November 19, 2025

ಹೊನ್ಮಾವರ ತಾಲೂಕ ಆಡಳಿತದ ವತಿಯಿಂದ ಸ್ವಾಂತತ್ರ‍್ಯೊತ್ಸವ

ಹೊನ್ಮಾವರ : ತಾಲೂಕ ಆಡಳಿತದ ವತಿಯಿಂದ ಪಟ್ಟಣದ ಆಡಳಿತಸೌದದಲ್ಲಿ ಹಮ್ಮಿಕೊಂಡ ಸ್ವಾಂತತ್ರ‍್ಯೊತ್ಸವದಲ್ಲಿ ತಹಶೀಲ್ದಾರ ಪ್ರವೀಣ ಕರಾಂಡೆ ಧ್ವಜಾರೋಹನ ನೇರವೇರಿಸಿದರು.

ಜಿಲ್ಲೆಯಲ್ಲಿ ಪಾಕೃತಿಕ ಸೌಂದರ್ಯವಾದ ತಾಲೂಕು ಹೊನ್ನಾವರ ಆಗಿದ್ದು, ಧಾರ್ಮಿಕವಾಗಿ ಸಾಂಸ್ಕ್ರತಿಕವಾಗಿ ಶ್ರೀಮಂತವಾಗಿದೆ. ಅನೇಕ ಮಹಾಪುರುಷರ ಹೋರಾಟ, ಸತ್ಯಾಗ್ರಹ ಬಲಿದಾನದ ಮೂಲಕ ಸ್ವಾತಂತ್ರ‍್ಯ ಪಡೆದಿದೆ. ಜಾತಿ ಧರ್ಮ ಪಂಗಡ, ಭಾಷೆ ಹೆಸರಿನಲ್ಲಿ ಪರಸ್ಪರ ಕಚ್ಚಾಡದೇ, ರಾಷ್ಟ್ರೀಯ ಭಾವೈಕ್ಯತೆಯ ಗುಣ ಅಳವಡಿಸಿಕೊಳ್ಳಬೇಕು. ದೇಶದ ಸಮಸ್ಯೆಗಳನ್ನು ಬಗೆಹರಿಸಲು ಒಗ್ಗಟ್ಟಾಗಿ ರಾಷ್ರ‍್ಟಭಿಮಾನಿ ತೋರಬೇಕು. ವ್ಯಸನಿಗಳಿಗೆ ಬಲಿಯಾಗದೇ ರಾಷ್ಟ್ರದ ಸರ್ವಾಂಗೀಣ ಅಭಿವೃದ್ದಿಗೆ ನಾವೆಲ್ಲ ಬದ್ದರಾಗೋಣ ಎಂದು ಕರೆ ನೀಡಿದರು.

ಗ್ಯಾರಂಟಿ ಯೋಜನೆಯ ತಾಲೂಕ ಅಧ್ಯಕ್ಷ ಅಣ್ಣಪ್ಪ ನಾಯ್ಕ ಶುಭಾಶಯಕೋರಿದರು. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವತಿಯಿಂದ ಡಾ. ಎಪಿಜೆ ಅಬ್ದುಲ್ ಕಲಾಂ ಹೆಸರಿನಲ್ಲಿ ನೀಡುವ ತಲಾ ಹತ್ತು ಸಾವಿರ ಪೊತ್ಸಾಹಧನವನ್ನು ಇರ್ವರು ವಿದ್ಯಾರ್ಥಿಗಳಿಗೆ ಇದೆ ವೇಳೆ ನೀಡಿ ಪುರಸ್ಕರಿಸಲಾಯಿತು.

ವೇದಿಕೆಯಲ್ಲಿ ಪ.ಪಂ.ಅಧ್ಯಕ್ಷ ವಿಜಯ ಕಾಮತ್, ಉಪಾಧ್ಯಕ್ಷ ಸುರೇಶ ಹೊನ್ನಾವರ, ಗ್ರೇಡ್ 2 ತಹಶೀಲ್ದಾರ ಉಷಾ ಪಾವಸ್ಕರ್,ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಚೇತನಕುಮಾರ, ಪ.ಪಂ. ಮುಖ್ಯಾಧಿಕಾರಿ ಯೇಸು ಬೆಂಗಳೂರು, ಬಿ.ಇಓ ವಿನಾಯಕ ಅವಧಾನಿ, ಲಂಬಾನಿ, ಸಿಡಿಪಿಓ ವನಿತಾ ದೇಶಭಂಡಾರಿ,

ಮಹೇಶ ನಾಯ್ಕ, ಪಿ.ಐ.ಹೆಗಡೆ, ಜಿ.ಎನ್. ಗೌಡ, ಜಗದೀಪ ತೆಂಗೇರಿ, ಎ.ಎಸ್.ಐ ಗಿರೀಶ ಶೆಟ್ಟಿ, ಶಿಕ್ಷಕರು, ಶಾಲಾ ವಿದ್ಯಾರ್ಥಿಗಳು, ವಿವಿಧ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಜರು ಇದ್ದರು. ಯುವಜನಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು..
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

About The Author

error: Content is protected !!