
ಭಟ್ಕಳ : ಅರ್ಬನ್ ಕೋ-ಅಪರೇಟಿವ್ ಬ್ಯಾಂಕ್ ಬ್ಯಾಂಕ್ನ ಹಫಿಝ್ಕಾ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ಬ್ಯಾಂಕಿನ ಕ್ಯೂ-ಆರ್ ಕೋಡ್ ಬಿಡುಗಡೆ ಮಾಡಲಾಯಿತು. ಬ್ಯಾಂಕಿನ ಕ್ಯೂ-ಆರ್ ಕೋಡ್ ಬಿಡುಗಡೆ ಮಾಡಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷೆ ಮೆಹಬೂಬಿ ಪಟೇಲ್ ಅವರು ಬ್ಯಾಂಕಿನ ಗ್ರಾಹಕರಿಗೆ ನಮ್ಮ ಬ್ಯಾಂಕಿನಲ್ಲಿ ವ್ಯವಹಾರ ಮಾಡಲು ಅನುಕೂಲವಾಗುವಂತೆ ಕ್ಯೂ-ಆರ್ ಕೋಡ್ನ್ನು ಬಿಡುಗಡೆ ಮಾಡಲಾಗಿದ್ದು ಅಂಗಡಿಕಾರರು, ಸಣ್ಣಪುಟ್ಟ ವ್ಯವಹಾರಸ್ಥರಿಗೂ ಕೂಡಾ ಇದು ಅನುಕೂಲವಾಗಲಿದೆ ಎಂದರು.
ಇದೇ ಸಂದರ್ಭದಲ್ಲಿ ಬ್ಯಾಂಕಿನ ಗ್ರಾಹಕರುಗಳಾದ ಮಹಾರಾಜ ಆಪ್ಟಿಶಿಯನ್ ಮಾಲಕ ಲಕ್ಷö್ಮಣ ಮಹಾಲೆ, ಹೆಗಡೆ ಜನರಲ್ ಸ್ಟರ್ಸö್ನ ಮಾಲಕ ನಾಗೇಶ ಹೆಗಡೆ, ಸನಾ ಆಪ್ಟಿಶಿಯನ್ ಮಾಲಕ ಕೆ. ಜಬ್ಬಾರ್ ಸಾಹೇಬ್, ಸುಹೇಲ್ ಬರ್ಮಾವರ್, ಸಿವಿಲ್ ಗುತ್ತಿಗೆದಾರ ಸುರೇಶ ಪೂಜಾರಿ ಮುಂತಾದವರಿಗೆ ಸಾಂಕೇತಿಕವಾಗಿ ಕ್ಯೂ-ಆರ್ ಕೋಡ್ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬ್ಯಾಂಕಿನ ಉಪಾಧ್ಯಕ್ಷ ತುಳಸಿದಾಸ ಮೊಗೇರ, ನಿರ್ದೇಶಕರುಗಳಾದ ಶ್ರೀಧರ ನಾಯ್ಕ, ಎಂ.ಎA.ಲೀಮಾ, ಬೀನಾ ವೈದ್ಯ, ಶ್ರೀಕಾಂತ ನಾಯ್ಕ ಮುಂತಾದವರು ಮಾತನಾಡಿದರು. ವೇದಿಕೆಯಲ್ಲಿ ನಿರ್ದೇಶಕರುಗಳಾದ ಸುರೇಶ ಪೂಜಾರಿ, ವಸಂತ ದೇವಡಿಗ, ರಮೇಶ ನಾಯ್ಕ, ರಾಮ ಟಿ. ನಾಯ್ಕ, ಗಣಪತಿ ಮೊಗೇರ, ಸಂತೋಷ ಗೊಂಡ, ಬೋರ್ಡ ಆಫ್ ಮೆನೇಜ್ಮೆಂಟ್ ಸದಸ್ಯರುಗಳಾದ ಎಸ್.ಎಂ.ಖಾನ್, ವಿ.ಬಿ. ಭಟ್ಕಳಕರ್, ಪ್ರಧಾನ ವ್ಯವಸ್ಥಾಪಕ ಪ್ರಶಾಂತ ಮುರ್ಡೇಶ್ವರ, ಮುಂತಾದವರು ಉಪಸ್ಥಿತರಿದ್ದರು.

ಉತ್ತಮ ಕಾರ್ಯನಿರ್ವಹಣೆಗಾಗಿ ಬ್ಯಾಂಕಿನ ಮುರ್ಡೇಶ್ವರ ಶಾಖೆಯ ಚಿನ್ನ ಪರೀಕ್ಷಕ ನಾಗೇಶ ಶೇಟ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಧಾನ ವ್ಯವಸ್ಥಾಪಕ ಪ್ರಶಾಂತ ಮುರ್ಡೇಶ್ವರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಐ.ಟಿ. ವಿಭಾಗದ ಮುಖ್ಯಸ್ಥ ಶ್ರೀಧರ ಉಡುಪ ಮಾತನಾಡಿ ಕ್ಯೂ-ಆರ್ ಕೋಡ್ ಕುರಿತು ಮಾಹಿತಿ ನೀಡಿದರು. ಬ್ಯಾಂಕಿನ ಹಿರಿಯ ಸಹಾಯಕ ಬಾಲಕೃಷ್ಣ ಕಾಮತ್ ನಿರೂಪಿಸಿದರು. ವ್ಯವಸ್ಥಾಪಕ ಪಾಂಡುರAಗ ಸಾನು ವಂದಿಸಿದರು.
More Stories
‘ಅಯ್ಯಪ್ಪಸ್ವಾಮಿ ರೂಪದ ಗಣಪ’ ಹಾಗೂ ‘ಆಪರೇಷನ್ ಸಿಂಧೂರ್ ಥೀಮ್’
ಮುಟ್ಟಳಿ ಮೂಡಭಟ್ಕಳ ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿಯಿಂದ ವೆಂಕಟರಮಣ ನಾಯ್ಕರಿಗೆ ಸನ್ಮಾನ
ಕಾಳಜಿ ಕೇಂದ್ರಕ್ಕೆ ಬೇಟಿ ನೀಡಿದ ಕಾಂಗ್ರೇಸ್ ಮುಖಂಡರಾದ ಮಂಜುನಾಥ ನಾಯ್ಕ