ಬೈಂದೂರು : ಅಖಿಲ ಕರ್ನಾಟಕ ಚಾರೋಡಿ ಸಮಾಜ(ರಿ.) ಇದರ ವತಿಯಿಂದ ಚಾರೋಡಿ ಮೇಸ್ತ ಸಮಾಜದ ಇತಿಹಾಸಲ್ಲಿ ಪ್ರಥಮ ಬಾರಿಗೆ ರಾಜ್ಯಮಟ್ಟದ ಚಾರೋಡಿ ಮೇಸ್ತ ಸಮ್ಮೇಳನ -೨೦೨೫ ಡಿ.೨೮ರಂದು ಶಿರೂರು ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಅಖಿಲ ಕರ್ನಾಟಕ ಚಾರೋಡಿ ಮೇಸ್ತ ಸಮಾಜದ ರಾಜ್ಯಾಧ್ಯಕ್ಷ ರಾಮಚಂದ್ರ ಬಿ.ಶಿರೂರಕರ್ ಹೇಳಿದರು.
ಅವರು ಶುಕ್ರವಾರ ಶಿರೂರು ಕಾಲೇಜು ಮೈದಾನದಲ್ಲಿ ನಡೆದ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಅಖಿಲ ಕರ್ನಾಟಕ ಚಾರೋಡಿ ಮೇಸ್ತ ಸಮಾಜ (ರಿ.) ವು ೨೦೧೬ರಲ್ಲಿ ಸ್ಥಾಪನೆಗೊಂಡಿದ್ದು ಅದರ ಕೇಂದ್ರ ಕಛೇರಿಯನ್ನು ಸಾಗರದಲ್ಲಿ ಪ್ರಾರಂಭಿಸಿರುತ್ತೇವೆ. ನಮ್ಮ ಸಮುದಾಯದವರು ನೆಲೆನಿಂತ ಪ್ರದೇಶಗಳಿಂದ ಸಂಘಟನೆಯನ್ನು ಬಲಗೊಳಿಸಿ ಸಮುದಾಯದ ಅಭಿವೃದ್ಧಿಯ ಕಡೆಗೆ ಗಮನ ನೀಡುವ ಉದ್ದೇಶದಿಂದ ಅಖಿಲ ಕರ್ನಾಟಕ ಚಾರೋಡಿ ಮೇಸ್ತ ಸಮಾಜ (ರಿ.) ಎಂಬ ಹೆಸರಿನಲ್ಲಿ ಸಂಸ್ಥೆಯನ್ನು ಸ್ಥಾಪಿಸಲಾಯಿತು. ಕಳೆದ ಹತ್ತು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ನಮ್ಮ ಸಂಘದಲ್ಲಿ ಸಾಗರ, ಹೊನ್ನಾವರ, ಶಿರಸಿ, ಶಿರೂರು, ಬೆಣ್ಣೆರೆ, ಕುಂದಾಪುರ, ಮಂಗಳೂರು, ಶಿವಮೊಗ್ಗ, ಬೆಂಗಳೂರು ಹಾಗೂ ಪ್ರಸ್ತುತ ಕಾರವಾರದ ಭಾಗದಿಂದ ಪದಾಧಿಕಾರಿಗಳು, ಸದಸ್ಯರುಗಳು ಇದ್ದು, ಸಂಘಟನೆಯನ್ನು ಮುಂದುವರಿಸಿಕೊAಡು ಬಂದಿರುತ್ತೇವೆ.
ಗುರು-ಶಿಷ್ಯ ಪರಂಪರೆಯನ್ನು ಹೊಂದಿರುವ ಶೃಂಗೇರಿ ಮಠಕ್ಕೆ ಪ್ರತಿವರ್ಷ ನಮ್ಮ ಸಂಘಟನೆಯ ಮುಂದಾಳತ್ವದಲ್ಲಿ ಚಾತುರ್ಮಾಸದ ಸಂದರ್ಭದಲ್ಲಿ ಶೃಂಗೇರಿ ಶ್ರೀ ಶಾರದಾಂಬೆಯ ದರ್ಶನ ಮತ್ತು ಗುರುವಂದನಾ ಧಾರ್ಮಿಕ ಕಾರ್ಯಕ್ರಮದಲ್ಲಿ ಐದನೇ ರವಿವಾರ ರಾಜ್ಯದ ನಾನಾ ಕಡೆಯಿಂದ ನಮ್ಮ ಸಮುದಾಯದವರು ಭಾಗವಹಿಸಿ ಶ್ರೀ ಶಾರದಾಂಬೆಯ ದರ್ಶನ ಹಾಗೂ ಜಗದ್ಗುರುಗಳ ಆಶೀರ್ವಚನ ಕಾರ್ಯದಲ್ಲಿ ಭಾಗವಹಿಸುತ್ತಾ ಬಂದಿರುವುದು ಶ್ಲಾಘನೀಯವಾಗಿದೆ.
ಉಪಾಧ್ಯಕ್ಷ ಸತೀಶ ಡಿ.ಮೇಸ್ತ ಮಾತನಾಡಿ ಶಿಕ್ಷಣ ಮತ್ತು ಆರ್ಥಿಕ ಚಟುವಟಿಕೆಗೆ ಆದ್ಯತೆ ಮುಂದಿನ ದಿನಗಳಲ್ಲಿ ಚಾರೋಡಿ ಮೇಸ್ತ ಸಮಾಜ ಶಾಲೆಗಳ ಸ್ಥಾಪನೆ ಮತ್ತು ಆರ್ಥಿಕ ಸ್ವಾವಲಂಬನೆಗೆ ಹಣಕಾಸು ಸಂಸ್ಥೆಯ ವೃದ್ಧಿ ವಿಶೇಷ ಆದ್ಯತೆಯಾಗಿದೆ. ಈ ಸಮ್ಮೇಳನದ ಮೂಲಕ ಸಂಘಟನೆ ಬಲಪಡಿಸಿ ರಾಜ್ಯಮಟ್ಟದಲ್ಲಿ ಗುರುತಿಸುವ ಸಂಭ್ರಮವಾಗಿದೆ. ನಮ್ಮ ಸಮುದಾಯದವರೆಲ್ಲರ ಸಹಕಾರದಿಂದ ಶೈಕ್ಷಣಿಕ ಅಭಿವೃದ್ಧಿ, ಸಮುದಾಯದ ಅಭಿವೃದ್ಧಿಗೆ ಸರಕಾರಿ ಯೋಜನೆಗಳ ಸದ್ಬಳಕೆ ಮತ್ತು ಸಂಘಟನೆ ಹಾಗೂ ಹಲವು ಜನಪರ ಕಾರ್ಯಗಳನ್ನು ಹಮ್ಮಿಕೊಂಡಿರುತ್ತೇವೆ. ಪ್ರಸ್ತುತ ಈ ವರ್ಷದಲ್ಲಿ ನಮ್ಮ ಚಾರೋಡಿ ಮೇಸ್ತ ಸಮಾಜದವರು ನೆಲೆನಿಂತ ಪ್ರದೇಶಗಳಿಂದ ಸಮಾಜದ ಸಂಘಟನೆ ಬಲಗಪಡಿಸುವ ನಿಟ್ಟಿನಲ್ಲಿ ಅಖಿಲ ಕರ್ನಾಟಕ ಚಾರೋಡಿ ಮೇಸ್ತ ಸಮಾಜ (ರಿ.) ದ ಮುಂದಾಳತ್ವದಲ್ಲಿ ಶಿರೂರಿನಲ್ಲಿ ಚಾರೋಡಿ ಮೇಸ್ತ ಸಮ್ಮೇಳನ-೨೦೨೫ ಆಯೋಜನೆ ಮಾಡಿರುತ್ತೇವೆ. ಈ ಕಾರ್ಯಕ್ರಮದಲ್ಲಿ ನಮ್ಮ ಸಮುದಾಯದವರು ಹಾಗೂ ಎಲ್ಲಾ ನಮಾಜ ಬಾಂಧವರು ಆಗಮಿಸಿಯಶಸ್ವಿಗೊಳಿಸಬೇಕೆಂದು ಹೇಳಿದರು.
ಕಾರ್ಯಕ್ರಮದ ಪೂರ್ವಭಾವಿಯಾಗಿ ಭಾನುವಾರ ಶಿರೂರು ಕೆಳಪೇಟೆಯಿಂದ ಮಾರ್ಕೆಟ್ ಕಾಲೇಜು ಮೈದಾನದವರಗೆ ಚೆಂಡೆ ವಾದನ,ಡೊಳ್ಳು ಕುಣಿತ, ಜಾನಪದ ಶೈಲಿಯ ವಿವಿಧ ವೇಷಭೂಷಣಗಳು, ವಿವಿಧ ಕಲಾ ತಂಡಗಳು, ತಟ್ಟಿರಾಯ, ಕೀಲು ಕುದುರೆ ಹಾಗೂ ಬ್ರಹತ್ ಶೋಭಾಯಾತ್ರೆ ನಡೆಯಲಿದೆ. ಬಳಿಕ ಸಭಾ ಕಾರ್ಯಕ್ರಮ, ಸಾಧಕರಿಗೆ ಸಮ್ಮಾನ ಕಾರ್ಯಕ್ರಮ, ಸಾಂಸ್ಕೃತಿಕ ಕಲಾ ವೈಭವ, ಭರತನಾಟ, ವಿವಿಧ ಸಾಂಸ್ಕೃತಿಕ ವೈವಿದ್ಯಮಯ ಹಾಗೂ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷ ನಾಗೇಶ ಪಿ.ಮೇಸ್ತ, ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಎಂ.ಸಹ ಕಾರ್ಯದರ್ಶಿ ಉಮೇಶ ಎಲ್.ಮೇಸ್ತ ಬೆಣ್ಣೆರೆ ಹರೀಶ ಮೇಸ್ತ ಬೆಣ್ಣೆರೆ, ಸೋಮ ಪಿ.ಮೇಸ್ತ ಹೊನ್ನಾವರ, ಕೆ.ವಿ ಜಯರಾಮ ಸಾಗರ, ಶ್ರೀಧರ ಜಿ.ಮೇಸ್ತ ಶಿರೂರು, ರತ್ನಾಕರ ಡಿ.ಮೇಸ್ತ ಶಿರೂರು, ಶಿರೂರು ಚಾರೋಡಿ ಮೇಸ್ತ ಸಮಾಜದ ಅಧ್ಯಕ್ಷ ಪ್ರದೀಪ ಎಸ್.ಮೇಸ್ತ ಉಪಸ್ಥಿತರಿದ್ದರು.
ಖಜಾಂಚಿ ರಾಮನಾಥ ಪಿ.ಮೇಸ್ತ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಅಣ್ಣಪ್ಪ ವಿ.ಮೇಸ್ತ ವಂದಿಸಿದರು.
ವರದಿ : ಎಚ್ ಸುಶಾಂತ್ ಆಚಾರ್ ಬೈಂದೂರು

More Stories
ಸುರಭಿ ಜೈಸಿರಿ -2026 ಬಿಂದುಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭ.
ಕಂಬದಕೋಣೆ ಗ್ರಾಮ ಪಂಚಾಯತ್ನಲ್ಲಿ ಸುದ್ಧಿಗೋಷ್ಟಿ
ಬೈಂದೂರು : ಅನಿರ್ಧಿಷ್ಟಾವಧಿ ಧರಣಿ 104ನೇ ದಿನಕ್ಕೆ . ಗೆರಟೆ ಹಿಡಿದು ವಿಶೇಷ ಪ್ರತಿಭಟನೆ