
ಹೊನ್ನಾವರ: ಪ.ಪಂ.ಸಭಾಭವನದಲ್ಲಿ ಅಧ್ಯಕ್ಷ ವಿಜಯ ಕಾಮತ್ ಅಧ್ಯಕ್ಷತೆಯಲ್ಲಿ ಸಭೆಯ ಆರಂಭದಲ್ಲಿ ಶರಾವತಿ ಪಂಪ್ ಸ್ಟೋರೆಜ್ ಯೋಜನೆಯಿಂದ ಶರಾವತಿ ನೀರಿನ ಅಭಾವ ಉಂಟಾಗಲಿ ಎಂದು ನಮ್ಮೆಲ್ಲರ ವಿರೋಧವಿದೆ ಎಂದು ಸಭೆಯಲ್ಲಿ ಘೋಷಿಸಿದರು. ಈ ಬಗ್ಗೆ ಸದಸ್ಯ ಆಜಾದ್ ಅಣ್ಣಿಗೇರಿ ಪ್ರಶ್ನೆ ಮಾಡಿ ಸದಸ್ಯರ ಅಭಿಪ್ರಾಯ ಪಡೆಯದೇ ಯಾಕೆ ಹೇಳುತ್ತಿರಾ? ಸದಸ್ಯರ ಅಧಿಕಾರ ಮೊಟಕು ಮಾಡುವಿರಾ ಎಂದು ಪ್ರಶ್ನಿಸಿದಾಗ ಸದಸ್ಯರ ಮುಂದೆ ಪ್ರಶ್ನೆ ಇಡಲಾಯಿತು. ಈ ಯೋಜನೆಯಿಂದ ಯಾವ ಪ್ರಮಾಣದಲ್ಲಿ ನೀರಿನ ಸಮಸ್ಯೆ ಉಂಟಾಗಲಿದೆ ಎಂದು ಕೇಳಿದಾಗ ಅಂಕಿ ಅಂಶದ ಮಾಹಿತಿ ನೀಡಲು ಸಾಧ್ಯವಾಗಿಲ್ಲ. ಮಾಹಿತಿ ಅಪೂರ್ಣವಾಗಿದ್ದಲ್ಲಿ ಸಭೆಯಲ್ಲಿ ಯಾಕೆ ಇಟ್ಟು ಗೊಂದಲ ಮಾಡುತ್ತಿರಿ ಎಂದು ಅಸಮಧಾನ ವ್ಯಕ್ತಪಡಿಸಿದರು.

ಸದಸ್ಯರಾದ ಶಿವರಾಜ ಮೇಸ್ತ ಮಾತನಾಡಿ,ಬಈಗಾಗಲೇ ಗೇರುಸೊಪ್ಪಾ ಡ್ಯಾಂ ನಿರ್ಮಾಣದಿಂದ ಶರಾವತಿ ನದಿ ನೀರಿನ ಮಟ್ಟ ಕಡಿಮೆಯಾಗಿದೆ. ಈ ಯೋಜನೆ ಜಾರಿಯಾದರೆ ನದಿಯೇ ಸಂಪೂರ್ಣ ಬತ್ತಿ ಹೋಗಲಿದೆ. ಇದರಿಂದ ಮೀನುಗಾರಿಕೆಗು ತೊಂದರೆಯಾಗಲಿದೆ ಎಂದರು. ಪ.ಪಂ ಉಪಾಧ್ಯಕ್ಷ ಸುರೇಶ ಹೊನ್ನಾವರ ಮಾತನಾಡಿ, ಶರಾವತಿ ನದಿ ನೀರು ಅವಂಭಿಸಿಕೊAಡಿರುವ ನಮಗೆಲ್ಲಾ ಈ ಯೋಜನೆ ಜಾರಿಯಿಂದ ಮಾರಕ ಆಗಲಿದೆ. ಸಮುದ್ರದ ಉಪ್ಪು ನೀರು ನದಿಗೆ ನುಗ್ಗಿ ಕೃಷಿ ತೋಟಕ್ಕು ಹಾನಿಯಾಲಿದೆ ಎಂದರು.
ಪಟ್ಟಣ ಪಂಚಾಯತ ಅಧ್ಯಕ್ಷ ವಿಜಯ ಕಾಮತ್ ಮಾತನಾಡಿ, ಯೋಜನೆ ಜಾರಿಯಾದರೆ ನಾವೆಲ್ಲಾ ಉಪ್ಪುನೀರು ಕುಡಿಯಬೇಕಾಗುತ್ತದೆ. ನಾವೆಲ್ಲಾ ಈ ಯೋಜನೆಗೆ ವಿರೋಧಿಸೋಣ ಎಂದರು. ಕೊನೆಯಲ್ಲಿ ಕೈ ಮೇಲಕ್ಕೆತ್ತುವ ಮೂಲಕ ಹಾಜರಿದ್ದ 13 ಸದಸ್ಯರು, 2 ನಾಮನಿರ್ದೇಶಿತ ಸದಸ್ಯರು ಯೋಜನೆಗೆ ವಿರೋಧ ವ್ಯಕ್ತಪಡಿಸಿದರು. ಅಜಾದ್ ಅಣ್ಣಿಗೇರಿಯವರು ಮಾತ್ರ ಕೈ ಎತ್ತದೆ ತಟಸ್ಥವಾಗಿದ್ದರು.
ನಂತರ ಗಣೇಶೋತ್ಸವ ಆಚರಣೆ ಸಮಯದಲ್ಲಿ ಪಟ್ಟಣದ ಸಾರ್ವಜನಿಕ ಗಣೇಶೊತ್ಸವ ಸಮಿತಿಗೆ ಸಮಸ್ಯೆ ಉಂಟಾಗದAತೆ ನೋಡಿಕೊಳ್ಳಬೇಕು. ವಿಸರ್ಜನಾ ಮೆರವಣೆಗೆ ಸಾಗುವ ಮಾರ್ಗದ ರಸ್ತೆ ದುರಸ್ತಿ ಬಗ್ಗೆ ಚರ್ಚೆ ನಡೆಯಿತು. ಬಿಡಾಡಿ ದನಗಳಿಂದ ಆಗುತ್ತಿರುವ ಅವಘಡ ಬಗ್ಗೆ ಚರ್ಚೆ ನಡೆದು ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮುಇಡಿಸುವಂತೆ ಒಪ್ಪಿಗೆ ಸೂಚಿಸಲಾಯಿತು. ಬೀದಿ ನಾಯಿಗಳ ಸಂತಾನಹರಣ ಚಿಕಿತ್ಸೆ ನೀಡಲು ಚರ್ಚೆ ನಡೆಯಿತು.
ಈ ವೇಳೆ ಪಟ್ಟಣ ಪಂಚಾಯತ ಉಪಾಧ್ಯಕ್ಷ ಸುರೇಶ ಹೊನ್ನಾವರ, ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಶ ಮೇಸ್ತ, ಸದಸ್ಯರು ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ


More Stories
ಶಿಕ್ಷಣ ಇಲಾಖೆ ತಂಡ ಚಾಂಪಿಯನ್
ಕಣ್ಣಿನ ಉಚಿತ ತಪಾಸಣಾ ಕಾರ್ಯಕ್ರಮ
ಕೆರೆಕೋಣದಲ್ಲಿ “ಪೂರ್ಣಚಂದ್ರ ತೇಜಸ್ವಿ – ಒಂದು ಮೆಲುಕು”