ಭಟ್ಕಳ: ನಗರದ ರಂಗೀಕಟ್ಟೆಯಲ್ಲಿರುವ ಕರ್ಣಾಟಕ ಬ್ಯಾಂಕ್ ಶಾಖೆ ಆರಂಭವಾಗಿ ೫೦ ವರ್ಷಗಳಾದ ಪ್ರಯುಕ್ತ ಗೋಲ್ಡನ್ ಜುಬಿಲಿ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ದೀಪ ಬೆಳಗುವುದರೊಂದಿಗೆ ಉದ್ಘಾಟಿಸಿ ಮಾತನಾಡಿದ ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಕರ್ಣಾಟಕ ಬ್ಯಾಂಕ್ ೧೦೦ ವಸಂತಗಳನ್ನು ಪೂರೈಸಿದರೆ, ಭಟ್ಕಳ ಶಾಖೆ ೫೦ ವಸಂತಗಳನ್ನು ಪೂರೈಸಿರುವುದು ಸಂತಸ ತಂದಿದೆ. ಭಟ್ಕಳ ಶಾಖೆಯಲ್ಲಿ ಅತ್ಯಂತ ಉತ್ತಮ ಸಹಕಾರ, ವ್ಯವಹಾರಕ್ಕೆ ಅನುಕೂಲತೆಗಳನ್ನು ಮಾಡಿಕೊಡುವುದನ್ನು ನೋಡಿದ್ದೇನೆ. ಇಲ್ಲಿನ ಸಿಬ್ಬಂದಿಗಳ ಸೇವೆಯೂ ಕೂಡಾ ಉತ್ತಮವಾಗಿದ್ದು ಈ ಸೇವೆಯನ್ನು ನಾವು ಬೇರೆ ಬೇರೆ ಬ್ಯಾಂಕುಗಳಲ್ಲಿ ನೋಡುವುದು ವಿರಳ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬ್ಯಾಂಕ್‌ನ ಉಡುಪಿ ಪ್ರಾದೇಶಿಕ ಉಪ ಮಹಾಪ್ರಬಂಧಕ ರಮೇಶ ವೈದ್ಯ ಮಾತನಾಡಿ ನಮ್ಮ ಬ್ಯಾಂಕು ೧೦೨ ವಸಂತಗಳನ್ನು ಪೂರೈಸಿದ್ದು, ಆರಂಭದಿAದಲೂ ಪ್ರತಿ ತ್ರೆöÊಮಾಸಿಕ ವರದಿಗಳಲ್ಲಿಯೂ ಲಾಭ ಮಾಡಿದ ಹಾಗೂ ಕೋವಿಡ್ ಸಮಯದಲ್ಲಿ ಒಂದು ವರ್ಷ ಹೊರ ತು ಪಡಿಸಿ ಎಲ್ಲಾ ವರ್ಷಗಳಲ್ಲಿಯೂ ಕೂಡಾ ಶೇರುದಾರರಿಗೆ ಡಿವಿಡೆಂಡ್ ನೀಡಿದ ಬ್ಯಾಂಕ್ ನಮ್ಮದು ಎಂದರು.
ಇದಕ್ಕೆ ನಮ್ಮ ಗ್ರಾಹಕರ ಸಹಕಾರ, ಸಿಬ್ಬಂದಿಗಳ ನಗುಮೊಗದ ಸೇವೆ ಮುಖ್ಯವಾಗಿದೆ. ಕಳೆದ ಕೆಲವು ಸಮಯದಿಂದ ನಮ್ಮ ಬ್ಯಾಂಕ್ ಬಗ್ಗೆ ಅಪಪ್ರಚಾರ ಮಾಡಲು ಯತ್ನಿಸಲಾಗಿದ್ದು, ಅಂತವರ ಮೇಲೆ ನ್ಯಾಯಾಲಯದ ವತಿಯಿಂದ ಪ್ರಕರಣ ದಾಖಲಿಸಲಾಗಿದ್ದಲ್ಲದೇ, ನ್ಯಾಯಾಲಯದ ಚಾನೆಲ್ ಒಂದಕ್ಕೆ ದಂಡ ಕೂಡಾ ವಿಧಿಸಿದೆ. ನಮ್ಮ ಬ್ಯಾಂಕು ಅತ್ಯಂತ ಸದೃಢವಾಗಿದ್ದು ನಮ್ಮ ಗ್ರಾಹಕರು ಯಾವುದೇ ಸುಳ್ಳು ಮಾಹಿತಿಗೆ ಕಿವಿಗೊಡಬೇಡಿ ಎಂದು ಕೋರಿದರು. ನಮ್ಮ ಬ್ಯಾಂಕು ಈಗ ೧ ಲಕ್ಷದ ೭೫ ಸಾವಿರ ಕೋಟಿಗೂ ಹೆಚ್ಚು ವ್ಯವಹಾರವನ್ನು ಹೊಂದಿದ್ದು ಇನ್ನೂ ಹೆಚ್ಚಿನ ಗುರಿ ನಮ್ಮದಾಗಿದೆ ಎಂದರು.
ನಮ್ಮ ಬ್ಯಾಂಕು ಅರಂಭದಿAದಲೂ ಸಾಮಾಜಿಕ ಜವಾಬ್ದಾರಿಯನ್ನು ಮೆರೆದ ನಮ್ಮ ಬ್ಯಾಂಕು ಇಂದಿಗೂ ಕೂಡಾ ಮುಂದುವರಿಸಿಕೊAಡಿದೆ. ಭಟ್ಕಳ ಶಾಖೆ ಎಲ್ಲಾ ಗುರಿಯನ್ನು ಸಾಧಿಸಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಗುರಿ ಸಾಧಿಸಲಿ ಎಂದು ಹರೈಸಿದರು. ಕಾರ್ಯಕ್ರಮದಲ್ಲಿ ಕ್ಲಸ್ಟರ್ ಹೆಡ್ ರಂಜಿತ್ ಶೆಟ್ಟಿ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳಾದ ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ ಅವರನ್ನು ಬ್ಯಾಂಕಿನ ಪರವಾಗಿ ಸನ್ಮಾನಿಸಲಾಯಿತು.
ಬ್ಯಾಂಕಿನ ಗೋಲ್ಡಜ್ ಜುಬಿಲಿ ಪ್ರಯುಕ್ತ ಆಯ್ದ ಗ್ರಾಹಕರುಗಳಲ್ಲಿ ಬ್ಯಾಂಕಿನ ಭಟ್ಕಳ ಶಾಖೆಯ ಪ್ರಥಮ ಗ್ರಾಹಕ ಗಣಪತಿ ಎಂ.ಭಟ್ಟ, ಗ್ರಾಹಕರಾದ ಪ್ರಕಾಶ ಎನ್. ಭಟ್ಟ, ನಾಗೇಶ ಮೋಹನ ಭಟ್ಟ, ವಿದ್ಯಾ ರಾಧಾಕೃಷ್ಣ ಭಟ್ಟ, ನಾರಾಯಣ ದೈಮನೆ, ಅನಿವಾಸಿ ಗ್ರಾಹಕರಾದ ಲಚ್ಮಯ್ಯ ಸಿದ್ದನಮನೆ ಹಾಗೂ ಪುರುಶೊತ್ತಮ ನಾಯಕ ಇವರುಗಳನ್ನು ಸನ್ಮಾನಿಸಲಾಯಿತು. ಸನ್ಮಾನಿತರು ಹಾಗೂ ಇತರ ಗ್ರಾಹಕರು ಬ್ಯಾಂಕಿನ ಸೇವೆಯ ಕುರಿತಾಗಿ ತಮ್ಮ ಅನಿಸಿಕೆಗಳನ್ನು ಹಂಚಿಕೊAಡರು. ಬ್ಯಾಂಕಿನ ಶಾಖಾ ಪ್ರಬಂಧಕ ಸುನಿಲ್ ಪೈ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು
- ಬ್ಯಾಂಕಿನ ಶಾಖೆಯು ಪ್ರಥಮವಾಗಿ ತಮ್ಮ ೫ ರೂಪಾಯಿ ಖಾತೆಯೊಂದಿಗೆ ಆರಂಭವಾಗಿ ಇಂದು ೧೦೫ ಕೋಟಿ ವ್ಯವಹಾರ ಮಾಡುತ್ತಿರುವುದು ಗ್ರಾಹಕರಿಗೆ ಹೆಮ್ಮೆಯ ವಿಷಯವಾಗಿದೆ. ಬ್ಯಾಂಕಿನ ಈ ಶಾಖೆ ಇನ್ನೂ ಹೆಚ್ಚಿನ ಪ್ರಗತಿ ಹೊಂದಲಿ, ಗ್ರಾಹಕ ಸ್ನೇಹಿಯಾಗಿ ಹೀಗೆಯೇ ಮುಂದುವರಿಯಲಿ. . . . ಪ್ರಥಮ ಗ್ರಾಮಹ ಗಣಪತಿ ಎಂ. ಭಟ್ಟ.

More Stories
ಮುರುಡೇಶ್ವರ ಬೈಲೂರು ಕಲ್ಲು ತೂರಾಟ ಪ್ರಕರಣ
ಭಟ್ಕಳದ ‘ಸಂಶುದ್ದೀನ್ ಸರ್ಕಲ್’ ಗೋಪುರ ನೆಲಸಮ:ಇನ್ನೂನೆನಪು ಮಾತ್ರ
ಶ್ರೀವಲಿ ಪದವಿ ಪೂರ್ವ ಕಾಲೇಜುನಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ