ಹೊನ್ನಾವರ: ಬಿಜೆಪಿ ಕಾರ್ಯಕರ್ತರ ಹಾಗೂ ಕ್ಷೇತ್ರದ ಜನತೆಯ ಸಮಸ್ಯೆಗಳಿಗೆ ಸ್ಪಂಧಿಸುವುದು ಶಾಸಕನಾದ ನನ್ನ ಕರ್ತವ್ಯ. ನನ್ನ ಕ್ಷೇತ್ರದಲ್ಲಿ ಕಾಂಗ್ರೇಸ್ ಗುಂಡಾಗಿರಿಗೆ ಅವಕಾಶ ನೀಡುವುದಿಲ್ಲ ಎಂದು ಕುಮಟಾ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಹೇಳಿದರು.
ಅವರು ಹೊನ್ನಾವರ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಸಂಧರ್ಭದಲ್ಲಿ ಉದ್ಯಮಿ ಜಿ.ಜಿ ಶಂಕರ ಮತ್ತು ಸ್ಥಳೀಯರು ಕೆಲ ದಿನಗಳ ಹಿಂದೆ ಜಿ.ಜಿ ಶಂಕರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿಕೊಂಡ ಸ್ಥಳೀಯ ಪೊಲೀಸ್‌ರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದಾಗ ಈ ಮೇಲಿನಂತೆ ಅವರು ಅಭಿಪ್ರಾಯಪಟ್ಟರು.
ಸ್ಥಳೀ ಬೋಟಿಂಗ್ ವ್ಯವಹಾರಕ್ಕೆ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ನಾವು ನಮ್ಮಿಂದಾದಷ್ಟು ಸಹಾಯ ಮಾಡಿದ್ದೇವೆ. ಗುಂಡಾಗಿರಿ ನನ್ನ ಕ್ಷೇತ್ರದಲ್ಲಿ ಇಲ್ಲ ಎಂದು ನಾನು ತಿಳಿದಿದ್ಧೆ. ಆದರೆ ಅದು ನನ್ನ ಕಾಲಡಿಗೆ ಬಂದು ನಿಂತಿದೆ. ಗುಂಡಾಗಿರಿ ಮಾಡಿ ನನ್ನ ಕ್ಷೇತ್ರದಲ್ಲಿ ಉಧ್ಯಮಿಯನ್ನು ಹೆದರಿಸಿ ಬೆದರಿಸಿ ಅವರ ವಿರುದ್ಧವೇ ಪ್ರಕರಣ ದಾಖಲಿಸಿರುವ ಪೊಲೀಸರು ಯಾರನ್ನು ಒಲೈಸಲು ಹೊರಟಿದ್ದಾರೆ, ಇದು ಸರಿ ಅಲ್ಲ. ಈ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಮಾತನಾಡಿ ಇಲ್ಲಿಯ ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿಯ ಕುರಿತು ಹಾಗೂ ಜನಸಾಮಾನ್ಯರಿಗೆ ಅವರಿಂದ ಆಗುತ್ತಿರುವ ತೊಂದರೆ ಕುರಿತು ಮಾಹಿತಿ ನೀಡುತ್ತೇನೆ. ನಮ್ಮ ಕಾರ್ಯಕರ್ತರನ್ನು ವಿನಾಃ ಕಾರಣ ಮುಟ್ಟಿದರೇ ನಾವು ಸುಮ್ಮನೆ ಇರುವುದಿಲ್ಲ ಎಂದರು.
ಮಾಜಿ ಶಾಸಕ ಸುನೀಲ್ ನಾಯ್ಕ ಮಾತನಾಡಿ ಅಧಿಕಾರ ಇರುವುದು ೫ ವರ್ಷ. ಈ ಕಿರು ಅವಧಿಯಲ್ಲಿ ಜನಪರ ಹಾಗೂ ಅಭಿವೃದ್ಧಿ ಕೆಲಸ ಮಾಡಬೇಕು, ಅದನ್ನು ಬಿಟ್ಟು ಬಿಜೆಪಿ ಕಾರ್ಯಕರ್ತರನ್ನು ಹತ್ತಿಕ್ಕಲು ಕೊಲೆ ಪ್ರಯತ್ನ, ಸುಳ್ಳು ಮರಳು ಸಾಗಾಣಿಕೆ ಪ್ರಕರಣ, ಕಲ್ಲು ಕೊರೆ ಪ್ರಕರಣ ದಾಖಲಿಸುವುದಲ್ಲ. ಆರೀತಿ ಮಾಡಿದರೆ ಕ್ಷೇತ್ರದ ಜನ ಸುಮ್ಮನಿರುವುದಿಲ್ಲ, ಮಂಕಿ ಚುನಾವಣೆಯಲ್ಲಿ ಈಗಾಗಲೇ ಬುದ್ಧಿ ಕಲಿಸಿದ್ದಾರೆ. ನಾನು ಶಾಸಕನಾಗಿದ್ದೆ, ಜೆ.ಡಿ ನಾಯ್ಕ ಮತ್ತು ಶಿವಾನಂದ ನಾಯ್ಕ ಶಾಸಕರಾಗಿ ಕೆಲಸ ಮಾಡಿದ್ದಾರೆ. ಆದರೆ ದ್ವೇಷದಿಂದ ರಾಜಕೀಯ ಸರಿ ಅಲ್ಲ ಎಂದರು.
ಇನ್ನೊಂದು ಪ್ರಕರಣದ ಸಂತ್ರಸ್ಥೆ ನಾಗರತ್ನ ಹಳ್ಳೇರ ಮಾತನಾಡಿ ತಾನು ತನ್ನ ಮೇಲೆ ನಡೆದ ದೌರ್ಜನ್ಯದ ಕುರಿತು ದೂರು ನೀಡಲು ಠಾಣೆಗೆ ಹೋದಾಗ ಸ್ಥಳೀಯ ಸಿ.ಪಿ.ಐ ಮತ್ತು ಪಿ.ಎಸ್.ಐ ಅತೀ ಹಗುರವಾಗಿ ಮಾತನಾಡಿದ್ದರೆ. ಸಾಯಂಕಾಲ ೫.೩೦ ರಿಂದ ರಾತ್ರಿ ೧.೩೦ರ ವರೆಗೆ ನನ್ನನ್ನು ಠಾಣೆಯಲ್ಲಿ ಇರಿಸಿ ದೂರು ಸ್ವೀಕರಿಸದೇ ಹಂಗಿಸಿದ್ದಾರೆ. ನಿನಗೆ ಯಾರಾದರೂ ಹಣ ಕೊಡುತ್ತಾರೆಂದು ಬಂದು ದೂರು ನೀಡುವುದಲ್ಲ, ನಾನು ಈ ದೂರು ಸ್ವೀಕರಿಸುವುದಿಲ್ಲ ಎಂದಿದ್ದಾರೆ. ನಾವು ನಮ್ಮ ಮೇಲೆ ನಡೆದ ದೌರ್ಜನ್ಯವನ್ನು ಪೊಲೀಸ್ ಠಾಣೆಗೆ ತಿಳಿಸದೇ ಇನ್ಯಾರಿಗೆ ತಿಳಿಸಬೇಕು. ಅಂತಹ ಅಧಿಕಾರಿಗಳ ವಿರುದ್ಧ ತಕ್ಷಣ ಕಾನೂನು ಕ್ರಮ ಜರುಗಿಸಿ ಎಂದು ಶಾಸಕರನ್ನು ಒತ್ತಾಯಿಸಿದರು.
ಉದ್ಯಮಿ ಜಿಜಿ ಶಂಕರ ಘಟನೆಯನ್ನು ವಿವರಿಸಿ ನಾನು ನನ್ನ ಉದ್ಯಮ ನಡೆಸಿ ಬಂದವನು ನನ್ನದು ಯಾವುದೇ ಅಪರಾಧಿಕ ಹಿನ್ನಲೇ ಇಲ್ಲ, ಇಸ್ಪೀಟ್, ಒಸಿ, ಕೋಲಿ ಜೂಜು ನಡೆಸುವವನಲ್ಲ. ನನ್ನನ್ನು ಹತ್ತಿಕ್ಕುವ ಯತ್ನ ಮಾಡಲಾಗಿದೆ. ಬಿಜೆಪಿ ಕಾರ್ಯಕರ್ತರು ಉಸಿರುಗಟ್ಟುವ ಭಯದ ವಾತಾವರಣದಲ್ಲಿ ಇದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾಜಿ ಪ.ಪಂ ಉಪಾಧ್ಯಕ್ಷ ಸುರೇಶ ಹೊನ್ನಾವರ, ಬಿಜೆಪಿ ಮುಖಂಡ ಮಂಜುನಾಥ ನಾಯ್ಕ, ಮಾಜಿ ಜಿ.ಪಂ ಸಧಸ್ಯ ದೀಪಕ್ ನಾಯ್ಕ ಮಂಕಿ, ಉಮೇಶ ಮೇಸ್ತ ತುಳಸಿನಗರ ಹಾಗೂ ಇತರರು ಉಪಸ್ಥಿತರಿದ್ದರು. ಈ ಸಮಯದಲ್ಲಿ ಅಲ್ಲಿ ಉಪಸ್ಥಿತರಿದ್ದ ಬಿಜೆಪಿ ಕಾರ್ಯಕರ್ತರು ಸ್ಥಳೀಯ ಪೊಲೀಸರಿಂದ ಆಗುತ್ತಿರುವ ತೊಂದರೆಯನ್ನು, ಹಿಂಸೆಯನ್ನು ಶಾಸಕರಿಗೆ ವಿವರಿಸಿದರು.
———————————————————
ದಂಡುಪಾಳ್ಯದ ರಾಜಕೀಯ ಕ್ಷೇತ್ರದಲ್ಲಿ ನಡೆಯಲು ಬಿಡುವುದಿಲ್ಲ. ಯಾರದೋ ಮಾತು ಕೇಳಿ ಸುಳ್ಳು ಪ್ರಕರಣ ದಾಖಲಿಸುವ ಪೊಲೀಸರೇ ಹುಷಾರ್. ಇನ್ನು ನಾವು ಸುಮ್ಮನೆ ಇರುವುದಿಲ್ಲ. ಜನರನ್ನು ಸುಳ್ಳು ಕೇಸ್ ಮಾಡಿಸಿ ಕಿರಿಕರಿ ಮಾಡುವುದನ್ನು ಬಿಡಿ. ಕಾಂಗ್ರೇಸ್ ಕಾರ್ಯಕರ್ತರಿಗೆ ಒಂದು ನೀತಿ, ಬಿಜೆಪಿ ಕಾರ್ಯಕರ್ತರಿಗೆ ಒಂದು ನೀತಿ ಅಲ್ಲ. ಈಗಲೂ ಮರಳುಗಾರಿಕೆ ನಡೆಸಿ ೧.೫ ಲಕ್ಷ ದಿನದ ಉತ್ಪನ್ನ ಯರ‍್ಯಾರಿಗೆ ಹೋಗುತ್ತದೆ ಎನ್ನುವುದು ಜನರಿಗೆ ತಿಳಿದಿದೆ. ಜನರೇ ನಿಮಗೆ ಬುದ್ಧಿ ಕಲಿಸುತ್ತಾರೆ.
ಮಾಜಿ ಶಾಸಕ ಸುನೀಲ್ ನಾಯ್ಕ
———————————————————
ಅಂತಹ ವರ್ತನೆಯನ್ನು ನಮ್ಮ ಸಿಬ್ಬಂಧಿಗಳಾಗಲಿ, ನಾವಾಗಲಿ ತೋರಿಲ್ಲ. ಸಂತ್ರಸ್ಥೆ ದೂರು ನೀಡಲು ಬಂದಾಗ ಠಾಣೆಯ ಉಳಿದ ಕೆಲಸ ಕಾರ್ಯಗಳ ಒತ್ತಡದಿಂದ ದೂರು ಸ್ವೀಕರಿಸಲು ವಿಳಂಭವಾಗಿದೆ ಮತ್ತು ತುಂಬಾ ರಾತ್ರಿಯಾಗಿದೆ. ಆಕೆಯ ದೂರನ್ನು ಸ್ವೀಕರಿಸಿದ್ದೇವೆ.
ಪೊಲೀಸ್ ವೃತ್ತ ನಿರೀಕ್ಷಕ ಸಿದ್ಧರಾಮೇಶ

More Stories
ಕಿರಿಯ ಪ್ರಾಥಮಿಕ ಶಾಲೆ ಯಲಕೊಟ್ಟಿಗೆ 2024 25 ನೇ ಶೈಕ್ಷಣಿಕ ವರ್ಷದ ಉತ್ತಮ ಸಾಧನೆಗಾಗಿ ಜಿಲ್ಲಾ ಮಟ್ಟದ ಉತ್ತಮ ಎಸ್. ಡಿ. ಎಂ. ಸಿ. ಪ್ರಶಸ್ತಿ
‘ಜನಸಾಮಾನ್ಯರಲ್ಲೂ ವಿಜ್ಞಾನದ ಅರಿವು ಅಗತ್ಯ’
ಹೊನ್ನಾವರದಲ್ಲಿ ಇಂದು ಆರ್ ವಿ ದೇಶಪಾಂಡೆ