
ಸಾಧಕ ವಿದ್ಯಾರ್ಥಿಗಳಿಗೆ ರೂ. 28,000 ಬಹುಮಾನ ಪ್ರದಾನ
ಸಂಸ್ಕೃತ ಕಲಿಕಾರ್ಥಿಗಳಿಗೆ ವಾಟರ್ ಬಾಟಲ್ ವಿತರಣೆ
ವಿಶ್ರಾಂತ ಡಿ.ಡಿ.ಪಿ. ಆಯ್. ನಾಗರಾಜ ನಾಯಕರಿಗೆ “ಸಜ್ಜನ ಸಿಂಧು” ಉಪಾದಿಯೊಂದಿಗೆ ಗೌರವಾರ್ಪಣೆ
ಕುಮಟಾ : ತಾಲ್ಲೂಕಿನ ಬರ್ಗಿಯ ಸರ್ಕಾರಿ ಪ್ರೌಢ ಶಾಲೆಯ ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ಸಂಸ್ಕೃತದ ಕಲಿಕಾರ್ಥಿಗಳಿಗೆ ಸ್ಥಳೀಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠ ಮತ್ತು ಹಳೆಯ ವಿದ್ಯಾರ್ಥಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ಸಂಸ್ಕೃತ ಅಧ್ಯಾಪಕರಾದ ಮಂಜುನಾಥ ಗಾಂವ್ಕರ್ ಬರ್ಗಿಯವರ ಸಂಯೋಜನೆಯಲ್ಲಿ “ಪ್ರತಿಭಾ ಪುರಸ್ಕಾರ ಸಮಾರಂಭ”ವನ್ನು ಆಯೋಜಿಸಲಾಗಿತ್ತು.
2024 – 25 ನೇ ಶೈಕ್ಷಣಿಕ ಸಾಲಿನಲ್ಲಿ 8 ತರಗತಿಯಲ್ಲಿ ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದ ನಂದನ ನಾರಾಯಣ ನಾಯಕ, ಕಾರ್ತಿಕ ವಸಂತ ಗಾವಡಿ ಹಾಗೂ ಸ್ಪಂದನಾ ನಾಗೇಶ ಗಾವಡಿ, 9ನೇ ತರಗತಿಯಲ್ಲಿ ಕ್ರಮವಾಗಿ ಮೊದಲ ಮೂರು ಸ್ಥಾನಗಳನ್ನು ಪಡೆದ ಸಿಂಚನಾ ಶಿವಾನಂದ ಪಟಗಾರ,ನವ್ಯಾ ನಾಗರಾಜ ಹರಿಕಂತ್ರ ಹಾಗೂ ಸಿಂಚನಾ ಗಣಪತಿ ಪಟಗಾರ, ಎಸ್.ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಮೊದಲ 10 ಸ್ಥಾನಗಳನ್ನು ಪಡೆದ ಆಕಾಶ ಉದಯ ಹರಿಕಂತ್ರ, ನಿತೇಶ ಸದಾನಂದ ಪಟಗಾರ, ನಾಗಶ್ರೀ ನಾಗೇಶ ಹರಿಕಂತ್ರ, ಎನ್. ನಾಗಲಕ್ಷ್ಮೀ, ಸಂಜನಾ ಮಂಜುನಾಥ ಹರಿಕಂತ್ರ, ನವ್ಯಾ ಸುರೇಶ ಗಾವಡಿ, ಸಿಂಚನಾ ನಾಗೇಶ ಗಾವಡಿ, ಅಶ್ವಿನಿ ವಿನಾಯಕ ಹರಿಕಂತ್ರ, ಧನ್ಯಶ್ರೀ ಜಯರಾಮ ಪಟಗಾರ ಹಾಗೂ ನವ್ಯ ಬಾಬಾನಂದ ಹರಿಕಂತ್ರರವರಿಗೆ ನಗದು ಬಹುಮಾನ, ಶಾಲು, ಫಲಕ ಮತ್ತು ಪ್ರಶಸ್ತಿ ಪತ್ರದೊಂದಿಗೆ ಪುರಸ್ಕರಿಸಲಾಯಿತು.
ಇದೆ ಸಂದರ್ಭದಲ್ಲಿ ಎಸ್. ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಸಂಸ್ಕೃತ ವಿಷಯದಲ್ಲಿ ಗರಿಷ್ಠ ಅಂಕಗಳನ್ನು ಪಡೆದು ಕಾಲೇಜಿನಲ್ಲಿ ವಿಜ್ಞಾನ ವಿದ್ಯಾರ್ಥಿಯಾಗಿ ಸಂಸ್ಕೃತ ಕಲಿಕೆಯನ್ನು ಮುಂದುವರಿಸಿರುವ ನಾಗಶ್ರೀ ನಾಗೇಶ ಹರಿಕಂತ್ರ ಹಾಗೂ ನವ್ಯಾ ಸುರೇಶ ಗಾವಡಿಯವರಿಗೆ ನಗದು ಬಹುಮಾನವನ್ನು, ಹೊಸದಾಗಿ ಸಂಸ್ಕೃತವನ್ನು ಕಲಿಯಲು ದಾಖಲಾಗಿರುವ ವಿದ್ಯಾರ್ಥಿಗಳಾದ ಪ್ರಜ್ವಲ ಹೊನ್ನಪ್ಪ ಹರಿಕಂತ್ರ ಶಿವರಾಜ ಗಾಂವಕರ್,ಗಗನ, ಚರಣ, ನವ್ಯಾ ಪಟಗಾರ, ಸುಮುಖ, ಸನ್ಮಿತಾ,ಹರ್ಷ, ಗೌತಮಿ, ಮಲ್ಲಿಕಾ ಹಳ್ಳೇರ ಮತ್ತು ಸಂಕೇತರವರಿಗೆ ಬಾಳಿಕೆಯ ಗುಣಮಟ್ಟದ ವಾಟರ್ ಬಾಟಲ್ ಗಳನ್ನು ನೀಡಲಾಯಿತು.
ಸಮಾರಂಭಕ್ಕೆ ಅಭ್ಯಾಗತರಾಗಿ ಆಗಮಿಸಿದ ಶಾಲಾ ಶಿಕ್ಷಣ ಇಲಾಖೆಯ ವಿಶ್ರಾಂತ ಉಪನಿರ್ದೇಶಕರಾದ ನಾಗರಾಜ ಬೀರಣ್ಣ ನಾಯಕರವರಿಗೆ ” ಸಜ್ಜನ ಸಿಂಧು ” ಉಪಾದಿಯೊಂದಿಗೆ ಸನ್ಮಾನಿಸಲಾಯಿತು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಕೃತ ಅಧ್ಯಾಪಕರಾದ ಮಂಜುನಾಥ ಗಾಂವಕರ್ ಬರ್ಗಿಯವರು, ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್. ಎಸ್.ಎಲ್. ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ 5 ಮತ್ತು 9 ನೇ ರ್ಯಾಂಕಿನೊAದಿಗೆ ಜಿಲ್ಲೆಗೆ ಕನ್ನಡ ಮಾಧ್ಯಮದಲ್ಲಿ ಪ್ರಥಮ ಸ್ಥಾನದಲ್ಲಿದ್ದು, ನೂರಕ್ಕೆ ನೂರರಷ್ಟು ಫಲಿತಾಂಶಕ್ಕೆ ಬರ್ಗಿಯ ಸರ್ಕಾರಿ ಪ್ರೌಢ ಶಾಲೆಯು ಭಾಜನವಾಗಿರುವುದು ಹೆಮ್ಮೆಯ ವಿಷಯವಾಗಿದ್ದು, ಸಾಧಕ ವಿದ್ಯಾರ್ಥಿಗಳನ್ನು ಗೌರವಿಸುವಲ್ಲಿ ಉದಾರ ಹಸ್ತವನ್ನು ಚೆಲ್ಲಿ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠಕ್ಕೆ ಗಜಗಟ್ಟಿ ಬಲವಾಗಿ ನಿಂತು ಬೆಂಬಲಿಸಿದ ಸ್ಥಳೀಯ ದಾನಿಗಳಾದ ಅನಂತರಾಜ ಹಂದೆ, ಅಂಕೋಲಾದ ನವ ಕರ್ನಾಟಕ ಸಂಘ ಮತ್ತು ಶ್ರೀರಾಮ್ ಸ್ಟಡಿ ಸರ್ಕಲ್ ನ ಬಾಪು ಸದ್ಭಾವನಾ ಪುರಸ್ಕಾರ ಪುರಸ್ಕೃತ ವಿಶ್ರಾಂತ ಶಿಕ್ಷಕರಾದ ನಾಡುಮಾಸ್ಕೇರಿ ವಿ.ಡಿ.ನಾಯಕ ವಂದಿಗೆ, ಬರ್ಗಿ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ನಾಗರಾಜ ಕೃಷ್ಣ ನಾಯ್ಕ, ಬರ್ಗಿ ಊರಿನ ಮುಖಂಡ ನಾರಾಯಣ ನಾಗು ನಾಯಕ ಹಾಗೂ ಕುಮಟಾ ತಾಲ್ಲೂಕಾ ಪಂಚಾಯತ್‌ದ ಮಾಜಿ ಅಧ್ಯಕ್ಷರಾದ ವಿಜಯಾ ರಾಮ ಪಟಗಾರರವರನ್ನು ಮನದುಂಬಿ ಶ್ಲಾಘಿಸಿದರು.
ಅಭ್ಯಾಗತರ ಮಾತಿನಲ್ಲಿ ವಿಶ್ರಾಂತ ಉಪನಿರ್ದೇಶಕರಾದ ನಾಗರಾಜ ನಾಯಕ ರವರು ಗ್ರಾಮೀಣ ಪ್ರದೇಶವಾದ ಬರ್ಗಿಯಲ್ಲಿನ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳು ಗುಣಾತ್ಮಕವಾದ ಸಾಧನೆಯನ್ನು ತೋರುವಲ್ಲಿ ಅವರಿಗೆ ಮಾರ್ಗದರ್ಶನವನ್ನು ನೀಡಿದ ಅಧ್ಯಾಪಕ ವೃಂದಕ್ಕೆ ವಿಶೇಷವಾದ ಕೃತಜ್ಞತೆಯನ್ನು ಸಲ್ಲಿಸಿ,ಸಾಧಕನ್ನು ಅಭಿನಂದಿಸಿದ ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠ ಹಾಗೂ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯವನ್ನು ಮುಕ್ತಕಂಠದಿAದ ಪ್ರಶಂಶಿಸಿದರಲ್ಲದೇ, ಜಗತ್ತಿನ ಎಲ್ಲಾ ಭಾಷೆಗಳ ತಾಯಿಯಾದ ಸಂಸ್ಕೃತ ಭಾಷೆಯಲ್ಲಿದ್ದಷ್ಟು ಸಮೃದ್ಧವಾದ ಸಾಹಿತ್ಯವು ಯಾವ ಭಾಷೆಯಲ್ಲಿಯೂ ಇಲ್ಲವಾಗಿದ್ದೆಂದ ಅವರು, ತಾನೂ ಪ್ರೌಢ,ಪದವಿಪೂರ್ವ ಮತ್ತು ಕಾಲೇಜು ಹಂತದಲ್ಲಿಯೂ ಸಂಸ್ಕೃತವನ್ನು ಕಲಿತಿರುವುದನ್ನು ಮತ್ತು ಪಾಠ ಮಾಡಿರುವುದನ್ನು ಸ್ಮರಿಸಿ, ಸಂಸ್ಕೃತವನ್ನು ಕಲಿತು ಸಂಸ್ಕಾರವAತರಾಗಲು ಕರೆಗೊಟ್ಟರು.
ಬರ್ಗಿ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಕಾರ್ಯಕ್ರಮದ ಪ್ರಾಯೋಜಕರಲ್ಲಿ ಒಬ್ಬರಾದ ನಾಗರಾಜ ಕೃಷ್ಣ ನಾಯ್ಕರವರು ಮಾತನಾಡುತ್ತಾ- ಶೈಕ್ಷಣಿಕ ಹಾಗೂ ಸಮಾಜಮುಖಿಯಾದ ಒಳ್ಳೆಯ ಕಾರ್ಯಕ್ಕೆ ಯಾವಾಗಲೂ ತಮ್ಮ ಬೆಂಬಲವಿದೆಯೆAದರು. ಶಾಲಾ ಮುಖ್ಯಾಧ್ಯಾಪಕರಾದ ಮಧುಕೇಶ್ವರ ನಾಯ್ಕರವರು ಅಧ್ಯಕ್ಷೀಯ ನುಡಿ ಗಳನ್ನಾಡಿದರು.
625 ಅಂಕಗಳಿಗೆ 621 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 5ನೇ ಸ್ಥಾನವನ್ನು, ಜಿಲ್ಲೆಗೆ ಕನ್ನಡ ಮಾಧ್ಯಮದಲ್ಲಿ ಪ್ರಥಮ ಸ್ಥಾನವನ್ನು ಪಡೆದ ತನ್ನನ್ನು ಸಾಧಕರೊಂದಿಗೆ ಗೌರವಿಸಿರುವ ಬರ್ಗಿಯ ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠಕ್ಕೆ ತಾನೆಂದು ಋಣಿಯಾಗಿದ್ದೇನೆ ಎಂದು ಆಕಾಶ ಹರಿಕಂತ್ರ ಹೇಳಿದರು.
ಪುರಸ್ಕಾರಕ್ಕೆ ಭಾಜನರಾದ ಇನ್ನೋರ್ವ ವಿದ್ಯಾರ್ಥಿನಿ ನವ್ಯಾ ಗಾವಡಿಯವರು ಮಾತನ್ನಾಡಿ, ಬರ್ಗಿ ಪ್ರೌಢ ಶಾಲೆಯಲ್ಲಿ ತಾನು ಸಂಸ್ಕೃತವನ್ನು ಕಲಿತು ಕಾಲೇಜಿನಲ್ಲಿಯೂ ಸಂಸ್ಕೃತ ಕಲಿಕೆಯನ್ನು ಮುಂದುವರಿಸಿರುವುದಕ್ಕೆ ಅಭಿಮಾನಿವೆನಿಸುತ್ತಿದ್ದು, ವಿದ್ಯಾರ್ಥಿಗಳ ಕುರಿತಂತೆ ಅಪಾರವಾದ ಒಲವನ್ನು ಹೊಂದಿ ಪುರಸ್ಕರಿಸಿರುವುದು ಸಂತಸವಾಗಿದೆ ಎಂದರು.
ಕಾರವಾರದ ಮುದುಗಾದ ಜನತಾ ವಿದ್ಯಾಲಯದ ವಿಶ್ರಾಂತ ಮುಖ್ಯಾಧ್ಯಾಪಕರಾದ ಆರ್. ಬಿ. ಪಟಗಾರ, ಆರ್.ಎಂ.ಕುಬೇರಪ್ಪ ಅಭಿಮಾನಿ ಬಳಗದ ಉತ್ತರ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಬರ್ಗಿ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ರಮೇಶ ಜಯರಾಮ ನಾಯ್ಕ ಕಣ್ಮಣಿ ಹಾಗೂ ಧುರೀಣ ನಾರಾಯಣ ನಾಗು ನಾಯಕ ಮೊದಲಾದವರಿದ್ದರು.
ಬರ್ಗಿ ಪ್ರೌಢ ಶಾಲೆಯಲ್ಲಿ ಸಂಸ್ಕೃತಪರ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಿರುವ ಮೂಲಕ ಊರ ಪ್ರೌಢ ಶಾಲೆಯ ಹೆಸರನ್ನು ನಾಡು ಗುರುತಿಸುವಂತಾಗಲು ಸಂಸ್ಕೃತ ಅಧ್ಯಾಪಕರಾದ ಮಂಜುನಾಥ ಗಾಂವಕರ್ ಬರ್ಗಿಯವರೊಂದಿಗೆ, ಜಾತ್ಯತೀತವಾಗಿ ಬಡ – ಪ್ರತಿಭಾವಂತ ವಿದ್ಯಾರ್ಥಿಗಳನ್ನು ಬೆಂಬಲಿಸುವುದಕ್ಕೆ ಬದ್ಧನಾಗಿದ್ದು, ಇದು ಇತರರಿಗೆ ಸ್ಪೂರ್ತಿಯಾದಲ್ಲಿ ಧನ್ಯತೆಯ ವಿಷಯ.
- ಅನಂತರಾಜ ಹಂದೆ, ವಿದ್ಯಾಭಿಮಾನಿಗಳು, ಬರ್ಗಿ. ತಾನು ಪಾಠ ಮಾಡುತ್ತಿರುವ ಊರ ಪ್ರೌಢ ಶಾಲೆಯ ಬಡ ಹಿಂದುಳಿದ ಸಮಾಜದ ವಿದ್ಯಾರ್ಥಿಗಳ ಕುರಿತಂತೆ ಮತ್ತು ತನ್ನ ಬೋಧನೆಯ ಸಂಸ್ಕೃತ ವಿಷಯದ ಕುರಿತಂತೆ ಮಂಜುನಾಥ ಬರ್ಗಿಯವರಿಗಿರುವ ಕಳಕಳಿಯು ಪ್ರಶಂಸನೀಯವಾಗಿದ್ದು, ಇತರರಿಗೆ ಮಾದರಿಯಾಗಿದೆ.
- ನಾಡುಮಾಸ್ಕೇರಿ ವಿ.ಡಿ. ನಾಯಕ, ವಿಶ್ರಾಂತ ಶಿಕ್ಷಕರು ವಂದಿಗೆ. ಬರ್ಗಿ
- ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪೂರಕವಾಗಿ ಗುಣಾತ್ಮಕವಾದ ಕಾರ್ಯಕ್ರಮಗಳನ್ನು ಶ್ರೀ ಮಹಾಲಿಂಗೇಶ್ವರ ವಿದ್ಯಾಪೀಠದಿಂದ ಸಾರ್ವಜನಿಕರ ಬೆಂಬಲದೊAದಿಗೆ ಊರಿನವರಾದ ಮಂಜುನಾಥ ಗಾಂವಕರ್ ಬರ್ಗಿಯವರ ನೇತೃತ್ವದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಆಯೋಜಿಸಲ್ಪಡುತ್ತಿರುವುದು ಅಭಿಮಾನದ ವಿಷಯ. ಪುರಸ್ಕೃತ ಸಾಧಕ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ಒಳ್ಳೆಯ ಕಾರ್ಯಕ್ಕೆ ಎಂದೆAದೂ ಸಹಕರಿಸಲು ಬದ್ಧ.
- ವಿಜಯಾ ರಾಮ ಪಟಗಾರ, ನಿಕಟಪೂರ್ವ ತಾ.ಪಂ. ಅಧ್ಯಕ್ಷರು,ಕುಮಟಾ.
More Stories
‘ಅಯ್ಯಪ್ಪಸ್ವಾಮಿ ರೂಪದ ಗಣಪ’ ಹಾಗೂ ‘ಆಪರೇಷನ್ ಸಿಂಧೂರ್ ಥೀಮ್’
ಮುಟ್ಟಳಿ ಮೂಡಭಟ್ಕಳ ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿಯಿಂದ ವೆಂಕಟರಮಣ ನಾಯ್ಕರಿಗೆ ಸನ್ಮಾನ
ಕಾಳಜಿ ಕೇಂದ್ರಕ್ಕೆ ಬೇಟಿ ನೀಡಿದ ಕಾಂಗ್ರೇಸ್ ಮುಖಂಡರಾದ ಮಂಜುನಾಥ ನಾಯ್ಕ