
ಹೊನ್ನಾವರ: ವಿಶ್ವ ಛಾಯಾಚಿತ್ರ ದಿನದ ಅಂಗವಾಗಿ ಪಟ್ಟಣದ ನ್ಯೂ ಇಂಗ್ಲೀಷ್ ಶಾಲೆಯ ನಿವೃತ್ತ ಚಿತ್ರಕಲಾ ಶಿಕ್ಷಕರಾದ ಭವಾನಿ ಶಂಕರ ಹೊನ್ನಾವರ ( ಬಿ ಜೆ ನಾಯಕ್ ) ರವರು ಸೆರೆಹಿಡಿದ ಛಾಯಾ ಚಿತ್ರಗಳನ್ನು ಶ್ರೀ ಶ್ರೀ ಬ್ರಹ್ಮಾನಂದ ಶ್ರೀಗಳ ಚಾತುರ್ಮಾಸ ವೇದಿಕೆಯಲ್ಲಿ ಶ್ರೀಗಳ ಅಮೃತ ಹಸ್ತದಿಂದ ಅನಾವರಣಗೊಂಡಿತು. ಶ್ರೀಗಳು ಬೃಹತ್ ಪರದೆಯ ಮೇಲೆ ಕಂಪ್ಯೂಟರ್ ಗುಂಡಿ ಒತ್ತುವದರ ಮೂಲಕ ವಿಶ್ವ ಛಾಯಾಚಿತ್ರ ದಿನಾಚರಣೆಗೆ ಚಾಲನೆ ನೀಡಿದರು. ಇದೆ ವೇದಿಕೆಯಲ್ಲಿ ಶ್ರೀಗಳ ಪ್ರವಚನದ ಅಮೃತ ನುಡಿಗಳನ್ನು ಒಳಗೊಂಡ ಛಾಯಾಚಿತ್ರವನ್ನು ಅನಾವರಣ ಗೊಳಿಸಲಾಯಿತು ಚಿತ್ರವನ್ನು ವೀಕ್ಷಿಸಿದ ಶ್ರೀಗಳು ಮೌನ ಪ್ರಸಂಸೇನೆಯನ್ನು ನೀಡಿದರು.
ಈ ಚಿತ್ರಗಳ ಪ್ರದರ್ಶನವು ನ್ಯೂ ಇಂಗ್ಲೀಷ್ ಶಾಲೆ ಹೊನ್ನಾವರ ಗಣೇಶ ಉತ್ಸವದಲ್ಲಿ ಪುನರ್ ಪ್ರದರ್ಶನ ಗೊಳ್ಳಲಿದೆ ಸೇರಿದ ಸದ್ಭಕ್ತರು ಪ್ರದರ್ಶನವನ್ನು ವಿಕ್ಷಿಸಬಹುದು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

More Stories
‘ಅಯ್ಯಪ್ಪಸ್ವಾಮಿ ರೂಪದ ಗಣಪ’ ಹಾಗೂ ‘ಆಪರೇಷನ್ ಸಿಂಧೂರ್ ಥೀಮ್’
ಮುಟ್ಟಳಿ ಮೂಡಭಟ್ಕಳ ಸಾರ್ವಜನಿಕ ಶೀ ಗಣೇಶೋತ್ಸವ ಸಮಿತಿಯಿಂದ ವೆಂಕಟರಮಣ ನಾಯ್ಕರಿಗೆ ಸನ್ಮಾನ
ಕಾಳಜಿ ಕೇಂದ್ರಕ್ಕೆ ಬೇಟಿ ನೀಡಿದ ಕಾಂಗ್ರೇಸ್ ಮುಖಂಡರಾದ ಮಂಜುನಾಥ ನಾಯ್ಕ