
ಬೈಂದೂರು : 2025ರ ಮಂತ್ರಾಲಯ ಆರಾಧನಾ ಕಾರ್ಯಕ್ರಮವು ಆಗಸ್ಟ್ 10,11,12 ರಂದು ಲಕ್ಷಾಂತರ ಭಕ್ತಾದಿಗಳ ಸಂಗಮದಿAದ ಅದ್ದೂರಿಯಾಗಿ ಪರಿಸಮಾಪ್ತಿಯಾಗಿದ್ದು, ಈ 3ದಿನಗಳ ಕಾಲ ರಾಯರ ಶ್ರೀಮಠ ದಲ್ಲಿ ಬೈಂದೂರು ಭಟ್ಕಳ “ಸಿದ್ಧ ಸಮಾಧಿ ಯೋಗ’ದ ಸಾಧಕರಿಗೆ ಅಲ್ಲಿ ಸೇವೆ ಮಾಡಲು ಅವಕಾಶ ಸಿಕ್ಕಿದ್ದು ತುಂಬಾ ವಿಶೇಷವಾಗಿತ್ತು.
ಯೋಗ ಶಿಕ್ಷಕರಾದ ಆಚಾರ್ಯ ಶ್ರೀ ಕೇಶವಜೀ ಯವರ ನೇತೃತ್ವದಲ್ಲಿ ತ್ರಾಸಿ, ಮರವಂತೆ, ನಾವುಂದ, ನಾಗೂರು, ಕಂಬದಕೋಣೆ, ನಾಯ್ಕನಕಟ್ಟೆ, ಉಪ್ಪುಂದ ಬೀಜರು, ಬೈಂದೂರು, ಶಿರೂರು, ಭಟ್ಕಳ ದಿಂದ ಆಗಸ್ಟ್ 9ರಂದು ಸುಮಾರು 120ಕ್ಕೂ ಅಧಿಕ ಭಕ್ತರು 2ಬಸ್ ಮತ್ತು ಟೆಂಪೋ ಟ್ರಾವೆಲ್ ನಲ್ಲಿ ಹೊರಟಿದ್ದು 10ಮುಂಜಾನೆ 3ಗಂಟೆಗೆ ಮಂತ್ರಾಲಯ ತಲುಪಿದರು

ದಿನಾಂಕ 10 ಪುರ್ವಾರಾಧನೆ 11ರ ಮಧ್ಯಾರಾಧನೆ ಮತ್ತು 12ರ ಉತ್ತರಾರಾಧನೆ ಯಲ್ಲಿ ಎಲ್ಲಾ ಸ್ವಯಂ ಸೇವಕರು ಸಂಪೂರ್ಣವಾಗಿ ತಮ್ಮನ್ನ ತಾವು ಊಟ ಬಡಿಸುವುದು, ತರಕಾರಿ ಹೆಚ್ಚುವುದು, ಪರಿಮಳ ಪ್ರಸಾದ ಪ್ಯಾಕ್ ಮಾಡುವುದು, ಮಂತ್ರಾಲಯ ನಗರವನ್ನು ಸ್ವಚ್ಛ ಮಾಡುವುದು ಮತ್ತು ನಗರ ಸಂಕೀರ್ತನೆ ಯಲ್ಲಿ ತೊಡಗಿಸಿಕೊಂಡರು.

ಅನ್ನಪೂರ್ಣ ಛತ್ರದಲ್ಲಿ ಒಟ್ಟು 8 ಕೌಂಟರ್ ಮಾಡಿ ಅದರಲ್ಲಿ 3 ಮತ್ತು 4ನೇ ಕೌಂಟರ್ ಅನ್ನು ಬೈಂದೂರು ಭಾಗದ ಆಚಾರ್ಯ ಕೇಶವಜೀ ಟೀಮ್ ಗೆ ನೀಡಿದ್ದರಿಂದ 3ದಿನಗಳಕಾಲ ತುಂಬಾ ರಶ್ ಇದ್ದಿದ್ದರಿಂದ 7ಟೀಮ್ ಮಾಡಿ ಬೆಳಿಗ್ಗೆ 9:30ರಿಂದ ರಾತ್ರಿ 12ರ ತನಕ ಬಡಿಸುವ ಕಾರ್ಯದಲ್ಲಿ ಸ್ವಯಂ ಸೇವಕರು ಪುನೀತರಾದರು.

ಪರಮ ಪೂಜ್ಯ ಯೋಗಬ್ರಹ್ಮ ಶ್ರೀ ಋಷಿ ಪ್ರಭಾಕರ್ ಗುರೂಜಿ ಯವರ ತಪಸ್ಸಿನ ಫಲದಿಂದ ಅವರ ಶಿಷ್ಯರಾದ ಎಸ್‌ಎಸ್‌ವೈ ಸಾಕರಿಗೆ ಮಂತ್ರಾಲಯದಲ್ಲಿ ಆರಾಧನಾ ಸಮಯ ಸೇವೆಗೆ ಅವಕಾಶ ಸಿಕ್ಕಿದ್ದು ಪೂರ್ವ ಜನ್ಮದ ಪುಣ್ಯವೇ ಆಗಿದೆ.
2008ನೇ ಇಸ್ವಿ ಯಿಂದ ಕಳೆದ 18 ವರ್ಷದಿಂದ ಆಚಾರ್ಯ ಕೇಶವಜಿ ಯವರು ತಮ್ಮ ಸಾಧಕರನ್ನು ಕರೆದುಕೊಂಡು ಹೋಗಿ ಅಲ್ಲಿ ಸೇವೆ ಮಾಡಿ ಬರುತ್ತಿದ್ದಾರೆ.
ಕಾಯ ವಾಚ ಮನಸ್ಸಾ ಮಂತ್ರಾಲಯದಲ್ಲಿ ಸಂಪೂರ್ಣವಾಗಿ ತಮ್ಮನ್ನು ಸೇವೆಯಲ್ಲಿ ತೊಡಗಿಸಿಕೊಂಡ ಎಲ್ಲಾ ಸಾಧಕರಿಗೆ ಅಲ್ಲಿ ಸೇವೆಗೆ ಅವಕಾಶ ನೀಡಿದ ಮಂತ್ರಾಲಯ ಶ್ರೀ ಮಠಕ್ಕೂ ಪೂಜ್ಯ ಶ್ರೀಗಳಿಗೂ ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ ಬೆಂಗಳೂರು ಇದರ ಟ್ರಷ್ಟಿ ಗಳಿಗೂ ಮತ್ತು ಪೂಜ್ಯ ಋಷಿ ಪ್ರಭಾಕರ್ ಗುರೂಜಿಯವರಿಗೂ ತುಂಬು ಹೃದಯದ ಅಭಿನಂದನೆಗಳನ್ನು ಆಚಾರ್ಯರು ತಿಳಿಸಿರುತ್ತಾರೆ.
More Stories
ಶ್ರೀ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ವತಿಯಿಂದ ಜಮದಗ್ನಿ ಶೀನ ನಾಯ್ಕ್ ಅವರನ್ನು ಯಕ್ಷಗಾನ ಸೇವೆಗಾಗಿ ಸನ್ಮಾನ
ಶ್ರೀಮದ್ ಭುವನೇಂದ್ರ ಪ್ಫೌಢಶಾಲೆಯಲ್ಲಿ ಸಂಸ್ಥಾಪಕರ ದಿನಾಚರಣೆ
ಎಸ್ ವಿ ಟಿ : “ಮೌಲ್ಯ ಸಂಗಮ” ವರ್ಷದ ಸರಣಿ ಕಾರ್ಯಕ್ರಮಕೇವಲ ಪುಸ್ತಕ ಓದಿದ್ರೆ ಮಾತ್ರ ಸಾಧ್ಯವಾಗುವುದಿಲ್ಲ ಯೋಚನೆ ಮಾಡುವ ಶಕ್ತಿಬೇಕು : ಹೆಚ್ ರಾಜೇಶ್ ಪ್ರಸಾದ್