November 19, 2025

ರೋಟರಿ ಸಭಾಭವನದಲ್ಲಿ ತಾಲೂಕಿನ ರೋಟರಿ ಕ್ಲಬ್ ವತಿಯಿಂದ ಪತ್ರಿಕಾ ದಿನಾಚರಣೆ.

ಹೊನ್ನಾವರ: ಕಾರ್ಯಕ್ರಮವನ್ನು ಉದ್ದೇಶಿಸಿ ರೋಟರಿ ಕ್ಲಬ್ ಅಧ್ಯಕ್ಷ ಡಾ. ರಾಜು ಮಾಳಗಿಮನೆ ಮಾತನಾಡಿ ರೋಟರಿ ಕ್ಲಬ್ ಶೈಕ್ಷಣಿಕ, ಆರೋಗ್ಯ, ಕ್ರೀಡೆ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯ ಹಮ್ಮಿಕೊಳ್ಳುತ್ತಿದೆ. ನಾವು ಆಯೋಜಿಸುವ ಎಲ್ಲಾ ಕಾರ್ಯಕ್ರಮವನ್ನು ಜನರಿಗೆ ತಲುಪಿಸುವ ಕಾರ್ಯ ಪತ್ರಕರ್ತರು ಮಾಡುತ್ತಿದ್ದಾರೆ. ಪ್ರತಿವರ್ಷದಂತೆ ಎಲ್ಲಾ ಪತ್ರಕರ್ತರನ್ನು ಆಮಂತ್ರಿಸಿ ಅವರ ಸೇವೆ ಗುರುತಿಸುವ ಕಾರ್ಯ ರೋಟರಿ ಕ್ಲಬ್ ಮಾಡುತ್ತಾ ಬಂದಿದೆ ಎಂದರು.

ಹಿರಿಯ ಪತ್ರಕರ್ತರಾದ ಜಿ.ಯು.ಭಟ್ ಮಾತನಾಡಿ ಹಿರಿಯರು ಆರಂಭಿಸಿದ ರೋಟರಿ ಕ್ಲಬ್ ಇಂದಿಗೂ ಗೌರವ ಉಳಿಸಿಕೊಂಡಿದೆ. ಒಂದು ಸಂಸ್ಥೆ ಏನೆಲ್ಲಾ ಸಮಾಜಮುಖಿ ಕಾರ್ಯ ಮಾಡಬಹುದು ಎನ್ನುವುದಕ್ಕೆ ರೋಟರಿ ಮಾದರಿಯಾಗಿದೆ. ದೇಶದ ಎಲ್ಲಾ ರಂಗಗಳಲ್ಲಿ ಇಂದು ನೈತಿಕ ಶಕ್ತಿ ಕಡಿಮೆಯಾಗುತ್ತಿದೆ. ನೈತಿಕ ಪುನರುತ್ತಾನದ ಕಾರ್ಯವಾಗಬೇಕಿದೆ ಎಂದು ರೋಟರಿಯೊಂದಿಗಿನ ಒಡನಾಟವನ್ನು ಸ್ಮರಿಸಿದರು.

ತಾಲೂಕ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಸತೀತ ತಾಂಡೇಲ್ ಮಾತನಾಡಿ ಸಮಾಜಮುಖಿ ಅನೇಕ ಕಾರ್ಯದ ಮೂಲಕ ಜನಮನ್ನಣೆ ಪಡೆದಿರುವ ಹೊನ್ನಾವರ ರೋಟರಿ ಕ್ಲಬ್ ಪ್ರತಿ ವರ್ಷವು ಪತ್ರಿಕಾ ದಿನಾಚರಣೆಯ ಮೂಲಕ ಪತ್ರಕರ್ತರನ್ನು ಸನ್ಮಾನಿಸಿ ಗೌರವಿಸುವ ಕಾರ್ಯ ಮಾಡುತ್ತಿದೆ. ಪತ್ರಕರ್ತರು ಹಾಗೂ ರೊಟರಿ ಕ್ಲಬ್ ನಡುವೆ ಅವಿನಾಭಾವ ಸಂಭದವಿದೆ. ಸಮಾಜಮುಖಿ ಕಾರ್ಯದ ಮೂಲಕ ಒಳ್ಳೆಯ ಸಂದೇಶ ನೀಡುತ್ತಾ ಬಂದಿದ್ದಾರೆ ಎಂದು ಸೇವಾ ಕಾರ್ಯದ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಇವೆಂಟ್ ಚೇರಮನ್ ನಾರಾಯಣ ಯಾಜಿ ರೋಟರಿ ಕ್ಲಬ್ ಹಾಗೂ ಪತ್ರಿಕಾ ದಿನಾಚರಣೆಯ ಕುರಿತು ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಹೆನ್ರಿ ಲಿಮಾ, ಖಜಾಂಚಿ ಸುಹಾನ್ ಹೊರ್ಟಾ, ರೋಟರಿ ಸದಸ್ಯರು, ಪತ್ರಕರ್ತರು ಇದ್ದರು. ದಿನೇಶ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author

error: Content is protected !!