ಶಿರಸಿ: ಇಲ್ಲಿನ ನಾಟ್ಯಶ್ರೀ ಕಲಾ ಕೇಂದ್ರದಿಂದ ನೃತ್ಯೋತ್ಸವ ಹಾಗೂ ಮನಸ್ವಿನಿ ನೃತ್ಯ ನಾಟಕದ ಪ್ರಥಮ ಪ್ರದರ್ಶನ ನಗರದ ರಂಗಧಾಮದಲ್ಲಿ ಜನವರಿ 4ರಂದು ಸಂಜೆ 5.30ರಿಂದ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆನರಾ ಬ್ಯಾಂಕ್ ಮ್ಯಾನೇಜರ್ ಮಹೇಂದ್ರ ಹೆಗಡೆ ಕರಸುಳ್ಳಿ ವಹಿಸಿಕೊಳ್ಳಲಿದ್ದು, ಉದ್ಘಾಟನೆಯನ್ನು ಸಾಮಾಜಿಕ ಕಾರ್ಯಕರ್ತೆ ಜ್ಯೋತಿ ವಿ. ಭಟ್ಟ ವಹಿಸಿಕೊಳ್ಳುವರು. ಅತಿಥಿಯಾಗಿ ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ಭಾಗವಹಿಸುವರು.
ಬಳಿಕ ಮಹಿಳೆಯರಿಂದ ಕೇರಳ, ರಾಜಸ್ತಾನಿ, ಪಶ್ಚಿಮ ಬಂಗಾಲ, ಕೊರವಂಜಿ ಅರೆ ಶಾಸ್ತ್ರೀಯ ಹಾಗು ಜಾನಪದ ನೃತ್ಯ ಪ್ರದರ್ಶನವಾಗಲಿದೆ. ಬಳಿಕ ದಿವಾಕರ ಹೆಗಡೆ ಕೆರೆಹೊಂಡ ವಿರಚಿತ ಮನಸ್ವಿನಿ ವಿಶೇಷ ನೃತ್ಯ ನಾಟಕ ಪ್ರದರ್ಶನವಾಗಲಿದೆ. ನೃತ್ಯಗುರು ವಿದ್ಯಾಶ್ರೀ ಹೆಗಡೆ ಸಂಯೋಜಿಸಿದ್ದು ಚೇತನಾ ಹೆಗಡೆ ಹಾಡುಗಾರಿಕೆಯಲ್ಲಿ ಭಾಗವಹಿಸುವರು. ತಬಲಾದಲ್ಲಿ ಮಂಜುನಾಥ ಮೋಟಿನಸರ, ಕೊಳಲಿನಲ್ಲಿ ಸುಭೋದರಾವ್, ಸಿತಾರ ದಲ್ಲಿ ಪುಷ್ಪಲತಾ ಭಟ್ ಭಾಗವಹಿಸುವರು ಎಂದು ಪ್ರಕಟನೆಯಲ್ಲಿ ಸಂಸ್ಥೆ ಅಧ್ಯಕ್ಷೆ ವಿದ್ಯಾಶ್ರೀ ಹೆಗಡೆ ತಿಳಿಸಿದ್ದಾರೆ.
About The Author


More Stories
ಕಸ್ತೂರಿ ರಂಗನ್ ವರದಿ: ಸೂಕ್ಷ್ಮ ಪ್ರದೇಶ ಅಧ್ಯಯನಕ್ಕೆ ಸಮಿತಿ ರಚನೆ ಹಾಗೂ ಜನವಸತಿ ಪ್ರದೇಶ ಮುಕ್ತಗೊಳಿಸಲು ರವೀಂದ್ರ ನಾಯ್ಕ ಆಗ್ರಹ
ಶಿರಸಿಯಲ್ಲಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಬೃಹತ್ ರ್ಯಾಲಿ: ವರದಿ ತಿರಸ್ಕರಿಸಲು ಹಕ್ಕು ಒತ್ತಾಯ
ನದಿ ತಿರುವು ಯೋಜನಾ ವಿರೋಧಿ ಹೋರಾಟ ತೀವ್ರಗೊಳಿಸುವುದು ಅನಿವಾರ್ಯ: ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ