August 30, 2025

ವಿದ್ಯಾಭಾರತಿ ಶಾಲೆಯಲ್ಲಿ ಪದಗ್ರಹಣ ಸಮಾರಂಭ

ಭಟ್ಕಳ : ವಿದ್ಯಾಭಾರತಿ ಶಾಲೆಯಲ್ಲಿ ಪದಗ್ರಹಣ ಸಮಾರಂಭವನ್ನು ಶಾಲಾ ಸಭಾಭವನದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಅತಿಥಿಗಳಾಗಿ ಆಗಮಿಸಿದ ಭಟ್ಕಳ ಗ್ರಾಮೀಣ ಪೋಲೀಸ್ ಠಾಣೆಯ ಪೋಲೀಸ್ ನಿರೀಕ್ಷಕರಾದ ರನ್ನಗೌಡ ಪಾಟೀಲ್ ಹಾಗೂ ಗೌರವ ಅತಿಥಿಗಳಾದ ನಿವೃತ್ತ ಪಿ.ಎಸ್.ಐ ಅಣ್ಣಪ್ಪ ಮೊಗೇರ ರವರನ್ನು ಶಾಲಾ ವಾದ್ಯ ತಂಡ ಹಾಗೂ ಕವಾಯಿತಿನೊಂದಿಗೆ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ನೈಜ ಸಾರ್ವತ್ರಿಕ ಚುನಾವಣಾ ಮಾದರಿಯಲ್ಲಿ ಶಾಲಾಸಂಸತ್ತನ್ನು ಚುನಾಯಿಸಿ ಇಂದು ಪದಗ್ರಹಣ ಸಮಾರಂಭ ಆಯೋಜಿಸಿ ಮಕ್ಕಳಿಗೆ ಪದಗ್ರಹಣ ಮಾಡಲಾಯಿತು.
ಪೋಲೀಸ್ ನಿರೀಕ್ಷಕರಾದ ರನ್ನಗೌಡ ಪಾಟೀಲ್ ರವರು ಇಂದಿನ ವಿದ್ಯಾರ್ಥಿಗಳು ಶಿಸ್ತು, ಸಮಯ ಪ್ರಜ್ಞೆ ಜೀವನದಲ್ಲಿ ಅಳವಡಿಸಿಕೊಂಡರೆ ಪ್ರಜಾಪ್ರಭುತ್ವ ರಾಷ್ಟçವು ಅಭಿವೃದ್ದಿ ಹೊಂದಲು ಸಾಧ್ಯ ಎಂದು ತಿಳಿಸಿ ಹೇಳಿದರು. ವಿದ್ಯಾರ್ಥಿಗಳು ತಂದೆ ತಾಯಿಗಳಿಗೆ ಗೌರವ ನೀಡುವುದನ್ನು ಕಲಿಯಬೇಕು. ಅಂಕಗಳಿಗಿತ ಜೀವನ ಮೌಲ್ಯಗಳಿಗೆ ಹಾಗೂ ಕೌಶಲ್ಯಕ್ಕೆ ಹೆಚ್ಚಿನ ಮಹತ್ವ ನೀಡಿ ಎಂದು ಇನ್ನೋರ್ವ ಅತಿಥಿಗಳಾದ ಅಣ್ಣಪ್ಪ ಮೊಗೇರ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಮುಖ್ಯ ಶಿಕ್ಷಕಿ ಶ್ರೀಮತಿ ರೂಪಾ ರಮೇಶ ಖಾರ್ವಿ ಸ್ವಾಗತಿಸಿದರು ಹಾಗೂ ಮಕ್ಕಳಿಗೆ ಪ್ರಮಾಣವಚನ ಬೋಧಿಸಿದರು, ಮಕ್ಕಳು ರ‍್ಯಕ್ರಮ ನಿರ್ವಹಿಸಿದರು

About The Author