯನ್ನು ಸೆಂಟ್ ಮಿಲಗ್ರಿಸ್ ಸೌಹಾರ್ದ್ ಸೊಸೈಟಿ ಅಧ್ಯಕ್ಷರು, ಸಾಮಾಜಿಕ ಕಾರ್ಯಕರ್ತರಾದ ಜಾರ್ಜ್ ಫರ್ನಾಂಡಿಸ್ ಇವರಿಗೆ ಪ್ರಧಾನ ಮಾಡಲಾಗುವುದು. “ಯಕ್ಷಗಾನ ಅಕಾಡೆಮಿ” ಪ್ರಶಸ್ತಿ ಪುರಸ್ಕ್ರತ ಕಲಾವಿದರಾದ ವಿಷ್ಣು ಆಚಾರಿ ಬಳ್ಕೂರ, “ಜನಪದ ರತ್ನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ” ಜಾನಪದ ಕಲಾವಿದ ತುಳಸು ಬೀರು ಗೌಡ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಗುವುದು.


ಸಭಾ ಕಾರ್ಯಕ್ರಮವನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲತಾ ಭಟ್ ಉದ್ಘಾಟಿಸಲಿದ್ದು, ಶ್ರೀ ಕುಮಾರ ಸಮೊಹ ಸಂಸ್ಥೆಯ ಅಧ್ಯಕ್ಷ ವೆಂಕ್ರಟಮಣ ಹೆಗಡೆ ಕವಲಕ್ಕಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಗೇರುಸೊಪ್ಪಾ ಗ್ರಾ.ಪಂ. ಉಪಾಧ್ಯಕ್ಷ ಮಂಜುನಾಥ ನಾಯ್ಕ, ಕೆಡಿಸಿಸಿ ಬ್ಯಾಂಕ್ ನಿರ್ದೆಶಕ ವಿ.ಕೆ.ವಿಶಾಲ್ ಉಪಸ್ಥಿತರಿರುವರು. ಸಭಾ ಕಾರ್ಯಕ್ರಮದ ನಂತರ ಮೇದಾ ಭಟ್ ಒಗ್ಗರೆ ತಂಡದಿಂದ ಭಕ್ತಿ ಸಂಗೀತ, ವಿ.ವಸುಧಾ ಶರ್ಮಾ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದರು.


ಶರಾವತಿ ಸಾಂಸ್ಕೃತಿಕ ವೇದಿಕೆಯ ಕಾರ್ಯದರ್ಶಿ ಶಂಭು ಹೆಗಡೆ ಸಂತನ್ ಮಾತನಾಡಿ ನಮ್ಮ ವೇದಿಕೆಯ ಗೌರವಾಧ್ಯಕ್ಷರಾಗಿದ್ದ ಪಿ.ಎಸ್.ಭಟ್ ಉಪ್ಪೋಣಿ ನಿಧನದ ಕಾರಣ ಈ ಬಾರಿ ಸರಳವಾಗಿ ಉತ್ಸವ ಆಚರಿಸುತ್ತಿದ್ದು, ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಲಾಗುತ್ತದೆ ಎಂದರು.


ಗೌರವ ಕಾರ್ಯದರ್ಶಿ ಗೋಪಾಲಕೃಷ್ಣ ಹೆಗಡೆ ಕಲಭಾಗ ಮಾತನಾಡಿ ಸರ್ಕಾರಿ ಸೌಲಭ್ಯ ಇಲ್ಲದೇ, ಇಷ್ಟು ವರ್ಷಗಳ ಕಾಲ ಉತ್ಸವ ನಡೆಸುತ್ತಾ ಬಂದಿದ್ದೇವೆ. ಸಾಂಸ್ಕ್ರತಿಕವಾಗಿ ಮತ್ತು ಸಮಾಜದ ಸಾಧಕರನ್ನು ಗೌರವಿಸುವ ಮೂಲಕ ಭಾರತೀಯ ಸಾಂಸ್ಕ್ರತಿಕ ಪರಂಪರೆಯನ್ನು ಬೆಳಿಸುವಲ್ಲಿ ಸಹಕರಿಸುತ್ತಿದ್ದೇವೆ ಎಂದು ಸಂಘಟನೆಯ ಕಾರ್ಯವೈಖರಿಯ ಬಗ್ಗೆ ಮಾಹಿತಿ ನೀಡಿದರು.

ವರದಿ: ವಿಶ್ವನಾಥ  ಸಾಲ್ಕೋಡ್ ಹೊನ್ನಾವರ

About The Author

error: Content is protected !!