ಹೊನ್ನಾವರ; ಕ್ಯಾಥೋಲಿಕ್ ಕೈಸ್ತ ಸಂಘ ಕಾರವಾರ ಇವರ ವತಿಯಿಂದ ಪಟ್ಟಣದಲ್ಲಿ ವಿಜ್ರಂಭಣೆಯಿಂದ ಕ್ರಿಸ್ಮಸ್ ಟ್ಯಾಬ್ಲೋ ಸಂಚರಿಸಿತು. ಬಿಕಾಸಿ ತಾರಿಯಿಂದ ಪ್ರಾರಂಭಗೊಂಡ ಟ್ಯಾಬ್ಲೋ ವಿವಿಧ ಸ್ಥಳಗಳಲ್ಲಿ ನಿಂತು ಬಾಲ ಯೇಸುಕ್ರಿಸ್ತರ ಜನನದ ಕುರಿತು ಸಂದೇಶವನ್ನು ಸಾರಿತು.
ಕೆಳಗಿನ ಪಾಳ್ಯ, ಬಂದರ್, ಬಸ್‌ಸ್ಯಾಂಡ್, ಟಪ್ಪರ್ ಸರ್ಕಲ್, ಹೈವೇ ಸರ್ಕಲ್, ಬಾಂದೇ ಹಳ್ಳ, ಕರ್ಕಿ ನಾಕ, ಎಮ್ಮೆ ಪೈಲ್, ಗಾಂಧಿನಗರ್, ಸೇಂಟ್ ಇಗ್ನೇಶಿಯಸ್ ರಸ್ತೆ ಮತ್ತಿತರ ಕಡೆಗಳಲ್ಲಿ ಸ್ ಟ್ಯಾಬ್ಲೋ ಸಂಚರಿಸಿ ಉತ್ಸಾಹಭರಿತ ಸಂಗೀತ, ಹಾಡುವಿಕೆ ಮತ್ತು ನೃತ್ಯದ ಜೊತೆಗೆ ಹಬ್ಬದ ವಾತಾವರಣವನ್ನೇ ಸೃಷ್ಟಿ ಮಾಡಿತು.
ಹೊನ್ನಾವರದ ಡೀನರಿಯ ವಿವಿಧ ಪ್ಯಾರಿಷ್‌ಗಳ ಯುವಕರು, ಪ್ಯಾರಿಷ್‌ನವರು ಮತ್ತು ಬೆಂಗಳೂರು ಬಾಯ್ಸ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಮಕ್ಕಳು ಮತ್ತು ಯುವಕರ ಪಾಲ್ಗೊಳ್ಳುವಿಕೆ ವಿಶೇಷ ಆಕರ್ಷಣೆಯನ್ನು ಸೇರಿಸಿತು, ಇದು ಕ್ರಿಶ್ಚಿಯನ್ ಸಮುದಾಯದ ಏಕತೆ ಮತ್ತು ಉತ್ಸಾಹವನ್ನು ಪ್ರತಿಬಿಂಬಿಸಿತು. ಈ ಸಂಧರ್ಭದಲ್ಲಿ ಸಾನ್ ಸಲ್ವಾದೋರ್ ಚರ್ಚ ಹೊನ್ನಾವರ ಇದರ ಬ್ರದರ್ ಸೈಮನ್ ರವರು ನೆರೆದವರಿಗೆ ಶುಭ ಸಂದೇಶವನ್ನು ನೀಡಿ ಹಾರೈಸಿದರು. ಸ್ಥಳೀಯರು ಸಹ ಈ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಕ್ರಿಸ್ಮಸ್ ಹಬ್ಬದ ಸಂತಸ ವ್ಯಕ್ತಪಡಿಸಿದರು.
ಕ್ರಿಸ್‌ಮಸ್‌ನ ಮೂಲ ಮೌಲ್ಯಗಳಾದ ಶಾಂತಿ, ಕರುಣೆ, ಹಂಚಿಕೆ ಮತ್ತು ಸಾಮರಸ್ಯವನ್ನು ಸಮಾಜಕ್ಕೆ ನೆನಪಿಸುವುದು ಈ ಟ್ಯಾಬ್ಲೋದ ಉದ್ದೇಶ ಎಂದು ಸಂಘಟಕರು ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಏಕತೆ ಮತ್ತು ಸಹೋದರತ್ವದ ಸಂದೇಶವನ್ನು ಬಲಪಡಿಸುವ ಮೂಲಕ ಎಲ್ಲರ ನಡುವೆ ಕ್ರಿಸ್‌ಮಸ್ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುವುದರೊಂದಿಗೆ ಕಾರ್ಯಕ್ರಮವು ಶಾಂತಿಯುತವಾಗಿ ಮುಕ್ತಾಯಗೊಂಡಿತು. ಕ್ಯಾತೋಲಿಕ್ ಸಂಘಟನೆಯ ಅಧ್ಯಕ್ಷರಾದ ಜಾರ್ಜ್ ಎಸ್. ಫರ್ನಾಂಡಿಸ್, ಉಪಾಧ್ಯಕ್ಷ ಸ್ಟೀಫನ್ ಎ. ರೋಡ್ರಿಗೀಸ್ ಮತ್ತು ಹೊನ್ನಾವರ ಡೀನರಿ ಸಂಯೋಜಕ ಹೆನ್ರಿ ಲೀಮಾ ಮತ್ತಿತರರು ಉಪಸ್ಥಿತರಿದ್ದರು.
ವರದಿ : ವಿಶ್ವನಾಥ ಸಾಲ್ಕೋಡ ಹೊನ್ನಾವರ

More Stories
ಕರ್ಕಿಯಲ್ಲಿ ದಿವಂಗತ ಪ್ರಭಾಕರ ಭಂಡಾರಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ
ಆಕಸ್ಮಿಕ ಬೆಂಕಿ
೨೦೨೬ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಹಾಗೂ ನೇತ್ರ ತಪಾಸಣಾ ಶಿಬಿರ