August 30, 2025

ಅಳ್ವೆಕೋಡಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರಮಹಾಲಕ್ಷೀ ವೃತ

ಭಟ್ಕಳ: ತಾಲೂಕಿನ ಅಳ್ವೆಕೋಡಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವರಮಹಾಲಕ್ಷಿö್ಮÃ ವೃತದ ಹಿನ್ನಲೆಯಲ್ಲಿ ಸಹಸ್ರಾರು ಸಂಖ್ಯೆಯ ಮುತ್ತೆöÊದೆಯಯರು ದೇವರಿಗೆ ಊಡಿ ಸಮರ್ಪಿಸಿ ಕೃತಾರ್ಥರಾದರು.
ತಾಲೂಕಿನ ಅಳ್ವೆಕೋಡಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸುಮಾರು 10ಸಾವಿರಕ್ಕೂ ಅಧಿಕ ಮುತೈದೆಯರನ್ನು ಪೂಜಿಸಿ ಅವರ ಒಡಲಲ್ಲಿ ಉಡಿ ಸಮಿರ್ಪಿಸಲಾಯಿತು. ದೇವಸ್ಥಾನದ ಆಡಳಿತ ಮಂಡಳಿಯೆ ಈ ಕಾರ್ಯಕ್ರಮದ ಉಸ್ತವಾರಿ ವಹಿಸಿಕೊಂಡಿತು. ಅಳಿವೆಕೋಡಿಯಲ್ಲಿ ಜಾತ್ರೆಯ ವಾತಾವರಣವೆ ನಿರ್ಮಾಣವಾಗಿದ್ದು ದೇವಿಯ ದರ್ಶನ ಪಡೆಯಲು ಕಿಲೋ ಮಿಟಿರ್ ಗಟ್ಟಲೆ ಉದ್ದದ ಸರತಿಯ ಸಾಲು ನಿರ್ಮಾಣವಾಗಿತ್ತು. ವರಮಹಾಲಕ್ಷಿö್ಮÃ ವೃತದ ಸಂದರ್ಬದಲ್ಲಿ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಏರಿಕೆ ಆಗುತ್ತಿದೆ. ಬೆಳಿಗ್ಗೆ 7 ಗಂಟೆಗೆ ಉಡಿ ತುಂಬುವ ಶಾಸ್ತç ಆರಂಭವಾಗಿದ್ದೂ ಸಂಜೆಯ ತನಕವೂ ನಿರಂತರವಾಗಿ ನಡೆದಿದೆ. ಅಧ್ಯಕ್ಷ ತಿಮ್ಮಪ್ಪ ಹೊನ್ನಿಮನೆ ನಾರಾಯಣ ದೈಮನೆ, ಹನುಮಂತ ನಾಯ್ಕ, ಮಾರಿ ಜಾತ್ರ ಸಮಿತಿ ಅಧ್ಯಕ್ಷ ರಾಮಾ ಮೊಗೇರ ಸೇರಿದಂತೆ ಚಾರಿಟೇಬಲ್ ಇತರ ಸದಸ್ಯರು ಇದ್ದರು. ಬಳಿಕ ನಡೆದ ಮಹಾ ಅನ್ನಸಂತರ್ಪಣೆ ಸೇವೆಯಲ್ಲಿ ಭಕ್ತರು ಪಾಲ್ಗೊಂಡು ಪ್ರಸಾದ ಭೋಜನ ಸೇವಿಸಿದರು.


ಶಿರಾಲಿಯಿಂದ ಅಳ್ವೆಕೋಡಿಗೆ ಬರಲು ದೇವಸ್ಥಾನದ ಆಡಳಿತ ಮಂಡಳಿ ಉಚಿತ ವಾಹನದ ವ್ಯವಸ್ಥೆಯನ್ನು ಕಲ್ಪಸಿದ್ದು ಭಕ್ತರು ಈ ಸೇವೆಯ ಅನುಕೂಲ ಪಡೆದರು. ಭಟ್ಕಳ ಪೊಲೀಸರು ದೇವಸ್ಥಾನಕ್ಕೆ ಬಂದ ಭಕ್ತರಿಗೆ ಅನಾನುಕೂಲ ಉಂಟಾಗದAತೆ ಬಿಗಿ ಬದ್ರತೆಯನ್ನು ನೀಡಿದರು.

About The Author