August 29, 2025

ರೈತರ ಮೇಲೆ ದೌರ್ಜನ್ಯ ಗ್ರಾಮಸ್ಥರಿಂದ ಪ್ರತಿಭಟನೆ

ಬಡ ರೈತರಿಗೆ ಸೇರಿಬೇಕಿದ್ದ ಜಮೀನಿನನ್ನು ಪ್ರಭಾವಿಯೊಬ್ಬರು ತಮ್ಮ ಹೆಸರಿಗೆ ಮಾಡಿಸಿಕೊಂಡು ರೈತರ ಮೇಲೆ ದೌರ್ಜನ್ಯ ನೆಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಪ್ರತಿಭಟನೆ ನೆಡೆಸಿದ್ರು

ಕೃಷ್ಣರಾಜಪೇಟೆ : ತಾಲ್ಲೂಕಿನ ಕಿಕ್ಕೇರಿ ಸಮೀಪದ ಮಾರ್ಗೋನಹಳ್ಳಿಗ್ರಾಮದ ಸರ್ವೇ ನಂಬರ್ 13 ರಲ್ಲಿ ಇದ್ದ 113 ಎಕ್ಕರೆ ಗೋಮಾಳದ ಜಾಗವನ್ನು ಮಂಡ್ಯ ಟೌನ್ ನಾ ಪ್ರಭಾರಿ ವ್ಯಕ್ತಿಯೊಬ್ಬರು ಸರ್ವೇ ನಂಬರ್ ಅನ್ನು 165 ಬದಲಿಸಿಕೊಂಡು 95 ಎಕ್ಕರೆ ಜಾಗವನ್ನು ತಮ್ಮ ಹೆಸರಿಗೆ ನೊಂದಾಯಿಸಿಕೊAಡಿದ್ದು, ಅಲ್ಲದೆ ಕೃಷಿ ಚಟುವಟಿಕೆಯಲ್ಲಿ ತೊಡಿಗಿರುವ ಬಡ ರೈತರ ಮೇಲೆ ದಬ್ಬಾಳಿಕೆ ತೋರುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮದ ಸರ್ವೇ ನಂಬರ್ 165ರ ಜಾಗದಲ್ಲೇ ಊಟ ತಯಾರಿಸಿ ಬೆಳಗ್ಗೆ ಹಿಂದ ಸಂಜೆಯವರೆಗೂ ಸ್ಥಳದಲ್ಲಿ ಗ್ರಾಮದ ನೂರಾರು ರೈತರು ಪ್ರತಿಭಟನೆ ನೆಡೆಸಿದ್ರು ವಿಷಯ ತಿಳಿದ ಕೃಷ್ಣರಾಜಪೇಟೆ ಟೌನ್ ಪೋಲೀಸ್ ಠಾಣೆಯ ಇನ್ಸ್ಪೆಕ್ಟರ್ ಸುಮರಾಣಿ, ಮತ್ತು ಕಿಕ್ಕೇರಿ ಪೋಲೀಸ್ ಠಾಣೆಯ ಇನ್ಸ್ಪೆಕ್ಟರ್ ರೇವತಿಯವರ ತಂಡ ಸ್ಥಳಕ್ಕೆ ಬೇಡಿ ನೀಡಿ ರೈತರ ಮನವೊಲಿಸಿ ಸೋಮವಾರದೊಂದು ರೈತರು ಮತ್ತು ಎದುರು ದಾರರನ್ನು ಕೆ ಆರ್ ಪೇಟೆ ತಾಹಸಿಲ್ದಾರ್ ರವರ ಬಳಿ ಕರೆಸಿ ಕ್ಷಮಾ ಕ್ಷಮಾ ಮಾತುಕತೆ ನಡೆಸಲು ಎಲ್ಲಾ ರೈತರು ಸಹಕಾರ ನೀಡುವಂತೆ ತಿಳಿಸಿದ್ರು ಇದಕ್ಕೆ ಒಪ್ಪಿಕೊಂಡ ರೈತರು ನಮ್ಮ ಗ್ರಾಮದ ಜಮೀನು ನಮ್ಮ ಗ್ರಾಮಕ್ಕೆ ಅಗತ್ಯ ಎಷ್ಟೋ ರೈತರು ಜೀವನಕ್ಕೂ ಜಮೀನು ಇಲ್ಲದೆ ಪರೆದಾಡುವಂತಾಗಿದ್ದು ನಮ್ಮಗೆ ಸೂಕ್ತ ನ್ಯಾಯ ಕೊಡಿಸುವಂತೆ ಮನವಿ ಮಾಡಿದ್ರು..

ಈ ಸಂಧರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜು, ಕೆಂಪರಾಜು, ಮುಖಂಡರಾದ ನಾಗರಾಜು, ಎಂಡಿ ಶಿವಣ್ಣ, ಗೋವಿಂದ, ಶಿವಣ್ಣ, ಮಲ್ಲೇಶ್, ತ್ರಿಪುರಾಜು, ಜಿಪ್ಪಿ, ಕುಂಟಯ್ಯ, ಜಯಣ್ಣ, ಸೇರಿದಂತೆ ನೂರಾರು ರೈತರು ಜಮಾಹಿಸಿದ್ರು..

ವರದಿ ಶಂಭು ಕಿಕ್ಕೇರಿ, ಕೃಷ್ಣರಾಜಪೇಟೆ

About The Author