August 30, 2025

ಭಗವಂತನ ಸ್ಮರಣೆಯಿಂದ ಬದುಕು ಸಾರ್ಥಕ; ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್

ಕುಮಟಾ: `ಬದುಕೆಂಬ ಸಂಸಾರ ನಡೆಸುವಾಗ ಭಗವಂತ ಇದ್ದಾನೆಂಬ ಶ್ರದ್ಧಾ ಭಕ್ತಿ ಮತ್ತು ನಿರಾಳವಾಗಿ ಭಗವಂತನನ್ನು ಸ್ಮರಿಸಿದಾಗ ಮಾತ್ರ ಭಗವದ್ ಸಾಕ್ಷಾತ್ಕಾರವಾಗುತ್ತದೆ’ ಎಂದು ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ್ ನುಡಿದರು.

 ತಾಲೂಕಿನ ಕೋನಳ್ಳಿಯ ಶ್ರೀ ವನದುರ್ಗಾ ದೇವಾಲಯದಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯ ವ್ರತಾಚರಣೆಯ 40ನೇ ದಿನದ ಕಾರ್ಯಕ್ರಮದಲ್ಲಿ ಕೂಜಳ್ಳಿ ಗ್ರಾ.ಪಂ ಹಾಗೂ ಕೋನಳ್ಳಿ ಭಾಗದಿಂದ ನಡೆದ ಗುರು ಸೇವಾ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಭಗವಂತನ ನಾಮ ಸ್ಮರಣೆಯಲ್ಲಿ ಹಿಂದೆ ಬಿದ್ದಿದ್ದೇವೆ. ತ್ಯಾಗದಿಂದ ಕೆಲಸ ಮಾಡುವಾಗ ಭಗವಂತನ ಪೂರ್ಣ ಅನುಗ್ರಹ ಸಿಗುತ್ತದೆ. ಆ ನಿಟ್ಟಿನಲ್ಲಿ ಚಾತುರ್ಮಾಸ್ಯ ವ್ಯವಸ್ಥೆಯನ್ನು ಎಲ್ಲ ಶಿಷ್ಯ ವರ್ಗ ಬಹಳ ಸುಂದರವಾಗಿ, ಅಚ್ಚುಕಟ್ಟಾಗಿ ನಿರ್ವಹಿಸಿದೆ. ಬಹಳ ಪರಿಶ್ರಮವೂ ಇದರಲ್ಲಿ ಅಡಗಿದೆ. ದಿನಂಪ್ರತಿ ಎಲ್ಲಾ ಗ್ರಾಮಸ್ಥರು ಬಂದು ತಮ್ಮ ತನು-ಮನ ಧನದಿಂದ ಸಮರ್ಪಣೆ ಮಾಡಿದ್ದಾರೆ. ನಾಮಧಾರಿ ಸಮಾಜ ಇಡೀ ಜಿಲ್ಲೆಗೆ ಕೀರ್ತಿ ತರುವ ಮೂಲಕ ಚಾತುರ್ಮಾಸ್ಯ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನವಾಗಿದೆ ಎಂದರೆ ತಪ್ಪಾಗಲಾರದು. ಎಲ್ಲಾ ಜಾತಿ-ಜನಾಂಗವನ್ನು ಸಹೋದರತೆಯಿಂದ ಕಂಡಿದೆ. ಈ ವ್ಯವಸ್ಥೆಯನ್ನು ನಿರ್ಮಿಸಿದ ಎಲ್ಲ ನನ್ನ ಸದ್ಭಕ್ತರಿಗೆ ಎಲ್ಲ ಭಾಗ್ಯವನ್ನು ದಯಪಾಲಿಸಲಿ ಎಂದು ಆಶೀರ್ವದಿಸಿದರು. 

ವೆಂಕಟೇಶ್ವರ ನಾಮಧಾರಿ ಕ್ಷೇಮಾಭಿವೃದ್ಧಿ ಸಂಘ ಕೂಜಳ್ಳಿ, ವೆಂಕಟೇಶ್ವರ ನಾಮಧಾರಿ ಕ್ಷೇಮಾಭಿವೃದ್ಧಿ ಸಂಘ ಸಮಸ್ತ ನಾಮಧಾರಿ ಸಂಘ ಕೂಜಳ್ಳಿ, ವೆಂಕಟೇಶ್ವರ ನಾಮಧಾರಿ ಕ್ಷೇಮಾಭಿವೃದ್ಧಿ ಸಂಘ ಸಮಸ್ತ ಸಂಘ ಭಾಂದವರು ಕೂಜಳ್ಳಿ, ಸಮಸ್ತ ಊರ ನಾಗರಿಕರು ಕೋನಳ್ಳಿ, ಕೋನಳ್ಳಿ ಗ್ರಾಮದ ಮಹಿಳೆಯರು, ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿ ಸದಸ್ಯರು ಜಾಲಿ, ಬ್ರಹ್ಮಶ್ರೀ ಶ್ರೀ ನಾರಾಯಣ ಗುರು ಬಿಲ್ಲವ ಸಂಘ ಸಾಗರ ಇವರು ಗುರುಪಾದುಕಾ ಪೂಜೆ ಸಲ್ಲಿಸಿದರು. 

ಯತೀರಾಜ್ ಕೆ ನಾಯ್ಕ್ ಕುಮಟಾ ಇವರು ವಿಶೇಷ ಸೇವೆ ಸಲ್ಲಿಸಿದರು. ಈಶ್ವರ್ ಕೃಷ್ಣಪ್ಪ ನಾಯ್ಕ್ ಮತ್ತು ಸಹೋದರರು ಶೀಗಳ್ಳಿಮನೆ ಕೋನಳ್ಳಿ, ಉಪೇಂದ್ರ ಶಂಕು ನಾಯ್ಕ್ ಮತ್ತು ನಿಂಗಪ್ಪ ಶಂಕು ನಾಯ್ಕ್ ಮತ್ತು ಕುಟುಂಬದವರು ಕೋನಳ್ಳಿ, ರಾಜು ಮಂಜಪ್ಪ ನಾಯ್ಕ್ ಕೆಳಗಿನಮನೆ ಘಾಟಿಕಲ್ ಕೊಪ್ಪ ಭಟ್ಕಳ, ಶೇಖರ್ ರಾಣಿ ಬಂಗೇರ ಕುಟುಂಬದವರು ದೆಹಲಿ ಇವರು ವೈಯಕ್ತಿಕ ಗುರುಪಾದುಕಾ ಪೂಜೆ ಸಲ್ಲಿಸಿದರು.

 ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ, ಜಯ ವಿಕ್ರಮ, ಎಸ್ ಕೆ ಚಂದ್ರ ಸಾಗರ, ಡಯಟ್‌ನ ಹಿರಿಯ ಉಪನ್ಯಾಸಕ ಜಿ. ಎಸ್. ನಾಯ್ಕ್ ಕುಮಟಾ, ಜಿಲ್ಲಾ ಹಾಲಕ್ಕಿ ಸಮಾಜದ ಅಧ್ಯಕ್ಷರಾದ ಡಾ. ಹನುಮಂತ ಗೌಡ ಬೆಳ್ಳಂಬರ ಇವರು ಆಗಮಿಸಿ ಶ್ರೀಗಳ ದರ್ಶನ ಪಡೆದರು. ಪ್ರಭಾಕರ್ ಎನ್ ನಾಯ್ಕ್ ಕೋನಳ್ಳಿ, ಮಂಜುನಾಥ ಶಿವಪ್ಪ ನಾಯ್ಕ್ ಕೂಜಳ್ಳಿ ಗುರು ಸೇವೆ ಸಲ್ಲಿಸಿದರು. ಅನೇಕರು ಸಿಹಿ ತಿಂಡಿ ವಿತರಿಸಿದರು.

About The Author