March 1, 2026

ದಿ.ಡಿ.ದೇವರಾಜ ಅರಸು ವಿಚಾರ ವೇದಿಕೆಯಿಂದ ಪತ್ರಿಕಾಗೋಷ್ಠಿ

ಹೊನ್ನಾವರ: ಕಂದಾಯ ಇಲಾಖೆಯ ಪೌತಿ ಅಥವಾ ವಾರಿಸಾ ಅರ್ಜಿ ಸ್ವೀಕಾರ ಸರಳೀಕರಣಗೊಳಿಸುವಂತೆ ದಿ.ಡಿ.ದೇವರಾಜ ಅರಸು ವಿಚಾರ ವೇದಿಕೆ ಅಧ್ಯಕ್ಷ ಅನಂತ ನಾಯ್ಕ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.


ಹೋನ್ನಾವರ ನಾಮಧಾರಿ ವಿದ್ಯಾರ್ಥಿನಿಲಯದಲ್ಲಿ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು, ವಾರಿಸ್ಸಾ ದಾಖಲೆಗಾಗಿ ವಂಶವೃಕ್ಷ ಪಡೆದು ಸಲ್ಲಿಸಬೇಕು. ಆದರೆ ಇತ್ತಿಚಿನ ದಿನಗಳಲ್ಲಿ ವಾರಿಸ್ಸಾ ದಾಖಲೆ ಪಡೆಯಲು ಒಟಿಪಿ ಕೇಳುತ್ತಾರೆ. ವಂಶವೃಕ್ಷ ನೀಡುವಾಗಲೇ, ಮರಣ ಹೊಂದಿದ ಸದಸ್ಯರ ಮರಣ ದಾಖಲೆ, ಜೀವಂತ ಸದಸ್ಯರ ಆಧಾರ ಕಾರ್ಡ್ ಪಡೆದು ನೀಡುತ್ತಾರೆ. ಕುಟುಂಬದ ಎಲ್ಲಾ ಸದಸ್ಯರಿಗೂ ಹಕ್ಕು ನೀಡುವುದೇ ಹೊರತು, ಹಕ್ಕು ಕಳೆದುಕೊಳ್ಳಲು ಅಲ್ಲ. ಹೀಗಿರುವಾಗ ಪ್ರತಿ ಸದಸ್ಯರ ಓಟಿಪಿಯಿಂದ ಕಷ್ಟಸಾಧ್ಯವಾಗಿದ್ದು, ಕುಟುಂಬ ಸದಸ್ಯರು ದೇಶ, ವಿದೇಶಗಳಲ್ಲಿರುತ್ತಾರೆ. ಈ ಒಟಿಪಿ ವ್ಯವಸ್ಥೆ ಕೈಬಿಡಬೇಕು. ವಂಶವೃಕ್ಷ ಪಡೆದ ಮೇಲೆ ಒಟಿಪಿ ಯಾಕೆ? ಇದನ್ನು ಕೈಬಿಡದಿದ್ದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡುತ್ತೇವೆ. ತಾಲೂಕಿನಲ್ಲಿ 7400ಕ್ಕೂ ಅಧಿಕ ಪಹಣಿ ಪತ್ರಿಕೆಯಲ್ಲಿ ಇಂದಿಗೂ ಕರ್ನಾಟಕ ಸರ್ಕಾರ ಎಂದು ನಮೂದಾಗಿದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಸಮಸ್ಯೆ ಬಗೆಹರಿಸಬೇಕು. ಈ ಬಗ್ಗೆ ಮುಂದಿನ ದಿನದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸುದಾಗಿ ಇದೆ ವೇಳೆ ಭರವಸೆ ನೀಡಿದರು.


ಸಂಘಟನೆಯ ಪ್ರಮುಖರಾದ ನಾರಾಯಣ ಮುಕ್ರಿ ಕಡತೋಕಾ ಮಾತನಾಡಿ ಡಿ.ದೇವರಾಜ ಅರಸುರವರು ಸಿಎಂ ಆಗಿದ್ದಾಗ “ಉಳುವವನೇ ಭೂಮಿ ಒಡೆಯ” ಕಾನೂನಿನ ಮೂಲಕ ರೈತರ ಜಮೀನು ರೈತರಿಗೆ ಸೇರುವಂತೆ ಮಾಡಿದ್ದರು. ಹಕ್ಕು ಕೊಟ್ಟು, ಹಕ್ಕನ್ನು ಕಸಿಯುವ ಕೆಲಸ ಮಾಡಲಾಗಿದೆ. ಇಂದು ಇಲ್ಲಸಲ್ಲದ ನಾನಾ ಕಾರಣಗಳಿಂದ ಜಡ್ಜಮೆಂಟ್ ಆಗಿ ರೈತರ ಭೂಮಿ ಹಕ್ಕೂ ಇದ್ದರು ಇಲ್ಲದಂತಾಗಿದೆ. ಈ ಬಗ್ಗೆ ಸರಿಪಡಿಸುವಂತೆ ಹಲವು ಬಾರಿ ಅರ್ಜಿ ನೀಡಿದರೂ, ಬಡವರಿಗೆ ಅನ್ಯಾಯವಾಗಿದೆ. ಕೂಡಲೇ ಪಹಣಿಯಲ್ಲಿ ಕರ್ನಾಟಕ ಸರ್ಕಾರ ಮುಕ್ತಿಗೊಳಿಸಬೇಕು ಎಂದು ಒತ್ತಾಯಿಸಿದರು.


ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ದೀಪಕ ಲೋಬೋ ಕೊಡಾಣಿ, ಕೇಶವ ನಾಯ್ಕ ಮಾಗೋಡ, ಶಂಕರ ನಾಯ್ಕ ಭಟ್ಕಳ, ಪಾಂಡುರಂಗ ವೈದ್ಯ, ವಸಂತ ದೇವಾಡಿಗ ಉಪಸ್ಥಿತರಿದ್ದರು.

ವರದಿ : ವಿಶ್ವನಾಥ ಸಾಲ್ಕೋಡ ಹೊನ್ನಾವರ

About The Author

error: Content is protected !!