January 18, 2026

ಕೆ.ಆರ್.ಪೇಟೆ ಕೃಷ್ಣ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಯಶಸ್ವಿಯಾಗಿ ನಡೆದ ಆಹಾರಮೇಳ..

ಭವಿಷ್ಯದ ತಾಂತ್ರಿಕ ಶಿಲ್ಪಿಗಳಾದ ಯುವಕ ಯುವತಿಯರು ತಿಂಡಿ ತಿನಿಸುಗಳನ್ನು ತಯಾರಿಸಿ ಭರ್ಜರಿಯಾಗಿ ವ್ಯಾಪಾರ ಮಾಡಿ ಸೈನಿಸಿಕೊಂಡರು.. ಕೆ.ಆರ್.ಪೇಟೆ ಕೃಷ್ಣ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂದು ತಾಂತ್ರಿಕ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಆಹಾರ ಮೇಳವು ಪ್ರಾಂಶುಪಾಲರಾದ ನಾಗಪ್ಪ ಭಜಂತ್ರಿ ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು..

ವ್ಯವಹಾರ ಜಾಣ್ಮೆ ಹಾಗೂ ಲೋಕಜ್ಞಾನವನ್ನು ತಿಳಿದುಕೊಳ್ಳಲು ಆಹಾರಮೇಳವು ವಿದ್ಯಾರ್ಥಿಗಳಿಗೆ ವರದಾನ ವಾಯಿತು ಎಂದು ಪ್ರಾಂಶುಪಾಲ ಡಾ.ನಾಗಪ್ಪ ಭಜಂತ್ರಿ ಹೇಳಿದರು. ಹುಣಸೆ ಹಣ್ಣು ಮಿಶ್ರಿತ ಬೆಲ್ಲದ ಉಂಡೆ, ಪಾನಿಪುರಿ, ರಾಗಿರೊಟ್ಟಿ, ಹುಚ್ಚೆಳ್ಳು ಹುಡಿ, ಕಡಲೆ ಕಾಳು ಉಸಲಿ, ಹೆಸರು ಬೇಳೆ ಪಲ್ಯ, ಕೋಸಂಬರಿ, ಪನ್ನೀರ್ ಟಿಕ್ಕಾ ಸೇರಿದಂತೆ ತರಕಾರಿಗಳು ಹಾಗೂ ಹಣ್ಣು ಹಂಪಲುಗಳನ್ನು ಭರ್ಜರಿಯಾಗಿ ವ್ಯಾಪಾರ ಮಾಡಿ ಸೈ ಎನಿಸಿಕೊಂಡ ವಿದ್ಯಾರ್ಥಿಗಳು ನಾವು ತಾಂತ್ರಿಕ ಶಿಕ್ಷಣ ಪಡೆಯುತ್ತಿದ್ದರು ವ್ಯವಹಾರ ಜಾಣ್ಮೆ ಹಾಗೂ ಲೋಕ ಜ್ಞಾನದಲ್ಲಿ ಮುಂದಿದ್ದೇವೆ ಎಂಬುದನ್ನು ಸಾಬೀತುಪಡಿಸಿ ತೋರಿಸಿದರು.. ಬನ್ನಿ ನಮ್ಮ ಬಳಿ ತಾಜಾ ತಾಜಾ ತರಕಾರಿ ಇದೆ ಇದೀಗ ತಾನೇ ತೋಟದಿಂದ ತಂದಿರುವ ಹಣ್ಣು ಹಂಪಲುಗಳಿವೆ ಭಾರಿ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದ್ದೇವೆ. ಬನ್ನಿ ನಮ್ಮ ಬಳಿ ಪಾನಿಪುರಿ ತಿನ್ನಿ ರಾಗಿ ರೊಟ್ಟಿ ಹುಚ್ಚೆಳ್ ಚಟ್ನಿ ಇದೆ ಬನ್ನಿ.. ಗಟ್ಟಿ ಮೊಸರು ಹಾಕಿ ಕೊಡ್ತೀವಿ ಎಂದು ಗ್ರಾಹಕರನ್ನು ಆಕರ್ಷಿಸಿಕೊಂಡು ವಿದ್ಯಾರ್ಥಿಗಳು ಪೈಪೋಟಿಯ ಮೇರೆಗೆ ವ್ಯಾಪಾರ ನಡೆಸುತ್ತಿದ್ದದ್ದು ಕಂಡು ಬಂತು.

ಆಹಾರ ಮೇಳದ ಉಸ್ತುವಾರಿ ವಹಿಸಿದ್ದ ಸಹಾಯಕ ಪ್ರಾಧ್ಯಾಪಕ ಡಾ.ರುದ್ರೇಶ್ ಮಾತನಾಡಿ ಇಂದು ನಮ್ಮ ಕಾಲೇಜಿನಲ್ಲಿ ನಡೆದ ಆಹಾರ ಮೇಳದಲ್ಲಿ ವಿದ್ಯಾರ್ಥಿಗಳು ಬಹಳ ಉತ್ಸುಕರಾಗಿ ಭಾಗವಹಿಸಿದ್ದರು. ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶನದ ಮೇರೆಗೆ ನಡೆಸಿದ ಆಹಾರ ಮೇಳವು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದನ್ನು ಕಂಡು ಸಂತೋಷವಾಗಿದೆ ಎಂದು ಡಾ.ರುದ್ರೇಶ್ ಹೇಳಿದರು. ಬೆಳಗ್ಗೆ 10 ಗಂಟೆಗೆ ಆರಂಭವಾದ ಆಹಾರಮೇಳವು ಸಂಜೆ ನಾಲ್ಕು ಗಂಟೆಯವರೆಗೂ ನಡೆಯಿತು ವಿದ್ಯಾರ್ಥಿಗಳು ನಡೆಸಿದ ಆಹಾರಮೇಳದಲ್ಲಿ ಪೋಷಕರು ಹಾಗೂ ಸಾರ್ವಜನಿಕರು ಭಾಗವಹಿಸಿ ಭಾರಿ ರಿಯಾಯಿತಿ ದರದಲ್ಲಿ ಸಿಕ್ಕಿದ ಆಹಾರ ಪದಾರ್ಥಗಳನ್ನು ಕೊಂಡು ಸವಿರುಚಿಯನ್ನು ಅನುಭವಿಸಿದರು.

ವರದಿ.ಡಾ.ಕೆ.ಆರ್.ನೀಲಕಂಠ, ಕೃಷ್ಣರಾಜಪೇಟೆ. ಮಂಡ್ಯ.

About The Author

error: Content is protected !!