August 30, 2025

ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಭಟ್ಕಳದಲ್ಲಿ ಪಂಜಿನ ಮೆರವಣಿಗೆ

ಭಟ್ಕಳ:ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ಹಿಂದೂ ಜಾಗರಣ ವೇದಿಕೆ ಭಟ್ಕಳ ಘಟಕದ ವತಿಯಿಂದ ಶನಿವಾರ ನಿಚ್ಚಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಾಲಯದಿಂದ ಬೃಹತ್ ಪಂಜಿನ ಮೆರವಣಿಗೆ ಜರುಗಿತು.

ಮೆರವಣಿಗೆಯನ್ನು ಕಡವಿನಕಟ್ಟೆ ದೇವಾಲಯದ ಪ್ರಧಾನ ಅರ್ಚಕ ಪ್ರಕಾಶ ಭಟ್ ಪೂಜೆಯೊಂದಿಗೆ ಉದ್ಘಾಟಿಸಿದರು. ದೇವಾಲಯದಿಂದ ಆರಂಭವಾದ ಮೆರವಣಿಗೆ ಮುಸ್ಬಾ ಸ್ಟ್ರೀಟ್, ಮಾರಿಗುಡಿ ಚನ್ನಪಟ್ಟಣ ಹನುಮಂತ ದೇವಾಲಯ, ಹೂವಿನ ಚೌಕ, ಪೇಟೆ ಮುಖ್ಯ ರಸ್ತೆ, ರಾಷ್ಟ್ರೀಯ ಹೆದ್ದಾರಿ-66, ಸಂಶುದ್ದೀನ್ ವೃತ್ತ ಹಾಗೂ ನಗರ ಪೊಲೀಸ್ ಠಾಣೆ ಮಾರ್ಗವಾಗಿ ಮತ್ತೆ ದೇವಾಲಯಕ್ಕೆ ಮರಳಿತು.

ನಂತರ ದೇವಾಲಯ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮಕ್ಕೆ ರವೀಂದ್ರ ಮಂಗಳ ಅಧ್ಯಕ್ಷತೆ ವಹಿಸಿದರು. ಶ್ರೀಕಾಂತ್ ಜೀ ವಕ್ತಾರರಾಗಿ ಮಾತನಾಡಿ ಅಖಂಡ ಭಾರತದ ಮಹತ್ವವನ್ನು ವಿವರಿಸಿದರು.

ಹಿಂದೂ ಜಾಗರಣ ವೇದಿಕೆ ಸಂಚಾಲಕರಾದ ಜಯಂತ ನಾಯ್ಕ, ಸಹಸಂಚಾಲಕರಾದ ನಾಗೇಶ ಹೊನ್ನೇಗದ್ದೆ, ಕುಮಾರ ಹನುಮಾನಗರ್, ರಾಘವೇಂದ್ರ ಮುಟ್ಟಳ್ಳಿ, ಮಾಜಿ ಶಾಸಕರಾದ ಸುನಿಲ್ ನಾಯ್ಕ, ಗೋವಿಂದ ನಾಯ್ಕ, ಶ್ರೀಕಾಂತ ನಾಯ್ಕ, ದಿನೇಶ್ ನಾಯ್ಕ ಮುಂಡಳ್ಳಿ, ಶ್ರೀನಿವಾಸ ನಾಯ್ಕ ಹನುಮಾನಗರ್ ಹಾಗೂ ಸಂಘ ಪರಿವಾರದ ಮುಖಂಡರು, ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

About The Author