
ಶುಕ್ರವಾರ ರಾತ್ರಿ ನಿಧನರಾದ ಜಾನಪದ ವಿದ್ವಾಂಸೆ ಡಾ. ಶಾಂತಿ ನಾಯಕ ಇವರ ನಿವಾಸದಲ್ಲಿ ತಾಲೂಕಿನ ಗಣ್ಯರು, ಸಾಹಿತಿಗಳು, ಸಾರ್ವಜನಿಕರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.
ಹೊನ್ನಾವರ: ಶನಿವಾರ ಮುಂಜಾನೆಯಿAದ ಬೆಳಿಗ್ಗೆ ಹನ್ನೊಂದವರೆಗೆ ಸಾರ್ವಜನಿಕರಿಗೆ ಪಾರ್ಥೀವ ಶರೀರದ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಮನೆಯ ಆವರಣದಲ್ಲಿ ಸಂತಾಪ ಸಭೆ ಜರುಗಿತು. ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಮಾತನಾಡಿ ಸಾಹಿತ್ಯ ಲೋಕದ ಮಿಂಚಾಗಿದ್ದ ಶಾಂತಿ ನಾಯಕ ನಮ್ಮನ್ನು ಅಗಲಿದ್ದಾರೆ. ಸಹಕಾರ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೊಡುಗೆ ನೀಡಿದ್ದಾರೆ. ಜಾನಪದ ವಿಶ್ವಕೋಶದಂತಿರುವ ಅವರು ತಮ್ಮ ಮನೆಯನ್ನು ಜಾನಪದ ವಿಶ್ವವಿದ್ಯಾಲಯದಂತೆ ರೂಪಿಸಿದ್ದಾರೆ ಎಂದು ಡಾ. ಶಾಂತಿ ನಾಯಕ ನಡೆದು ಬಂದ ಹಾದಿ, ಅವರ ಜೀವನ ಶೈಲಿ ಬಗ್ಗೆ ವಿವರಿಸಿ ಸಂತಾಪ ಸೂಚಿಸಿದರು. ಒಂದು ನಿಮಿಷಗಳ ಮೌನಾಚರಣೆಯ ಮೂಲಕ ಗೌರವ ಸಲ್ಲಿಸಲಾಯಿತು. ಮಹೇಶ ಭಂಡಾರಿ ಸ್ವಾಗತಿಸಿ ವಂದಿಸಿದರು.

ಕಸಾಪ ಜಿಲ್ಲಾಕಾರ್ಯದರ್ಶಿ ಪಿ.ಅರ್.ನಾಯ್ಕ, ತಾಲೂಕಾಧ್ಯಕ್ಷ ಎಸ್.ಎಚ್.ಗೌಡ, ಸಾಹಿತಿ ನಾಗರಾಜ ಹೆಗಡೆ ಅಪಗಾಲ, ಡಾ.ಇಸ್ಮಾಯಿಲ್ ತಲಕಣಿ, ಡಾ.ಎಸ್.ಡಿ.ಹೆಗಡೆ, ವೈದ್ಯ ಡಾ.ಆಶಿಕ್ ಹೆಗಡೆ, ವೈಶಾಲಿ ನಾಯ್ಕ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಯಮುನಾ ಗಾಂವ್ಕರ, ಕಾರ್ಮಿಕ ಮುಖಂಡ ತಿಲಕ ಗೌಡ, ತಿಮ್ಮಪ್ಪ ಗೌಡ, ನ್ಯಾಯವಾದಿ ವಿಕ್ರಂ ನಾಯ್ಕ, ಚೆನ್ನಕೇಶವ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎಲ್.ಎಂ.ಹೆಗಡೆ, ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ, ಉದ್ಯಮಿ ಜಿ.ಜಿ.ಶಂಕರ, ಸಾಧನಾ ಬರ್ಗಿ, ಮಂಜುನಾಥ ಗೌಡ ಮತ್ತಿತರರು ಭೇಟಿ ಮಾಡಿ ಪಾರ್ಥಿವ ದರ್ಶನ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.

ತಾಲೂಕಾ ಆಡಳಿತ ವತಿಯಿಂದ ಶಿರಸ್ತೆದಾರ ಕೃಷ್ಣ ಗೊಂಡ, ಕಂದಾಯ ನಿರೀಕ್ಷಕ ರಾಜು ನಾಯ್ಕ, ವಿ. ಎ. ಮಹೇಂದ್ರ ಗೌಡ ಗೌರವ ಸಲ್ಲಿಸಿ ಸಂತಾಪ ಸೂಚಿಸಿದರು.
ಅವರ ಇಚ್ಚೆಯಂತೆ ಕುಟುಂಬದವರು ಕಣ್ಣನ್ನು ರೇವಣಕರ್ ಆಸ್ಪತ್ರೆಗೆ, ದೇಹವನ್ನು ಕಾರವಾರದ ಮೆಡಿಕಲ್ ಕಾಲೇಜಿಗೆ ಹಸ್ತಾಂತರಿಸಿದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ
More Stories
‘ಅಯ್ಯಪ್ಪಸ್ವಾಮಿ ರೂಪದ ಗಣಪ’ ಹಾಗೂ ‘ಆಪರೇಷನ್ ಸಿಂಧೂರ್ ಥೀಮ್’
ಮುಟ್ಟಳಿ ಮೂಡಭಟ್ಕಳ ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿಯಿಂದ ವೆಂಕಟರಮಣ ನಾಯ್ಕರಿಗೆ ಸನ್ಮಾನ
ಕಾಳಜಿ ಕೇಂದ್ರಕ್ಕೆ ಬೇಟಿ ನೀಡಿದ ಕಾಂಗ್ರೇಸ್ ಮುಖಂಡರಾದ ಮಂಜುನಾಥ ನಾಯ್ಕ