
ಭಟ್ಕಳ: ಹನೀಫಾಬಾದ್ 1ನೇ ಕ್ರಾಸ್ನಿಂದ ಬಾಲಕಿಯೋರ್ವಳನ್ನು ಬಲವಂತವಾಗಿ ವಾಹನಕ್ಕೆ ಕೂರಿಸಿ ಪರಾರಿಯಾಗಲು ಯತ್ನಿಸಿದ ಪ್ರಕರಣದಲ್ಲಿ ಭಟ್ಕಳ ಗ್ರಾಮೀಣ ಪೊಲೀಸರು ತ್ವರಿತ ಕಾರ್ಯಾಚರಣೆಗೆ ಇಳಿದು ಆರೋಪಿ ಇಬ್ಬರನ್ನು ಬಲೆ ಬೀಸಿ ವಶಕ್ಕೆ ಪಡೆದಿದ್ದಾರೆ.

ಅಪಹರಣಕ್ಕೆ ಮುಂದಾದವರು ಹಾವೇರಿ ಜಿಲ್ಲೆಯ ಶಿವಪುರದ ಆಸೀಫ್ ಜಮಾಲಸಾಬ್ ಹಾಗೂ ಭಟ್ಕಳದ ಜಾಲಿ ತಗ್ಗರಗೋಡ ನಿವಾಸಿ ಮೊಹ್ಮದ್ ಮೋಸಿನ್ ಮೊಹ್ಮದ್ ರಿಜ್ವಾನ್ ಎಂದು ಪೊಲೀಸರು ಗುರುತಿಸಿದ್ದಾರೆ. ಬುಲೆರೋ ಪಿಕ್ ಅಪ್ ವಾಹನದಲ್ಲಿ ಬಾಲಕಿಯನ್ನು ಕೊಂಡೊಯ್ಯಲು ಯತ್ನಿಸಿದ ಆರೋಪಿಗಳ ವಿರುದ್ಧ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು.
ಸಿಪಿಐ ಮಂಜುನಾಥ ಲಿಂಗಾರೆಡ್ಡಿ ಅವರ ಮಾರ್ಗದರ್ಶನದಲ್ಲಿ ಎಎಸ್ಐ ನಾರಾಯಣ, ಹೆಡ್ ಕಾನ್ಸ್ಟೇಬಲ್ ನಾರಾಯಣ ಮತ್ತು ಸಿಬ್ಬಂದಿ ಅಕ್ಷಯಕುಮಾರ ಅವರನ್ನು ಒಳಗೊಂಡ ತಂಡ ಕೇವಲ ಆರು ಗಂಟೆಯೊಳಗೆ ಆರೋಪಿಗಳನ್ನು ಮಾವಿನಗುಂಡಿ ಬಳಿ ಪತ್ತೆಹಚ್ಚಿ ಬಾಲಕಿಯನ್ನು ಸುರಕ್ಷಿತವಾಗಿ ಪಾಲಕರಿಗೆ ಒಪ್ಪಿಸಿದೆ.
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಎಸ್ಪಿ ದಿಲೀಪನ್, ಗ್ರಾಮೀಣ ಠಾಣಾ ಪೊಲೀಸರ ಕಾರ್ಯಾಚರಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಕರಣ ಗ್ರಾಮೀಣ ಠಾಣೆಯಲ್ಲಿ ದಾಖಲಾಗಿದೆ.
More Stories
‘ಅಯ್ಯಪ್ಪಸ್ವಾಮಿ ರೂಪದ ಗಣಪ’ ಹಾಗೂ ‘ಆಪರೇಷನ್ ಸಿಂಧೂರ್ ಥೀಮ್’
ಮುಟ್ಟಳಿ ಮೂಡಭಟ್ಕಳ ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿಯಿಂದ ವೆಂಕಟರಮಣ ನಾಯ್ಕರಿಗೆ ಸನ್ಮಾನ
ಕಾಳಜಿ ಕೇಂದ್ರಕ್ಕೆ ಬೇಟಿ ನೀಡಿದ ಕಾಂಗ್ರೇಸ್ ಮುಖಂಡರಾದ ಮಂಜುನಾಥ ನಾಯ್ಕ